December 26, 2024

Newsnap Kannada

The World at your finger tips!

ರಘುಪತಿ ಭಟ್

ಹಿಂದೂ, ಮುಸ್ಲಿಮರ ಮಧ್ಯೆ ಮತ-ಭೇದ ಪ್ರಾರಂಭಕ್ಕೆ ಈ 6 ವಿದ್ಯಾರ್ಥಿನಿಯರೇ ಕಾರಣ: ರಘುಪತಿ ಭಟ್

Spread the love

ಹಿಂದೂ ಮುಸ್ಲಿಮರ ಮಧ್ಯೆ ಮತ ಭೇದ ಪ್ರಾರಂಭವಾಗುವುದಕ್ಕೆ ಈ 6 ಮಕ್ಕಳು ಹಾಗೂ ಅವರ ಪೋಷಕರೇ ಕಾರಣ ಎಂದು ಶಾಸಕ ರಘುಪತಿ ಭಟ್ ಹೇಳಿದರು

ಸುದ್ದಿಗಾರರ. ಜೊತೆ ಮಾತನಾಡಿದ ಭಟ್ ಹೆಣ್ಣು ಮಕ್ಕಳು ನಮ್ಮ ಮಾತು ಕೇಳಿದ್ದರೆ ಈವರೆಗೂ ಬರುತ್ತಿಲಿಲ್ಲ. ಈ 6 ಮಕ್ಕಳಿಗೆ ಧರ್ಮ ಇದೆ, ನಮಗೆ ಧರ್ಮ ಬೇಡವಾ? ನಮಗೂ ಧರ್ಮ ಇದೆ,
ಎಂದರು

ನಾವು ಹಲಾಲ್ ತಿನ್ನಲ್ಲ. ನಾವು ಕಾನೂನು ಪ್ರಕಾರ ಜಾತ್ರೆಗಳಲ್ಲಿ ವ್ಯಾಪಾರ ಮಾಡಲು ಬಿಡಲ್ಲ. ಹಿಂದೂ ಮುಸ್ಲಿಮರ ಮಧ್ಯೆ ಮತ ಭೇದ ಪ್ರಾರಂಭ ಆಗುವುದಕ್ಕೆ ಈ 6 ಮಕ್ಕಳು ಹಾಗೂ ಅವರ ಪೋಷಕರೇ ಕಾರಣ. ಈ 6 ಹುಡುಗಿಯರನ್ನು ನಿಯಂತ್ರಣ ಮಾಡಿದೇ ಸಂಘಟನೆಗಳು ಅವರಿಗೆ ಸಹಕಾರ ನೀಡಿತು ಎಂದು ಕಿಡಿಕಾರಿದ್ದಾರೆ.

ಯಾವುದೇ ಧರ್ಮ ಆಗಲಿ ಅವರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಬಂದಾಗ, ಇನ್ನೊಂದು ಧರ್ಮದವರು ಅದನ್ನು ಅತಿಯಾಗಿ ಮಾಡಿದಾಗ ಆಕ್ರೋಶಕ್ಕೆ ಕಾರಣವಾಗುತ್ತದೆ. ಇದು ಯಾರೂ ಸ್ಪ್ರೆಡ್ ಮಾಡಿದ್ದಲ್ಲ, ಇವರಿಗೆ ಮೆದುಳು ಇದಿದ್ದರೆ ಹೀಗೆ ಮಾಡುತ್ತಿರಲಿಲ್ಲ. ಅವರ ಮೆದುಳನ್ನು ಆ ಮತೀಯ ಸಂಘಟನೆ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (ಸಿಎಫ್‍ಐ) ನಿಯಂತ್ರಣ ಮಾಡುವುದಕ್ಕೆ ಶುರುಮಾಡಿತು. ಅದರಿಂದ ಸಮಸ್ಯೆಯಾಗಿದೆ , ದೇಶದ್ರೋಹ ಸಂಘಟನೆಗಳೊಂದಿಗೆ ಸಂಪರ್ಕ ಇರುವವರು ನಿಯಂತ್ರಣ ಮಾಡಿದ್ದಕ್ಕೆ, ಮೆದುಳು ಅವರ ನಿಯಂತ್ರಣ ಇಲ್ಲದ್ದಕ್ಕೆ ಈ ಸಮಸ್ಯೆಯಾಯಿತು ಎಂದು ಹೇಳಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!