December 23, 2024

Newsnap Kannada

The World at your finger tips!

coconut water

ನಿತ್ಯ ಸಂಜೀವಿನಿ ಎಳನೀರು(Coconut Water)

Spread the love

ಕಲ್ಪವೃಕ್ಷ ಎಂದೇ ಕರೆಯುವ ತೆಂಗಿನಮರದ ಎಳನೀರು ಅಮೃತ ಸಮಾನವಾದ ಪಾನೀಯವಾಗಿದೆ,ದೈಹಿಕ ಚಟುವಟಿಕೆಗಳಿಗೆ ಈ ನೀರು ಅತ್ಯಂತ ಸಮರ್ಪಕ ಪ್ರಮಾಣದಲ್ಲಿ ಪೋಷಕಾಂಶಗಳನ್ನು ನೀಡುವುದರಿಂದ ಶರೀರ ತನ್ನ ಚಟುವಟಿಕೆಗಳನ್ನು ಹೆಚ್ಚು ಸಮಯ ನಿರ್ವಹಿಸಬಹುದು. ಹೆಚ್ಚಿನ ದೈಹಿಕ ಶ್ರಮವುಳ್ಳ ಕೆಲಸಕ್ಕೆ ಪ್ರತಿದಿನ ಒಂದಾದರೂ ಎಳನೀರು ಕುಡಿಯುವುದು ಆರೋಗ್ಯಕ್ಕೆ ಉತ್ತಮವಾಗಿದೆ.

ಎಳೆನೀರು ಕುಡಿಯುವುದರಿಂದ ದೇಹಕ್ಕೆ ಲಾಭ ದೇಶದ ಬೆನ್ನೆಲುಬಾಗಿ ನಿಂತಿರುವ ರೈತರಿಗೆ ಲಾಭ‌‌. ನೀರಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ವಿಟಮಿನ್ ಸಿಗುತ್ತದೆ ಮತ್ತು ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣವನ್ನು ನಿಗ್ರಹಿಸುತ್ತದೆ ಹಾಗಾಗಿ ನಮ್ಮ ಹೃದಯದ ಆರೋಗ್ಯಕ್ಕೆ ಎಳೆನೀರು ತುಂಬಾ ಅನುಕೂಲಕರ.

ಎಳನೀರಿನಲ್ಲಿ ಹಲವಾರು ರೀತಿಯ ಪೋಷಕಾಂಶಗಳು ಹಾಗೂ ವಿವಿಧ ಖನಿಜ, ಲವಣಾಂಶಗಳಿದ್ದು , ಇದು ಆರೋಗ್ಯ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುವುದು.ಎಳನೀರಿನಲ್ಲಿ ಕಡಿಮೆ ಕ್ಯಾಲರಿ ಇದ್ದು, ಖನಿಜಾಂಶಗಳಾಗಿರುವಂತಹ ಪೊಟಾಶಿಯಂ ಕೂಡ ಇದರಲ್ಲಿದೆ.

ಎಳನೀರು ಟೆಟ್ರಾ ಪ್ಯಾಕ್ ಗಳಲ್ಲಿಯೂ ಸುಲಭವಾಗಿ ಲಭ್ಯವಿದೆ ಮತ್ತು ಇದು ನೀಡುವ ಆರೋಗ್ಯ ಪ್ರಯೋಜನಗಳಿಗಾಗಿ ಅನೇಕರು ಇದನ್ನು ವ್ಯಾಪಕವಾಗಿ ಸೇವಿಸುತ್ತಾರೆ. ಈ ಪಾನೀಯವು ಶಕ್ತಿಯುತವಾದ ಸ್ಪೊರ್ಟ್ಸ್ ಡ್ರಿಂಕ್ ಆಗಿಯೂ ಕಾರ್ಯನಿರ್ವಹಿಸುತ್ತದೆ, ಅದು ತ್ವರಿತ ಶಕ್ತಿಯನ್ನು ನೀಡುತ್ತದೆ.

ಎಳನೀರನ್ನು ನೇರವಾಗಿ ಕುಡಿಯುವುದರಿಂದ ಅತಿ ಹೆಚ್ಚು ಪ್ರಯೋಜನಕಾರಿಯಾಗಿದೆ, ಏಕೆಂದರೆ ಇದು ಸಾವಯವ ಮತ್ತು ಸಂರಕ್ಷಕ-ಮುಕ್ತವಾಗಿದೆ.

ಎಳನೀರಿನಲ್ಲಿ ಕಂಡುಬರುವ ಪೋಷಕಾಂಶಗಳ ಪಟ್ಟಿ ಇಲ್ಲಿದೆ:

ಎಳನೀರನ್ನು ಖಾಲಿ ಹೊಟ್ಟೆಯಲ್ಲಿ ಮುಂಜಾನೆ ಸೇವಿಸುವುದರಿಂದ ನಿಮಗೆ ಒಂದಲ್ಲ ಒಂದು ರೀತಿಯಲ್ಲಿ ಸಹಾಯವಾಗುತ್ತದೆ. ಇದು ಲಾರಿಕ್ ಆಮ್ಲವನ್ನು ಹೊಂದಿರುತ್ತದೆ ಅದು ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

  1. ನಿರ್ಜಲೀಕರಣ ಸಮಸ್ಯೆ ತಡೆಯುತ್ತದೆ
    ಅತಿಸಾರದಿಂದ ದೇಹ ಅತಿ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಕಳೆದುಕೊಳ್ಳುತ್ತದೆ. ಪರಿಣಾಮವಾಗಿ ನೀರಿನ ಕೊರತೆಯಿಂದ ದೇಹ ಸೊರಗುತ್ತದೆ. ಕಾಲರಾ, ಬೇಧಿ, ಹೊಟ್ಟೆಯ ಫ್ಲೂ (stomach flu) ಮೊದಲಾದ ತೊಂದರೆಗಳ ಕಾರಣ ನೀರು ಕಳೆದುಕೊಂಡಿದ್ದರೂ ಎಳನೀರು ಈ ಕೊರತೆಯನ್ನು ಸಮರ್ಥವಾಗಿ ಪೂರೈಸುತ್ತದೆ.
  2. ಚರ್ಮಕ್ಕೆ ತೇವಾಂಶ ನೀಡುತ್ತದೆ
    ಬಿಸಿಲಿನಲ್ಲಿ ಚರ್ಮ ಹೆಚ್ಚಿನ ನೀರನ್ನು ಕಳೆದುಕೊಳ್ಳುವುದರಿಂದ ಒಣಗುತ್ತದೆ. ಚಳಿಗಾಲದಲ್ಲಿ ಗಾಳಿಯಲ್ಲಿಯೇ ತೇವಾಂಶ ಇಲ್ಲದಿರುವ ಕಾರಣ ಚರ್ಮ ಒಣಗುತ್ತದೆ. ಈ ಎರಡೂ ಪರಿಸ್ಥಿತಿಯಲ್ಲಿ ಎಳನೀರು ಚರ್ಮಕ್ಕೆ ಉತ್ತಮ ಆರೈಕೆ ನೀಡುತ್ತದೆ. ಎಳನೀರನ್ನು ಹತ್ತಿಯಲ್ಲಿ ಮುಳುಗಿಸಿ ಚರ್ಮಕ್ಕೆ ಹಚ್ಚುವುದರಿಂದ ಚರ್ಮ ಕಳೆದುಕೊಂಡಿದ್ದ ತೇವಾಂಶವನ್ನು ಮತ್ತೆ ಪಡೆಯಲು ಸಾಧ್ಯವಾಗುತ್ತದೆ.
  3. ತೂಕ ಇಳಿಕೆ ಎಳನೀರು ಹೆಚ್ಚುವರಿ ತೂಕ ಇಳಿಕೆ ಮಾಡಲು ಸಹಕಾರಿ, ಯಾವುದೇ ಹಣ್ಣಿನ ರಸಕ್ಕೆ ಹೋಲಿಸಿದರೆ ಎಳನೀರಿನಲ್ಲಿ ಹೆಚ್ಚಿನ ಖನಿಜಗಳು ಇರುವುದರಿಂದ ಇತರ ಹಣ್ಣಿನ ರಸವನ್ನು ಸೇವಿಸುವ ಬದಲು ಎಳನೀರನ್ನು ಸೇವಿಸಿ.
  4. ಎಳನೀರು ಕೇವಲ ಕ್ಯಾಲೊರಿಗಳನ್ನು ಕಡಿಮೆ ಮಾಡುವುದಿಲ್ಲ ಆದರೆ ಇತರ ಹಣ್ಣಿನ ರಸಗಳಿಗೆ ಹೋಲಿಸಿದರೆ ಕಡಿಮೆ ಸಕ್ಕರೆಯನ್ನು ಹೊಂದಿರುತ್ತದೆ. ಆದುದರಿಂದ ಹೆಚ್ಚಿನ ಸಕ್ಕರೆ ಅಂಶ ಆರೋಗ್ಯಕ್ಕೆ ಸೇರದೆ, ನೀವು ಆರೋಗ್ಯದಿಂದ ಇರಲು ಸಹಾಯವಾಗುತ್ತದೆ.
  5. ಮೂತ್ರಪಿಂಡಗಳಲ್ಲಿರುವ ಕಲ್ಲುಗಳನ್ನು ಕರಗಿಸುತ್ತದೆ ಮೂತ್ರಪಿಂಡಗಳಲ್ಲಿರುವ ಕಲ್ಲುಗಳನ್ನು ಕರಗಿಸುತ್ತದೆ ಒಂದು ವೇಳೆ ಯೂರಿಕ್ ಆಮ್ಲ ಅಥವಾ ಸಿಸ್ಟೈನ್ (uric acid or cystine)ಎಂಬ ಲವಣದಿಂದ ಮೂತ್ರದಲ್ಲಿ ಕಲ್ಲು ಉಂಟಾಗಿದ್ದರೆ ಅದಕ್ಕೆ ಎಳನೀರಿಗಿಂತ ಉತ್ತಮವಾದ ಆಹಾರ ಇನ್ನೊಂದಿಲ್ಲ. ಏಕೆಂದರೆ ಎಳನೀರಿನಲ್ಲಿರುವ ಪೊಟ್ಯಾಶಿಯಂ (ಪೊಟ್ಯಾಶಿಯಂ ಸಿಟ್ರೇಟ್ ರೂಪದಲ್ಲಿ) ಈ ಲವಣಗಳನ್ನು ಕರಗಿಸಿಕೊಂಡು ಮೂತ್ರಪಿಂಡಗಳನ್ನು ಕಲ್ಲುಗಳಿಂದ ಮುಕ್ತಿಗೊಳಿಸುತ್ತದೆ.

ಮಧುಮೇಹಿಗಳು ಎಳನೀರು ಸೇವಿಸಬೇಕೇ ಅಥವಾ ಬೇಡವೇ

ಎಳನೀರಿನಲ್ಲಿ ಮೆಗ್ನೀಷಿಯಂ ಪ್ರಮಾಣ ಹೆಚ್ಚಾಗಿರುತ್ತದೆ ಸಕ್ಕರೆ ಕಾಯಿಲೆಗೆ ಎಳೆ ನೀರು ರಾಮಬಾಣ ಇದು ದೇಹದಲ್ಲಿ ಇನ್ಸುಲಿನ್ ಪ್ರಮಾಣ ಹೆಚ್ಚುತ್ತಿದೆ ಜೊತೆಗೆ ಸಕ್ಕರೆ ಪ್ರಮಾಣ ಕಡಿಮೆ ಮಾಡುತ್ತದೆ ಮತ್ತು ಬ್ಲಡ್ ಪ್ರೆಶರ್ ಕಡಿಮೆ ಆಗುತ್ತದೆ ಅಷ್ಟೇ ಅಲ್ಲದೇ ರಕ್ತ ಹೆಪ್ಪುಗಟ್ಟುವುದು ತಪ್ಪಿಸುತ್ತದೆ.

ಮಧುಮೇಹ ರೋಗಿಗಳು ಎಳನೀರನ್ನು ಕುಡಿಯಬಹುದು ಏಕೆಂದರೆ ಇದು ಕಡಿಮೆ ಜಿಐ ಮತ್ತು ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಮಧುಮೇಹವನ್ನು ನಿಯಂತ್ರಿಸುತ್ತದೆ ಎಳನೀರಿನಲ್ಲಿ ಸಕ್ಕರೆ ಕಡಿಮೆ ಪ್ರಮಾಣದಲ್ಲಿರುವುದರಿಂದ ಮಧುಮೇಹಿಗಳೂ (ವೈದ್ಯರ ಸಲಹೆ ಮೇರೆಗೆ) ನಿಗದಿತ ಪ್ರಮಾಣದಲ್ಲಿ ಎಳನೀರು ಸೇವಿಸಬಹುದು. ಇದರಿಂದ ರಕ್ತಸಂಚಾರ ಉತ್ತಮಗೊಳ್ಳುವುದರಿಂದ ನಿಧಾನಕ್ಕೆ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ.

ಮಧುಮೇಹದ ಆಹಾರಕ್ರಮಕ್ಕೆ ಬಂದಾಗ ಗ್ಲೈಸೆಮಿಕ್ ಸೂಚ್ಯಂಕವು ನಿರ್ಣಾಯಕ ಅಂಶವಾಗಿದೆ. ಕಡಿಮೆ GI ಹೊಂದಿರುವ ಯಾವುದಾದರೂ ಮಧುಮೇಹಕ್ಕೆ ಒಳ್ಳೆಯದು ಏಕೆಂದರೆ ಅವು ಕಾರ್ಬೋಹೈಡ್ರೇಟ್‌ಗಳನ್ನು ಗ್ಲೂಕೋಸ್‌ಗೆ ವೇಗವಾಗಿ ಪರಿವರ್ತಿಸುವುದರಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಹೆಚ್ಚಿಸುವುದಿಲ್ಲ. ಕಡಿಮೆ GI 55 ಕ್ಕಿಂತ ಕಡಿಮೆಯಾಗಿದೆ ಮತ್ತು ತೆಂಗಿನ ನೀರಿನ ಗ್ಲೈಸೆಮಿಕ್ ಸೂಚ್ಯಂಕವು 54 ಆಗಿದೆ ಎಂದರೆ ಅದು ಕಡಿಮೆ GI ಹೊಂದಿದೆ.

ಎಳನೀರಿನಲ್ಲಿ ವಿವಿಧ ಪೌಷ್ಠಿಕ ಆಹಾರಗಳಿದ್ದು ದೇಹಕ್ಕೆ ದಿನಕ್ಕೆ ಅಗತ್ಯವಾದ ಶಕ್ತಿಯನ್ನು ನೀಡುತ್ತದೆ. ಇದರಲ್ಲಿ ಕಡಿಮೆ ಪ್ರಮಾಣದಲ್ಲಿ ಸಕ್ಕರೆ ಮತ್ತು ಸೋಡಿಯಂ ಇದ್ದು ಹೆಚ್ಚಿನ ಪ್ರಮಾಣದಲ್ಲಿ ಪೊಟ್ಯಾಶಿಯಂ, ಕ್ಯಾಲ್ಸಿಯಂ ಮತ್ತು ಕ್ಲೋರೈಡ್ ಇವೆ.ಈ ಪ್ರಮಾಣದಲ್ಲಿರುವಾಗ ದೇಹಕ್ಕೆ ಶಕ್ತಿ ಒಮ್ಮೆಲೇ ಬಿಡುಗಡೆಯಾಗದೇ ನಿಧಾನಕ್ಕೆ ಶಕ್ತಿ ಉಡುಗದಂತೆ ಪೂರೈಸುತ್ತಾ ಹೋಗುತ್ತದೆ. ಇದೇ ಕಾರಣದಿಂದ ದಿನ ಪೂರ್ತಿ ದೈಹಿಕ ಕೆಲಸವನ್ನು ಹೆಚ್ಚಿನ ಆಯಾಸವಿಲ್ಲದೇ ನಿರ್ವಹಿಸಲು ಸಾಧ್ಯವಾಗುತ್ತದೆ.

Copyright © All rights reserved Newsnap | Newsever by AF themes.
error: Content is protected !!