November 25, 2024

Newsnap Kannada

The World at your finger tips!

shivaramegowda

ಕಾಂಗ್ರೆಸ್ – ದಳಪತಿಗಳಿಗೆ ಸೆಡ್ಡು ಹೊಡೆದು ಪಕ್ಷೇತರನಾಗಿಯೇ ಸ್ಪರ್ಧೆ – LRS

Spread the love

ಜೆಡಿಎಸ್, ಕಾಂಗ್ರೆಸ್ ವಿರುದ್ಧ ತೊಡೆ ತಟ್ಟಿ ನಿಂತಿರುವ ಮಾಜಿ ಸಂಸದ ಎಲ್ ಆರ್ ಶಿವರಾಮೇಗೌಡ (LRS)
ಪಕ್ಷೇತರ ಆಭ್ಯರ್ಥಿಯಾಗಿ ನಾಗಮಂಗಲದಿಂದ ಸ್ಪರ್ಧೆ ಮಾಡಲು ಸಿದ್ದತೆ ಮಾಡುತ್ತಿದ್ದಾರೆ.

ರಾಜ್ಯ ವಿಧಾನ ಸಭೆಯ ಚುನಾವಣೆಗೆ ಇನ್ನೂ ಒಂದು ವರ್ಷ ಇರುವಾಗಲೇ JDSನಿಂದ ಉಚ್ಚಾಟನೆಗೊಂಡ ಶಿವರಾಮೇಗೌಡ ರೆಬೆಲ್ ಆಗಿ ಸ್ಪರ್ಧೆ ಮಾಡಿ ಬದ್ದ ಎದುರಾಳಿಗಳಾದ ಚಲುವರಾಯಸ್ವಾಮಿ ಹಾಗೂ ಸುರೇಶ್ ಗೌಡರ ವಿರುದ್ದ ಹೋರಾಟ ಮಾಡುವ ನಿರ್ಧಾರ ಮಾಡಿದ್ದಾರೆ.

ಈಗಾಗಲೇ ನಾಗಮಂಗಲ ಕ್ಷೇತ್ರದಲ್ಲಿ ನಿತ್ಯ ಪ್ರವಾಸ ಮಾಡುವ ಮೂಲಕ ಪ್ರಚಾರವನ್ನು ಶಿವರಾಮೇಗೌಡರು ಆರಂಭಿಸಿದ್ದಾರೆ. ನಾಗಮಂಗಲದಲ್ಲೇ ವಾಸ್ತವ್ಯಕ್ಕಾಗಿ ಹೊಸದಾದ ಮನೆ ನಿರ್ಮಾಣ ಕ್ಕೆ ಮುಂದಾದ ಶಿವರಾಮೇಗೌಡರು ಭೂಮಿ ಪೂಜೆ ಕಾರ್ಯ ನೆರವೇರಿಸಿ ಸ್ಪರ್ಧೆ ಖಚಿತ ಮಾಡಿದ್ದಾರೆ.

ತಾಲೂಕಿನ ಹಳ್ಳಿ ಹಳ್ಳಿಗಳಲ್ಲೂ ಬೆಂಬಲಿಗರನ್ನು ಸಂಘಟಿಸಿ ದಳಪತಿಗಳಿಗೆ ಮಾತ್ರವಲ್ಲ ಸ್ವಾಮಿಗೌಡ ತಂಡಕ್ಕೂ ಶಾಕ್ ನೀಡುವ ಚಿಂತನೆ ಮಾಡಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡಿದ ಶಿವರಾಮೇಗೌಡ ನಂಗೆ
ಚಲುವರಾಯಸ್ವಾಮಿ, ಸುರೇಶ್ ಗೌಡ ರಾಜಕೀಯ ಬದ್ಧ ವೈರಿಗಳು.
ಏಕಕಾಲದಲ್ಲಿ ಬದ್ಧ ವೈರಿಗಳನ್ನು ಸೋಲಿಸುವ ಅವಕಾಶ ನನಗೀಗ ಬಂದಿದೆ ಎಂದರು.

ನಾನು ಈಗ ಫ್ರೀ ಬರ್ಡ್, ನನಗೆ ಯಾವುದೇ ಪಕ್ಷ ಸೂಟ್ ಆಗಲ್ಲ ಅಂತ ಜನರೇ ಹೇಳುತ್ತಾರೆ
ಪ್ರತಿ ಹಳ್ಳಿಯಲ್ಲೂ ಕಾಂಗ್ರೆಸ್-ಜೆಡಿಎಸ್ ಎರಡು ಪಕ್ಷದ ಕಾರ್ಯಕರ್ತರೂ ಬೆಂಬಲ ಕೊಡುತ್ತಿದ್ದಾರೆ ಹೀಗಾಗಿ
ಪಕ್ಷೇತರನಾಗಿ ಸ್ಪರ್ಧೆ ಮಾಡುವುದು ನಿರ್ಧಾರವಾಗಿದೆ ಎಂದರು.

ನನ್ನ ಸ್ಪರ್ಧೆ ಕೆಲವರಿಗೆ ಲಾಭ ಆಗಬಹುದು ಎಂದು ತಿಳಿದಿದ್ದಾರೆ. ನಾನು ಚೆಲುವರಾಯಸ್ವಾಮಿ, ಸುರೇಶ್ ಗೌಡ ಇಬ್ಬರ ಮತವನ್ನು ಪಡೆಯುತ್ತೇನೆ. ಅದು ಮಾತ್ರ ಶತಸಿದ್ದ. ಪ್ರತಿ ಊರಲ್ಲೂ ಮೂರು ಗುಂಪಾಗಿ ರಚಿಸುತ್ತೇನೆ.
ಅವರಿಬ್ಬರಂತೆ ನನ್ನ ಗುಂಪು ಇರುವಂತೆ ಮಾಡುತ್ತೇನೆ ಎಂದು ಮುಂದಿನ ಲೆಕ್ಕಾಚಾರದ ಎಳೆಯನ್ನು ಬಿಚ್ಚಿಟ್ಟರು.

ಅವರಿಬ್ಬರ ಗುಂಪು ಇಲ್ಲದಿದ್ದರೂ ನನ್ನ ಪರವಾದ ಗುಂಪು ಹಳ್ಳಿಗಳಲ್ಲಿ ಇರಲೆಬೇಕು .ಕ್ಷೇತ್ರ ಬಿಟ್ಟು ಹೋಗಲ್ಲ ನಾನು ಅದೇ ಕಾರಣಕ್ಕಾಗಿ ಮನೆ ಮಾಡುತ್ತಿರುವುದು. ಚುನಾವಣೆ ಮುಗಿಯುವವರೆಗೂ ನಿದ್ದೆ ಮಾಡುವುದಿಲ್ಲ, ಹೋರಾಟ ನಿರಂತರವಾಗಿ ಮಾಡುವುದಾಗಿ ಪ್ರಕಟಿಸಿದರು.

Copyright © All rights reserved Newsnap | Newsever by AF themes.
error: Content is protected !!