ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ವಿಧಾನಸಭಾ ಚುಣಾವಣೆಯಲ್ಲಿ ಬಿಜೆಪಿ ಗೆಲುವಿಗೆ ಕಾರಣರಾದ ಮಾಸ್ಟರ್ ಮೈಂಡ್ ಬಿಎಸ್‌ವೈ ಪುತ್ರ ಬಿ.ವೈ. ವಿಜಯೇಂದ್ರ ಶಿರಾದಲ್ಲಿ ನಡೆಯುವ ಉಪ ಚುಣಾವಣಾ ಪ್ರಚಾರಕ್ಕೆ ಎಂಟ್ರಿ ನೀಡಲಿದ್ದಾರೆ.
ಶಿರಾದಲ್ಲಿ ಉಪಚುಣಾವಣೆ ಘೋಷಣೆಯಾಗುವ ಮೊದಲೇ ಕ್ಷೇತ್ರದಲ್ಲಿ ಒಂದು ಬಾರಿಸುತ್ತು ಹಾಕಿ ಇತರ ಪಕ್ಷಗಳ ಮುಖಂಡರನ್ನು ವಿಜಯೇಂದ್ರ ಸೆಳೆದಿದ್ದರು. ಬಿಜೆಪಿಗೆ ವಿಜಯೇಂದ್ರ ಟ್ರಂಪ್ ಕಾಡ್ ೯ ರೀತಿಯಲ್ಲಿ ಈಗ ಅವರು ಪ್ರಚಾರಕ್ಕೆ ಧುಮುಕಲಿದ್ದಾರೆ. ಇದರಿಂದ ಶಿರಾದ ಕಮಲ ಪಾಳಯದಲ್ಲಿ ಹೊಸ ಉತ್ಸಾಹ ಮೂಡಿದಂತಾಗಿದೆ.
ವಿಜಯೇಂದ್ರ ಅವರು ಶಿರಾ ಕ್ಷೇತ್ರದ ಉಸ್ತುವಾರಿ ತಂಡದ ಸದಸ್ಯರೂ ಆಗಿದ್ದಾರೆ. ವಿಜಯೇಂದ್ರ ಪ್ರಚಾರ ತಂತ್ರದಿಂದಲೇ ಕೆ.ಆರ್. ಪೇಟೆಯಲ್ಲಿ ಕಮಲ ಅರಳಿತ್ತು. ಈಗ ಮೊಟ್ಟ ಮೊದಲ ಬಾರಿಗೆ ಶಿರಾ ಕ್ಷೇತ್ರದಲ್ಲಿ ಕಮಲ ಅರಳಿಸುವ ಪ್ರಯತ್ನದಲ್ಲಿದ್ದಾರೆ ವಿಜಯೇಂದ್ರ.
2018ರ ಚುಣಾವಣೆಯಲ್ಲಿ ಚಾಮರಾಜನಗರ ಹಾಗೂ ಮೈಸೂರಿನಲ್ಲಿನ ತಮ್ಮ ಪ್ರಚಾರದ ಮೂಲಕ ಬಿಜೆಪಿಯಲ್ಲಿ ಹೊಸ ಭರವಸೆ ಮೂಡಿಸಿದ್ದರು. ಬಿಜೆಪಿ ಗೆಲ್ಲಲು ಅಸಾಧ್ಯ ಎಂಬಂತಹ ಕೆ.ಆರ್.ಪೇಟೆ ಕ್ಷೇತ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ರೂವಾರಿಗಳಾಗಿದ್ದರು. ಇಷ್ಟು ವರ್ಷಗಳವರೆಗೆ ಶಿರಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಥವಾ ಜೆಡಿಎಸ್ ಬಿಟ್ಟು ಬೇರೆ ಪಕ್ಷ ಅಧಿಕಾರಕ್ಕೆ ಬಂದಿಲ್ಲ. ಈ ಬಾರಿಯ ಉಪ ಚುಣಾವಣೆಯಲ್ಲಾದರೂ ಬಿಜೆಪಿಯ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂಬ ಆಶಯ ಕಮಲ ಪಾಳಯದ್ದು. ಹಾಗಾಗಿಯೇ ವಿಜಯೇಂದ್ರ ಅವರನ್ನು ಪ್ರಚಾರ ಕಣಕ್ಕಿಳಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಈಗಾಗಲೇ ಬಿಜೆಪಿ ಅಭ್ಯರ್ಥಿ ಡಾ. ರಾಜೇಶ್ ಗೌಡ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ನಾಮಪತ್ರ ಸಲ್ಲಿಸಲು ಅಕ್ಟೋಬರ್ 16 ಕೊನೆಯ ದಿನಾಂಕ. ನಾಳೆಯಿಂದ ಪ್ರಚಾರ ಆರಂಭವಾಗಲಿದೆ. ವಿಜಯೇಂದ್ರ ಅವರು ಕೆಲ ದಿನಗಳ ಕಾಲ ಶಿರಾದಲ್ಲೇ ವಾಸ್ತವ್ಯ ಹೂಡಿ ಪ್ರಚಾರ ತಂತ್ರಗಳ ಬಗ್ಗೆ ಆಲೋಚಿಸಿ ಪ್ರಚಾರವನ್ನು ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.
More Stories
ತಿರುಪತಿಯಲ್ಲಿ ಕಾಲ್ತುಳಿತ: 6 ಮಂದಿ ಸಾವು, ಸಾವಿನ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ
ಅಮಿತ್ ಶಾ ಹೇಳಿಕೆ ವಿರೋಧಿಸಿ ಮೈಸೂರು-ಮಂಡ್ಯ ಬಂದ್: ವಾಹನ ಸಂಚಾರಕ್ಕೆ ಅಡಚಣೆ
ಕಾನ್ಸ್ಟೇಬಲ್ ನೇಮಕಾತಿ ದೈಹಿಕ ಪರೀಕ್ಷೆ: ಓಟದ ವೇಳೆ ಬಿದ್ದ ಯುವಕನ ದುರ್ಮರಣ