December 24, 2024

Newsnap Kannada

The World at your finger tips!

161 hanuman

161 ಅಡಿ ಹನುಮಾನ್ ಪ್ರತಿಮೆ ಅನಾವರಣಗೊಳಿಸಿದ ಮುಖ್ಯಮಂತ್ರಿ ಬೊಮ್ಮಾಯಿ

Spread the love

ಕುಣಿಗಲ್ ಜಿಲ್ಲೆಯ ಬಿದನಗೆರೆಯಲ್ಲಿ ಬಿದನಗೆರೆ ಬಸವೇಶ್ವರ ಮಠದಿಂದ ಸ್ಥಾಪಿಸಲಾಗಿರುವ 161 ಅಡಿ ಎತ್ತರದ ಪಂಚಮುಖಿ ಆಂಜನೇಯ ಸ್ವಾಮಿಯ ಪ್ರತಿಮೆಯನ್ನು ಭಾನುವಾರ ಅನಾವರಣಗೊಳಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜ್ಯಕ್ಕೆ ಒಳ್ಳೆಯ ದಿನಗಳು ಬರಲಿವೆ ಎಂದು ಹೇಳಿದರು.

161 hanuman1

ಇದು ಇಡೀ ಏಷ್ಯಾದಲ್ಲಿಯೇ ಅತಿ ಎತ್ತರದ ಪಂಚಮುಖಿ ಆಂಜನೇಯ ಮೂರ್ತಿಯಾಗಿದೆ ,ರಾಮ ನವಮಿಯ ಶುಭ ಸಂದರ್ಭದಲ್ಲಿ ಅನೇಕ ಪವಿತ್ರ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ಪ್ರದೇಶವು ದೊಡ್ಡ ಬೆಳವಣಿಗೆಗಳನ್ನು ಕಾಣಲಿದೆ ಎಂದು ಬೊಮ್ಮಾಯಿ ಹೇಳಿದರು.

“ಪಂಚಮುಖಿ ಆಂಜನೇಯ ಹನುಮಂತನ ವಿಶೇಷ ರೂಪವಾಗಿದ್ದು, ರಾಮಾಯಣದಲ್ಲಿ ಉಲ್ಲೇಖವಿದೆ. ಲೋಕಕಲ್ಯಾಣಕ್ಕಾಗಿ ಹನುಮಂತ ಈ ರೂಪವನ್ನು ತೆಗೆದುಕೊಂಡಿದ್ದಾನೆ. ಹನುಮಂತನ 161 ಅಡಿ ಎತ್ತರದ ಪ್ರತಿಮೆಯನ್ನು ಕರ್ನಾಟಕದಲ್ಲಿ ಸ್ಥಾಪಿಸುವುದು ಅವರ ದಿವ್ಯ ಆಶಯವಾಗಿದೆ. ಶಿಲ್ಪಿಗಳು ಅದ್ಭುತ ಕೆಲಸ ಮಾಡಿದ್ದಾರೆ ಎಂದು ಬೊಮ್ಮಾಯಿ ಸಭೆಗೆ ತಿಳಿಸಿದರು.

ಪಟ್ಟನಾಯಕನಹಳ್ಳಿಯ ಸ್ವಟಿಕಪುರಿ ಮಠದ ನಂಜಾವಧೂತ ಸ್ವಾಮೀಜಿ, ಹರಿಹರ ವೀರಶೈವ ಪಂಚಮ ಸಾಲಿ ಪೀಠದ ಜಗದ್ಗುರು ವಚನಾನಂದ ಸ್ವಾಮೀಜಿ, ಬಸವೇಶ್ವರ ಮಠದ ಧರ್ಮಾಧಿಕಾರಿ, ಡಾ. ಧನಂಜಯ್ಯ ಗೂರೂಜಿ, ಸಚಿವ ಡಾ. ಅಶ್ವತ್ಥ ನಾರಾಯಣ್, ಶಾಸಕರಾದ ಡಾ. ರಂಗನಾಥ್, ರಾಜುಗೌಡ ಸಂಸದ ಮುನಿಸ್ವಾಮಿ ಮೊದಲಾದವರು ಉಪಸ್ಥಿತರಿದ್ದರು.

Copyright © All rights reserved Newsnap | Newsever by AF themes.
error: Content is protected !!