December 25, 2024

Newsnap Kannada

The World at your finger tips!

bike ulta

ಚಾಮರಾಜನಗರದಲ್ಲಿ ಬೈಕ್ ನಲ್ಲಿ ಉಲ್ಟಾ ಕುಳಿತು ರೋಮ್ಯಾನ್ಸ್ ಮಾಡಿದ ಪ್ರಿಯತಮೆ !

Spread the love

ಪ್ರೀತಿಯಲ್ಲಿ ಬಿದ್ದ ಪ್ರೇಮಿಗಳಿಗೆ ಜಗವೆಲ್ಲಾ ಕುರುಡು . ಚಾಮರಾಜನಗರದಲ್ಲಿ ಪ್ರೇಮಿಗಳಿಬ್ಬರು ಹಾಡಹಗಲೇ ರಸ್ತೆಯಲ್ಲಿ ಬೈಕ್ ಮೇಲೆ ಕುಳಿತು ರೋಮ್ಯಾನ್ಸ್ ಮಾಡಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಚಾಮರಾಜನಗರದ ಗುಂಡ್ಲುಪೇಟೆ ರಸ್ತೆಯಲ್ಲಿ ಪ್ರೇಮಿಗಳಿಬ್ಬರು ನಡುರಸ್ತೆಯಲ್ಲಿ ಬೈಕ್ ಮೇಲೆ ರೈಡ್ ಹೋಗುತ್ತಾ, ಸಾರ್ವಜನಿಕವಾಗಿ ಲಿಪ್‍ಲಾಕ್ ಮಾಡಿದ್ದಾರೆ.

ಪಲ್ಸರ್ ಬೈಕಿನ ಪೆಟ್ರೋಲ್ ಟ್ಯಾಂಕ್ ಮೇಲೆ ಉಲ್ಟಾ ಕುಳಿತ ಯುವತಿ ತನ್ನ ಪ್ರಿಯಕರನನ್ನು ಚುಂಬಿಸಿದ್ದಾಳೆ. ಜನರು, ಬಸ್ಸು, ಲಾರಿಗಳ ಸಂಚಾರದ ಪರಿವೇ ಇಲ್ಲದೇ ಹೆದ್ದಾರಿಯಲ್ಲಿ ಪ್ರೇಮಿಗಳು ಹುಚ್ಚಾಟ ನಡೆಸಿರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ.

ಬೈಕ್ ಚಾಮರಾಜನಗರದ ನೋಂದಣಿ ಸಂಖ್ಯೆ ಇದೆ಼ ಕೆಲ ಸವಾರರು ಇಬರಿಬ್ಬರ ಆಟವನ್ನು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಆದರೆ ಈ ದೃಶ್ಯ ಕೆಲವರಿಗೆ ಮುಜುಗರವನ್ನುಂಟು ಮಾಡಿದೆ.

Copyright © All rights reserved Newsnap | Newsever by AF themes.
error: Content is protected !!