February 20, 2026

Newsnap Kannada

The World at your finger tips!

nalpad mysore

ಮೈಸೂರಿನಲ್ಲಿ ನಲಪಾಡ್​ಗೆ ಸೇರಿದ ಹೋಟೆಲ್ ಗುತ್ತಿಗೆ ಪಡೆದ ಯುವತಿ ಮೇಲೆ ಹಲ್ಲೆ

Spread the love

ರಾಜ್ಯ ಕಾಂಗ್ರೆಸ್​ನ ಯುವ ಘಟಕದ ಅಧ್ಯಕ್ಷ ಮೊಹಮ್ಮದ್ ನಲಪಾಡ್​ಗೆ ಸೇರಿದ ರೆಸ್ಟೋರೆಂಟ್​ನಲ್ಲಿ ಗಲಾಟೆ ನಡೆದಿದೆ . ಇದು ಮೈಸೂರುನಗರದ N.R.ಮೊಹಲ್ಲಾ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಘಟನೆ

ರೆಸ್ಟೋರೆಂಟ್ ನಡೆಸಲು ಗುತ್ತಿಗೆ ಪಡೆದಿದ್ದ ಕೃತಿಕಾ ಗೌಡ ಮೇಲೆ ಸಯ್ಯದ್ ರಿಯಾಜ್ ಎಂಬಾತ ಹಲ್ಲೆ ನಡೆಸಿದ್ದಾರೆಂಬ ಆರೋಪ

ನಲಪಾಡ್​ಗೆ ಸೇರಿರುವ ಈ ರೆಸ್ಟೋರೆಂಟನ್ನ ಕೃತಿಕಾ ಗೌಡ, ಮೂರು ವರ್ಷಗಳವರೆಗೆ ನಡೆಸಲು ಗುತ್ತಿಗೆ ಪಡೆದುಕೊಂಡಿದ್ದರು.

ಇದೀಗ ಹೋಟೆಲ್​ನ ಉಸ್ತುವಾರಿ ನೋಡಿಕೊಳ್ತಿದ್ದ ಸಯ್ಯದ್ ರಿಯಾಜ್ ಹಾಗೂ ಮತ್ತಿತರರು ಹೋಟೆಲ್ ಖಾಲಿ ಮಾಡುವಂತೆ ಒತ್ತಾಯಿಸಿ ಹಲ್ಲೆ ಮಾಡಿದ್ದಾರೆ ಅಂತಾ ಕೃತಿಕಾ ಗೌಡ ಆರೋಪಿಸಿದ್ದಾರೆ.

ಹಲ್ಲೆ ಮಾಡಿರುವ ದೃಶ್ಯ ಸಿಸಿಟಿವಿಯಲ್ಲೂ ಸೆರೆಯಾಗಿದೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಕೃತಿಕಾ ಗೌಡ ಹೇಳಿದ್ದು :

ನಾನು ನಲಪಾಡ್ ಅವರ ಹೋಟೆಲ್ ಅನ್ನು ಮೂರು ವರ್ಷಕ್ಕೆ ಅಗ್ರಿಮೆಂಟ್ ಮಾಡಿಕೊಂಡಿದ್ದೇನೆ. ಆದರೆ ಈ ಹೋಟೆಲ್ ಉಸ್ತುವಾರಿ ಸಯ್ಯದ್ ರಿಯಾಜ್, ಒಂದೇ ವರ್ಷಕ್ಕೆ ಹೋಟೆಲ್ ಖಾಲಿ ಮಾಡುವಂತೆ ಧಮ್ಕಿ ಹಾಕುತ್ತಿದ್ದಾರೆ.

ರಾತ್ರಿ ಬಂದು ನನ್ನ ಮೇಲೆ ಹಲ್ಲೆ ಮಾಡಿ ದೌರ್ಜನ್ಯ ಎಸೆಗಿದ್ದಾರೆ. ನಾನು ನಲಪಾಡ್​ ಅವರನ್ನು ಸಂಪರ್ಕ ಮಾಡಲು ಪ್ರಯತ್ನಿಸಿದೆ. ವಾಟ್ಸ್​ಆ್ಯಪ್​ನಲ್ಲಿ ಮೆಸೇಜ್ ಮಾಡಿದ್ದೆ. ನಲಪಾಡ್​​ ಅವರಿಂದ ನನಗೆ ನ್ಯಾಯ ಸಿಗಬೇಕು ಎಂದು ಕೃತಿಕಾ ಗೌಡ ಕಣ್ಣೀರು ಇಟ್ಟಿದ್ದಾರೆ.

ಸಯ್ಯದ್ ರಿಯಾಜ್ ಹೇಳಿಕೆ :

ಹೋಟೆಲ್ ಗುತ್ತಿಗೆ ಪಡೆದಿರುವ ಕೃತಿಕಾ ಹೋಟೆಲ್ ಸರಿಯಾಗಿ ನಡೆಸಿಕೊಂಡು ಹೋಗುತ್ತಿಲ್ಲ. ನಾವು ಯಾವುದೇ ಹಲ್ಲೆ ಮಾಡಿಲ್ಲ. ಆಕೆ ಹೋಟೆಲ್​ಗೆ ಲಾಸ್ ಮಾಡಿದ್ದಾಳೆ. ಮ್ಯಾನೇಜ್ಮೆಂಟ್​ಗೆ 20 ಲಕ್ಷ ರೂಪಾಯಿಯ ಫೇಕ್ ಚೆಕ್ ಕೊಟ್ಟಿದ್ದಾಳೆ. ಸಿಬ್ಬಂದಿಗೆ ಸಂಬಳ ಕೊಟ್ಟಿಲ್ಲ, ಹೋಟೆಲ್​ಗೆ ಸಾಮಗ್ರಿ ಪೂರೈಸುತ್ತಿದ್ದವರಿಗೆ ಹಣ ನೀಡಿಲ್ಲ. ಕೇಳಿದರೆ ಜಗಳ ಮಾಡುತ್ತಾಳೆ. ಅವರು ನನಗೆ ಸುಮಾರು 35 ಲಕ್ಷ ರೂಪಾಯಿ ಹಣವನ್ನ ಕಟ್ಟಿಕೊಡಬೇಕಿದೆ. ಆಕೆ ಎಲ್ಲರಿಗೂ ಮೋಸ ಮಾಡಿದ್ದಾಳೆ. ಇದನ್ನು ಕೇಳಿದ್ದಕ್ಕೆ ತನಗೆ ಮಾತನಾಡಲು ಬರುತ್ತದೆ ಎಂದು ಏನೇನೋ ಆರೋಪ ಮಾಡಿದ್ದಾಳೆ. ಅದೆಲ್ಲ ಸುಳ್ಳು ಅಂತಾ ಸಯ್ಯದ್ ಹೇಳಿದ್ದಾರೆ.

error: Content is protected !!