ಶ್ರೀರಾಮನವಮಿ ಹಿನ್ನೆಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ `ಲವ್ ಕೇಸರಿ’ ಎಂಬ ಟ್ರೆಂಡ್ ಸೃಷ್ಟಿಸಲು ಶ್ರೀರಾಮಸೇನೆ ಕರೆ ನೀಡಿದೆ.
ರಾಯಚೂರು ನಗರದಲ್ಲಿ ನಡೆದಿದ್ದ ಕಾರ್ಯಕ್ರಮದ ವೇಳೆ ಶ್ರೀರಾಮಸೇನೆ ರಾಯಚೂರು ಜಿಲ್ಲಾ ಸಂಚಾಲಕ ರಾಜಾಚಂದ್ರ ರಾಮನಗೌಡ `ಲವ್ ಜಿಹಾದ್ ಬದಲು, ಲವ್ ಕೇಸರಿ ಮಾಡಿ’ ಎಂದು ಕರೆ ನೀಡಿದ್ದಾರೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಯಚೂರು ಜಿಲ್ಲೆಯಲ್ಲಿ ಇನ್ನುಮುಂದೆ ಯಾವುದೇ ಲವ್ ಜಿಹಾದ್ ಪ್ರಕರಣ ಬರಬಾರದು. ಹಾಗಾಗಿ ಲವ್ ಕೇಸರಿ ಮಾಡಿ, ನೀವು ಮಾಡಲೇಬೇಕು. ಲವ್ ಜಿಹಾದ್ ಹೆಸರಿನಲ್ಲಿ ನಮ್ಮ ಮನೆ ಹೆಣ್ಣುಮಕ್ಕಳನ್ನು ಮಕ್ಕಳು ಹೆರುವ ಯಂತ್ರಗಳನ್ನಾಗಿ ಮಾಡಿಕೊಂಡಿದ್ದಾರೆ. ನಮ್ಮನೆ ಹೆಣ್ಮಕ್ಕಳನ್ನು ಕರೆದುಕೊಂಡು ಹೋಗಿ ಕಪ್ಪು ಬುರ್ಕಾ ಹಾಕಿಸಿ ಬಿಸಿಲಲ್ಲಿ ತಿರುಗಾಡುವಂತೆ ಮಾಡುತ್ತಾರೆ. ಅವರನ್ನು ಹಾಗೆಯೇ ಸುಮ್ಮನೇ ಬಿಡಬೇಕಾ ಎಂದು ಪ್ರಶ್ನಿಸಿದ್ದಾರೆ.
ಕೆಲ ಮುಸ್ಲಿಮರು ಒಂದೊಂದು ವಾರ ಸ್ನಾನ ಮಾಡಲ್ಲ, ಆದ್ರೆ ಸೆಂಟ್ ಹಾಕಿಕೊಂಡು ಹೆಣ್ಮಕ್ಕಳ ಹಿಂದೆ ಓಡಾಡ್ತಾರೆ. ಆದರೆ ನಮ್ಮ ಹೆಣ್ಣುಮಕ್ಕಳಿಗೆ ಎಲ್ಲಿ ಹೇಳಿಕೊಳ್ಳಬೇಕು ಎಂಬುದು ಗೊತ್ತಿರುವುದಿಲ್ಲ. ಈ ವೇದಿಕೆ ಮೂಲಕ ಅವರಿಗೆ ಕರೆ ನೀಡುತ್ತಿದ್ದೇವೆ. ಒಂದು ವೇಳೆ ಮುಸ್ಲಿಮರು ಹಿಂದೂ ಹೆಣ್ಣುಮಕ್ಕಳಿಗೆ ತೊಂದರೆ ಕೊಟ್ಟರೆ ನಮ್ಮ ಬಳಿ ಹೇಳಿ, ಅವರ ಮರ್ಮಾಂಗವನ್ನೇ ಕತ್ತರಿಸಿ ಹಾಕೋಣ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ನೀವು ಸುಮ್ಮನೆ ಒಂದು ತಲ್ವಾರ್ ಇಟ್ಟುಕೊಳ್ಳಿ. ಅವರು ನಿಮ್ಮ ಮೇಲೆ ದಾಳಿ ಮಾಡಲು ಬಂದೇ ಬರುತ್ತಾರೆ. ಆಗ ನೀವೇ ಅವರನ್ನು ಕೊಚ್ಚಿ ಹಾಕಿ ಎಂಬ ಪ್ರಚೋದನಕಾರಿ ಹೇಳಿಕೆಯನ್ನು ನೀಡಿದ್ದಾರೆ.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು