December 23, 2024

Newsnap Kannada

The World at your finger tips!

ಮಡಕೇರಿ

ಮಡಿಕೇರಿ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ – ಭಾವೈಕ್ಯತೆ ಮೆರೆದ ಮುಸ್ಲಿಂ ಮಹಿಳೆ

Spread the love

ಹಿಂದೂ ದೇವಾಲಯದಲ್ಲಿ ಮುಸ್ಲಿಂ ಮಹಿಳೆಯೊಬ್ಬರು ವಿಶೇಷ ಪ್ರಾರ್ಥನೆ ಮಾಡಿದ ಅಪರೂಪದ ಘಟನೆ ಮಡಿಕೇರಿಯಲ್ಲಿ ಜರುಗಿದೆ

ರಾಜ್ಯದಲ್ಲಿ ಹಿಜಬ್ ವಿವಾದದ ಬಳಿಕ ಹಿಂದೂ ದೇವಾಲಯಗಳ ಬಳಿ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ ವಿಧಿಸಲಾಗಿತ್ತು.

ಆ ನಂತರ ಹಲಾಲ್ ಕಟ್ – ಜಟ್ಕಾ ಕಟ್ ಮಾಂಸ ಮಾರಾಟದ ಸಂಘರ್ಷ ಜೋರಾಗಿದೆ.

ಈ ನಡುವೆ ಹಾವೇರಿ ಮೂಲದ ರಜಿಯಾ ಮಡಿಕೇರಿ ನಗರದ ಮುನೇಶ್ವರ ದೇವಾಲಯದ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಕುಟುಂಬ ಸಮೇತರಾಗಿ ದೇವಾಲಯಕ್ಕೆ ಅಗಮಿಸಿ ಹಿಂದೂ – ಮುಸ್ಲಿಂ ಸಮುದಾಯದವರು ಸಹೋದರರಂತೆ ಬದುಕು ನಡೆಸಬೇಕು ಎಂಬ ನಿಟ್ಟಿನಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ನಂತರ ಸುದ್ದಿಗಾರರ ಜೊತೆ ಮಾತನಾಡಿದ ರಜಿಯಾ, ಎಲ್ಲರ ಮೈಯಲ್ಲಿ ಹರಿಯುವುದು ಕೆಂಪು ರಕ್ತವೇ ಹೊರತು ಬೇರೆ ಅಲ್ಲ. ದೇಶದಲ್ಲಿ ಅನೇಕ ಧರ್ಮ, ಸಂಪ್ರದಾಯ, ಸಮುದಾಯ, ಭಾಷೆಗಳು ಇವೆ. ವಿವಿಧತೆಯಲ್ಲಿ ಏಕತೆ ಇರುವುದು ನಮ್ಮ ದೇಶದ ವಿಶೇಷ. ಕೆಲ ಭಿನ್ನತೆಗಳಿದ್ದರೂ ಎಲ್ಲರೂ ಕೂಡಿಕೊಂಡು ಒಟ್ಟಾಗಿ ಹೋಗುವುದು ಇಂದಿನ ದಿನಗಳಲ್ಲಿ ಅವಶ್ಯಕತೆಯಾಗಿದೆ ಎಂದು ಅಭಿಪ್ರಾಯಪಟ್ಟರು.

Copyright © All rights reserved Newsnap | Newsever by AF themes.
error: Content is protected !!