ಐಪಿಎಲ್ 20-20ಯ 27ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ 82 ರನ್‌ಗಳ ಅದ್ಭುತ ವಿಜಯ ಸಾಧಿಸಿತು.
ದುಬೈನ ಶಾರ್ಜಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಆರ್‌ಸಿಬಿ ಆಕರ್ಷಕ ಪ್ರದರ್ಶನ ತೋರಿತು.
ಆರ್‌ಸಿಬಿಯ ಆರಂಭಿಕ ಬ್ಯಾಟ್ಸ್‌ಮನ್‌ಗಳಾಗಿ ಮೈದಾನಕ್ಕಿಳಿದ ಆರೋನಾ ಫಿಂಚ್ ಹಾಗೂ ದೇವದತ್ ಪಡಿಕಲ್ ಆಟಕ್ಕೆ ಉತ್ತಮ ಆರಂಭ ನೀಡಿದರು. ಫಿಂಚ್ 37 ಎಸೆತಗಳಲ್ಲಿ 47 ರನ್ ಗಳಿಕೆ ಮಾಡಿದರೆ, ಪಡಿಕ್ಕಲ್ 23 ಎಸೆತಗಳಿಗೆ 32 ರನ್ ಗಳಿಸಿದರು. ಪಡಿಕ್ಕಲ್ ನಂತರ ಮೈದಾನಕ್ಕೆ ಬಂದ ವಿರಾಟ್ ಕೊಹ್ಲಿ 28 ಬಾಲ್‌ಗಳಿಗೆ 33 ರನ್ ಗಳಿಸಿದರು. ಫಿಂಚ್ ಪೆವಿಲಿಯನ್ ಸೇರಿದ ನಂತರ ಮೈದಾನದಲ್ಲಿ ಅಬ್ಬರಿಸಿದ ಎಬಿ ಡಿ ವೀಲಿಯರ್ಸ್ 33 ಬಾಲ್‌ಗಳಿಗೆ 73 ರನ್‌ಗಳ ದೊಡ್ಡ ಮೊತ್ತವನ್ನು ತಂಡಕ್ಕೆ ನೀಡಿ ತಂಡ ಗೆಲ್ಲುವಲ್ಲಿ ಸಹಕಾರಿಯಾದರು. ಆರ್‌ಸಿಬಿ ತಂಡವು 20 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 194 ರನ್ ಗಳಿಸಿತು.
ಆರ್‌ಸಿಬಿ ನೀಡಿದ ಗುರಿಯನ್ನು ಬೆನ್ನಟ್ಟುವ ನಿಟ್ಟಿನಲ್ಲಿ ಕೆಕೆಆರ್ ತಂಡದಿಂದ ಟಿ. ಬಂಟನ್ ಹಾಗೂ ಶುಭಮನ್ ಗಿಲ್ ಅವರು ಆರಂಭಿಕ ಬ್ಯಾಟ್ಸ್‌ಮನ್ ಗಳಾಗಿ ಮೈದಾನಕ್ಕಿಳಿದರು. ಬಮನಟನ್ ಅವರು ಜೇವಲ8 ರನ್‌ಗಳಿಗೆ ಪೆವಿಯನ್ ಸೇರಿಕೊಂಡರು. ಗಿಲ್ ಅವರು 25 ಬಾಲ್‌ಗಳಿಗೆ 34 ರನ್ ಗಳಿಸಿ ತಂಡವನ್ನು ಮುನ್ನಡೆಸಲು ಪ್ರಯತ್ನಿಸಿದರೂ ಉಳಿದ ಆಟಗಾರರಲ್ಲಿ ಸಹಕಾರದ ಕೊರತೆ ಎದ್ದು ಕಂಡಿತು. ಕೆಕೆಆರ್ ತಂಡ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 112 ರನ್ ಗಳಿಸಿ ಸೋತಿತು.
More Stories
ಓದಿನ ಮಹತ್ವ
ಕುಂಭಮೇಳ ಪ್ರಯಾಣಿಕರಿಗೆ ಸುವಾರ್ತೆ: ಮೈಸೂರು-ಪ್ರಯಾಗ್ ರಾಜ್ ವಿಶೇಷ ರೈಲು ಸೇವೆ
ಮಂಡ್ಯದಲ್ಲಿ ಭೀಕರ ಅಪಘಾತ: ಕಾರು-ಲಾರಿ ಡಿಕ್ಕಿಯಾಗಿ ಮೂವರು ವಿದ್ಯಾರ್ಥಿ ಸಾವು