December 27, 2024

Newsnap Kannada

The World at your finger tips!

santhosh patil

ಗುತ್ತಿಗೆದಾರ ಪಾಟೀಲ್ ಆತ್ಮಹತ್ಯೆಗೆ ಸಚಿವ ಸ್ಥಾನವೂ ಬಲಿ‌‌: ನಾಳೆ ‌ಸಚಿವ ಈಶ್ವರಪ್ಪ ರಾಜೀನಾಮೆ

Spread the love

ಕೊನೆಗೂ ರಾಜ್ಯ ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ನಾಳೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದರು.

ಶಿವಮೊಗ್ಗದಲ್ಲಿ ತುರ್ತು ಪತ್ರಿಕಾಗೋಷ್ಠಿಯಲ್ಲಿ ಈ ಘೋಷಣೆ ಮಾಡಿದ ಸಚಿವ ಈಶ್ವರಪ್ಪ ನಾಳೆ ಮುಖ್ಯಮಂತ್ರಿ ಗಳನ್ನು ಭೇಟಿ ಮಾಡಿ ರಾಜೀನಾಮೆ ಸಲ್ಲಿಸುವುದಾಗಿ ತಿಳಿಸಿದರು.

ಬೆಳಗಾವಿ ಹಿಂಡಗಾಲ ಗುತ್ತಿಗಾರರ ಸಂತೋಷ. ಪಾಟೀಲ್ ಸಚಿವ ಈಶ್ವರಪ್ಪ ಶೇ 40 ರಷ್ಟು ಕಮೀಷನ್ ಕೇಳಿದ್ದರು. 4 ಕೋಟಿ ರು ಕಾಮಗಾರಿ ಮಾಡಿ ಬಿಲ್ ಗಾಗಿ ಸತಾಯಿಸಿದರು ಎಂದು ಆರೋಪಿಸಿ ಏ. 12 ರಂದು ಆತ್ಮಹತ್ಯೆ ಮಾಡಿಕೊಂಡರು.

ಈ ಪ್ರಕರಣ ಕುರಿತಂತೆ ಸಚಿವ ಈಶ್ವರಪ್ಪ ರಾಜೀನಾಮೆ ನೀಡುವಂತೆ ವಿರೋಧ ಪಕ್ಷಗಳು ಪಟ್ಟು ಹಿಡಿದು ವಿವಿಧ ರೀತಿಯಲ್ಲಿ ಪ್ರತಿಭಟನೆ ನಡೆಸಿದ ಬೆನ್ನಲ್ಲೇ ಈಶ್ವರಪ್ಪ ರಾಜೀನಾಮೆ ನೀಡುವುದಾಗಿ ಘೋಷಿಸಿದರು.

Copyright © All rights reserved Newsnap | Newsever by AF themes.
error: Content is protected !!