December 25, 2024

Newsnap Kannada

The World at your finger tips!

Pakistan

ಇಮ್ರಾನ್ ವಿರುದ್ದ ಅವಿಶ್ವಾಸ ಮಂಡಿಸಲು ಸುಪ್ರೀಂ ಅಸ್ತು – ಶನಿವಾರ ಖಾನ್ ಭವಿಷ್ಯ ನಿರ್ಧಾರ

Spread the love

ಪಾಕ್ ಪ್ರಧಾನಿ ಇಮ್ರಾನ್ ಖಾನ್​ಗೆ ಸುಪ್ರೀಂ ಕೋರ್ಟ್ ನಲ್ಲಿ ಮತ್ತೆ ಹಿನ್ನಡೆಯಾಗಿದೆ. ಶನಿವಾರ ಇಮ್ರಾನ್ ಖಾನ್ ವಿರುದ್ದ ಅವಿಶ್ವಾಸ ಮತ ಯಾಚನೆ ಮಾಡಲು ಕೋರ್ಟ್ ಅದೇಶ ಮಾಡಿದೆ.

ಡೆಪ್ಯೂಟಿ ಸ್ಪೀಕರ್ ಅವಿಶ್ವಾಸ ಗೊತ್ತುವಳಿ ನಿರ್ಣಯದ ಪ್ರಸ್ತಾಪವನ್ನು ವಜಾ ಮಾಡಿರುವುದು ಅಸಂವಿಧಾನಿಕ ಎಂದು ಪಾಕಿಸ್ತಾನ್​ ಸುಪ್ರೀಂಕೋರ್ಟ್​ ಆದೇಶ ನೀಡಿದೆ.

ಏಪ್ರಿಲ್ 3 ರಂದು ಇಮ್ರಾನ್ ಖಾನ್ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ಅವಿಶ್ವಾಸ ಗೊತ್ತುವಳಿಯನ್ನು ಸಂಸತ್​​ನಲ್ಲಿ ಮಂಡಿಸಿದ್ದರು. ಆದರೆ ಅಲ್ಲಿನ ಡೆಪ್ಯೂಟಿ ಸ್ಪೀಕರ್​ ಅದನ್ನು ವಜಾ ಮಾಡಿ ಆದೇಶ ನೀಡಿದ್ದರು. ಡೆಪ್ಯೂಟಿ ಸ್ಪೀಕರ್ ನಿರ್ಧಾರವನ್ನು ಪ್ರಶ್ನಿಸಿ, ಇಮ್ರಾನ್ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ಸುಪ್ರೀಂಕೋರ್ಟ್​ ಮೆಟ್ಟಿಲೇರಿದ್ದವು.

ಈ ಬಗ್ಗೆ ಸುದೀರ್ಘ ವಿಚಾರಣೆ ನಡೆಸಿದ ಪಾಕ್ ಸುಪ್ರೀಂ ಕೋರ್ಟ್​ನ ಪಂಚಪೀಠ, ಇಂದು ಐತಿಹಾಸಿಕ ತೀರ್ಪನ್ನ ಘೋಷಣೆ ಮಾಡಿದೆ. ಸ್ಪೀಕರ್ ನೀಡಿರುವ ಆದೇಶ ಸಂವಿಧಾನ ಬಾಹೀರ ಎಂದಿದೆ.

ಏಪ್ರಿಲ್ 9 ರಂದು ಮತ್ತೆ ವಿರೋಧ ಪಕ್ಷಗಳಿಗೆ ಅವಿಶ್ವಾಸ ನಿರ್ಣಯ ಗೊತ್ತುವಳಿಯನ್ನು ಮಂಡಿಸಲು ಸೂಚನೆ ನೀಡಿದೆ. ಅದರಂತೆ ಏಪ್ರಿಲ್ 9 ರಂದು ಇಮ್ರಾನ್ ಖಾನ್ ಭವಿಷ್ಯ ನಿರ್ಧಾರವಾಗಲಿದೆ.

Copyright © All rights reserved Newsnap | Newsever by AF themes.
error: Content is protected !!