December 25, 2024

Newsnap Kannada

The World at your finger tips!

Praveen Shivamogga

ರಾಜ್ಯಾದ್ಯಂತ ಕೋಮುಗಲಭೆ ಸೃಷ್ಟಿಗೆ ಹರ್ಷನ ಹತ್ಯೆ- ಎನ್‌ಐಎ ವರದಿಯಲ್ಲಿ ಸ್ಫೋಟಕ ಮಾಹಿತಿ

Spread the love

ಬಜರಂಗದಳ ಕಾರ್ಯಕರ್ತ ಹರ್ಷನ ಹತ್ಯೆ ಮೂಲಕ ರಾಜ್ಯಾದ್ಯಂತ ಕೋಮುಗಲಭೆ ಸೃಷ್ಟಿಸಲು ಈ ಕೃತ್ಯ ಮಾಡಲಾಗಿದೆ ಎಂದು ಎನ್‌ಐಎ (ರಾಷ್ಟ್ರೀಯ ತನಿಖಾ ದಳ) ವರದಿಯಲ್ಲಿ ಮಾಹಿತಿ ಬಹಿರಂಗವಾಗಿದೆ.

ಶಿವಮೊಗ್ಗದಲ್ಲಿ ಕೋಮುಗಲಭೆ ಎಬ್ಬಿಸುವ ಉದ್ದೇಶದಿಂದ ಹತ್ಯೆ ನಡೆದಿದೆ. ಜನರಿಗೆ ಭಯವುಂಟು ಮಾಡೋದು ಆರೋಪಿಗಳ ಯೋಜನೆಯಾಗಿತ್ತು ಎಂದು ಎಫ್‌ಐಆರ್‌ನ ಸಾರಾಂಶದಲ್ಲಿ ಎನ್‌ಐಎ ಉಲ್ಲೇಖಿಸಲಾಗಿದೆ.

ಶಿವಮೊಗ್ಗ ಹರ್ಷನ ಹತ್ಯೆ ಪ್ರಕರಣದಲ್ಲಿ 11 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.

ಆರೋಪಿಗಳ ಕೊಲೆಯ ಉದ್ದೇಶ ಸಮಾಜದಲ್ಲಿ ಭಯವನ್ನುಂಟು ಮಾಡೋದಾಗಿದೆ. ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುವ ಮೂಲಕ ಕೋಮುಗಲಭೆ ಎಬ್ಬಿಸುವ ಉದ್ದೇಶ ಆಗಿತ್ತು. ಮಾರಕಾಸ್ತ್ರವನ್ನು ಬಳಸಿ ಜನರಿಗೆ ಭಯ ಉಂಟು ಮಾಡುವ ಉದ್ದೇಶವನ್ನು 11 ಮಂದಿ ಆರೋಪಿಗಳು ಹೊಂದಿದ್ದರು.

ಈ ವಿಚಾರ ಕೇಂದ್ರ ಸರ್ಕಾರ ಸೂಚನೆಯ ಮೇರೆಗೆ ಎಫ್‌ಐಆರ್ ದಾಖಲು ಮಾಡಲಾಗಿದೆ ರಾಷ್ಟ್ರೀಯ ತನಿಖಾ ದಳ ತನಿಖೆ ಕೈಗೆತ್ತಿಕೊಂಡಿದೆ.

Copyright © All rights reserved Newsnap | Newsever by AF themes.
error: Content is protected !!