ಅನಿಲ್ ಕಪೂರ್ ಪುತ್ರಿ, ನಟಿ ಸೋನಂ ಕಪೂರ್ ಮತ್ತು ಪತಿ ಆನಂದ್ ಅಹುಜಾ ಅವರ ನವದೆಹಲಿ ನಿವಾಸದಲ್ಲಿ 1.41 ಕೋಟಿ ಮೌಲ್ಯದ ಚಿನ್ನಾಭರಣ ದರೋಡೆ ಮಾಡಲಾಗಿದೆ.
ಈ ಕುರಿತು ಸೋನಂ ಕಪೂರ್ ಅವರ ಅತ್ತೆ ತುಘಲಕ್ ರೋಡ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಅಮೃತಾ ಶೆರ್ಗಿಲ್ ಮಾರ್ಗದಲ್ಲಿರುವ ದೆಹಲಿ ನಿವಾಸದಲ್ಲಿ, ಸೋನಂ ಅವರ ಮಾವ ಹರೀಶ್ ಅಹುಜಾ ಮತ್ತು ಅತ್ತೆ ಪ್ರಿಯಾ ಅಹುಜಾ ಆನಂದ್ ಅವರ ಅಜ್ಜಿ ಸರಳಾ ಅಹುಜಾ ಅವರೊಂದಿಗೆ ವಾಸವಾಗಿದ್ದಾರೆ.
ಫೆಬ್ರವರಿ 11 ರಂದು ಸೋನಂ ಫ್ಯಾಮಿಲಿ ಕಪಾಟುಗಳು ಮತ್ತು ಚಿನ್ನಾಭರಣಗಳನ್ನು ಪರಿಶೀಲಿಸಿದಾಗ ಕಳ್ಳತನದ ವಿಷಯ ಬೆಳಕಿಗೆ ಬಂದಿದೆ ಎಂದು ಸರಳಾ ಅಹುಜಾ ದೂರಿನಲ್ಲಿ ಹೇಳಿದ್ದಾರೆ.
ಫೆಬ್ರವರಿ 23 ರಂದು ದೂರು ದಾಖಲಾಗಿದೆ. ಈ ವೇಳೆ ಅವರು, ನಾನು ನಮ್ಮ ಚಿನ್ನಾಭರಣವನ್ನು ಪರಿಶೀಲಿಸಿ 2 ವರ್ಷವಾಗಿತ್ತು
ಫೆ.11ರಂದು ಚೆಕ್ ಮಾಡಿದಾಗ ಸಿಕ್ಕಿಲ್ಲ ಎಂದು ಹೇಳಿದ್ದಾರೆ.
ದೂರನ್ನು ಪಡೆದ ಪೊಲೀಸರು ಸೋನಂ ಮತ್ತು ಆನಂದ್ ಅವರ ಮನೆಯಲ್ಲಿ ತನಿಖೆಯನ್ನು ಪ್ರಾರಂಭಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಗಳನ್ನು ಹುಡುಕಲು ಕಳೆದ ವರ್ಷದಿಂದ ರೆಕಾರ್ಡ್ ಆದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ.
ಕಳೆದ ತಿಂಗಳು, ಸೋನಂ ಅವರ ಮಾವನ ಸಂಸ್ಥೆಗೆ 27 ಕೋಟಿ ರು ವಂಚಿಸಲಾಗಿದೆ ಎಂದು ವರದಿಯೊಂದು ಕೇಳಿ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 10 ಆರೋಪಿಗಳನ್ನು ಬಂಧಿಸಲಾಗಿತ್ತು.
ಗಭಿ೯ಣಿಯಾಗಿರುವ ಸೋನಂ ಮತ್ತು ಆನಂದ್ ಮುಂಬೈನಲ್ಲಿದ್ದಾರೆ. ಸೋನಂ ಆನಂದ್ ಅವರ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಸದ್ಯ ಆಕೆ ತನ್ನ ತಂದೆ ಅನಿಲ್ ಕಪೂರ್ ಮನೆಯಲ್ಲಿದ್ದಾರೆ.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
ಕ್ಷಣಾರ್ಧದಲ್ಲಿ 33 ಲಕ್ಷ ಕಳ್ಳತನ: ಓರ್ವ ಆರೋಪಿ ಬಂಧನ
ಚಾಮರಾಜನಗರದಲ್ಲಿ ಖಾಸಗಿ ಬಸ್ ಪಲ್ಟಿ: ಓರ್ವ ಸಾವು, 30ಕ್ಕೂ ಹೆಚ್ಚು ಜನರಿಗೆ ಗಾಯ