December 19, 2024

Newsnap Kannada

The World at your finger tips!

IPL RCB

IPL – 15 ಆವೃತ್ತಿಯಲ್ಲಿ RCB ತಂಡಕ್ಕೆ ಮೊದಲ ಗೆಲುವಿನ ನಗೆ, 3 ವಿಕೆಟ್ ನಿಂದ ಆರ್ ಸಿಬಿ ಗೆ ಜಯ

Spread the love

IPL ನ 15 ಆವೃತ್ತಿಯಲ್ಲಿ RCB ತಂಡ ಮೊದಲ ಗೆಲುವಿನ ನಗೆ ಬೀರಿದೆ

ಮುಂಬೈನ ಪಾಟೀಲ ಸ್ಟೇಡಿಯಂನಲ್ಲಿ ಕೆ ಕೆ ಆರ್ ವಿರುದ್ದ ನಡೆದ ಪಂದ್ಯದಲ್ಲಿ ಆರ್ ಸಿ ಬಿ ಮೊದಲ ಗೆಲುವು ಕಂಡಿದೆ

ನಾಯಕ ಡು ಪ್ಲೆಸ್ಸಿ ಹಾಗೂ ವಿರಾಟ್ ಕೊಹ್ಲಿ ಆರಂಭದ 5 ಓವರ್ ಗಳ ಮೊದಲೇ ಆರ್ ಸಿ ಬಿ ಆರಂಭಿಕ ವಿಫಲತೆ ಕಂಡಿತು.

rcb

ಅದರೆ ಮಧ್ಯಮ ಕ್ರಮಾಂಕದ ಆಟಗಾರರು ಆರ್ ಸಿಬಿ ಗೆಲುವಿಗೆ ಶ್ರಮ ಹಾಕಿದರು

ಇದಕ್ಕೂ ಮುನ್ನ ಆರ್​ಸಿಬಿ ಬೌಲರ್ಸ್​ ಮಾರಕ ದಾಳಿಗೆ ನಲುಗಿದ ಕೋಲ್ಕತ್ತಾ ನೈಟ್​ ರೈಡರ್ಸ್ 128 ರನ್​ಗಳಿಗೆ ಆಲೌಟ್ ಆಗಿದೆ. ಸ್ಪಿನ್ನರ್ ವನಿಂದು ಹಸರಂಗಾ ಅದ್ಭುತ ಬೌಲಿಂಗ್ ಮೂಲಕ ಮಿಂಚಿದ್ರು. 4 ಓವರ್​ ಬೌಲ್​ ಮಾಡಿದ ಹಸರಂಗಾ ಕೇವಲ 20 ರನ್​ ನೀಡಿ 4 ವಿಕೆಟ್ ಪಡೆದ್ರು. ಇನ್ನು ವೇಗಿ ಹರ್ಷಲ್ ಪಟೇಲ್​ ಕೂಡ ಟೈಟ್ ಬೌಲಿಂಗ್ ಮೂಲಕ ರೈಡರ್ಸ್​​ ಬ್ಯಾಟ್ಸ್​​​ಮನ್​ಗಳಿಗೆ ಕಂಟಕವಾದ್ರು.
4 ಓವರ್​ ಬೌಲಿಂಗ್ ಮಾಡಿದ ಹರ್ಷಲ್​ ಕೇವಲ 11 ರನ್​ ನೀಡಿ ಸ್ಯಾಮ್ ಬಿಲ್ಲಿಂಗ್ಸ್ ಹಾಗೂ ದೈತ್ಯ ಆಂಡ್ರು ರಸೆಲ್ ವಿಕೆಟ್​ ಪಡೆದ್ರು. ಆಕಾಶ್​ ದೀಪ್ ಮಾತ್ರ ದುಬಾರಿಯಾದ್ರು. 3.5 ಓವರ್​ ಬೌಲ್ ಮಾಡಿದ ಆಕಾಶ್ ದೀಪ್ 11.70 ಎಕಾನಮಿಯಲ್ಲಿ 45 ರನ್ ನೀಡಿ ಮೂರು ವಿಕೆಟ್​ ಗಳಿಸಿದ್ರು.


ಇನ್ನು ಮುಂಬೈನ ಡಿ.ವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆಯುತ್ತಿರೋ, ಕೋಲ್ಕತ್ತಾ ನೈಟ್​ ರೈಡರ್ಸ್​​ ವಿರುದ್ಧದ ಪಂದ್ಯದಲ್ಲಿ ಟಾಸ್​ ಗೆದ್ದ ಆರ್​ಸಿಬಿ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತ್ತು.

ಈ ಪಂದ್ಯಕ್ಕಾಗಿ ಆರ್​ಸಿಬಿ ಪ್ಲೇಯಿಂಗ್ ಇಲೆವೆನ್​ನಲ್ಲಿ ಯಾವುದೇ ಬದಲಾವಣೆ ಮಾಡಿರಲಿಲ್ಲ.

IPL

Copyright © All rights reserved Newsnap | Newsever by AF themes.
error: Content is protected !!