ರಾಜ್ಯದಲ್ಲಿ ಕೆಲಸ ಮಾಡುವ ಎಲ್ಲಾ ಕಟ್ಟಡ ಕಾರ್ಮಿಕರಿಗೆ ಉಚಿತ ಬಸ್‌ಪಾಸ್ ಸೌಲಭ್ಯ ನೀಡುವುದಾಗಿ ಶಾಸಕ ಹಾಗೂ ಕೆಎಸ್‌ಆರ್‌ಟಿಸಿ ಅಧ್ಯಕ್ಷ ಚಂದ್ರಪ್ಪ ಘೋಷಿಸಿದ್ದಾರೆ.
ಮೈಸೂರು ನಗರ ಮತ್ತು ಗ್ರಾಮಾಂತರ ಕೆಎಸ್‌ಆರ್‌ಟಿಸಿ ವಿಭಾಗದ ಅಧಿಕಾರಿಗಳೊಡನೆ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ರಾಜ್ಯದಲ್ಲಿ ಕಟ್ಟಡ ಕಾರ್ಮಿಕರಿಗೆಂದೇ ಈ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ. ಪ್ರಾಯೋಗಿಕ ಹಂತದಲ್ಲಿ ಮೈಸೂರು ಜಿಲ್ಲೆಯ 60,600 ಕಾರ್ಮಿಕರಿಗೆ ಪಾಸ್ ನೀಡಲಾಗುವುದು. ಯಾವುದೇ ಲೋಪದೋಷಗಳು ಕಾಣಿಸಿಕೊಂಡಲ್ಲಿ ಸರಿಪಡಿಸಿ ರಾಜ್ಯದ ಎಲ್ಲ ಕಾರ್ಮಿಕ ಇಲಾಖೆಗಳೊಂದಿಗೆ ಸಮಾಲೋಚಿಸಿ ಪ್ರತೀ ಕಾರ್ಮಿಕನಿಗೆ ಉಚಿತ ಪಾಸ್ ನೀಡಲಾಗುವುದು ಎಂದು ತಿಳಿಸಿದರು.
‘ಕೋವಿಡ್‌ನಿಂದ ಸರ್ಕಾರ ಹಾಗೂ ಕೂಲಿಕಾರ್ಮಿಕರು ನಲುಗಿ ಹೋಗಿದ್ದಾರೆ. ಕೋವಿಡ್ ಕಾರಣ, ರಾಜ್ಯದ ಸಾರಿಗೆ ಇಲಾಖೆಗೆ ಒಟ್ಟು 1600 ಕೋಟಿ ನಷ್ಟವಾಗಿದೆ. ಆದರೂ ನಮಗೆ ಸಾರ್ವಜನಿಕರ ಹಿತಾಸಕ್ತಿ, ಆರೋಗ್ಯ ಮುಖ್ಯ. ದಸರಾ ಹಿನ್ನಲೆಯಲ್ಲಿ ಮೈಸೂರಿನ ಗ್ರಾಮಾಂತರ ವಿಭಾಗದಿಂದ 70 ಹಾಗೂ ನಗರ ವಿಭಾಗದಿಂದ 20 ಬಸ್‌ಗಳನ್ನು ಬಿಡಲಾಗುವುದು’ ಎಂದು ತಿಳಿಸಿದರು.
More Stories
ಕರ್ತವ್ಯದ ವೇಳೆ ಬ್ರೈನ್ಸ್ಟ್ರೋಕ್ಗೆ ಬಲಿಯಾದ ಅರಣ್ಯ ಇಲಾಖೆ ನೌಕರ
ಮುದ್ದುಲಕ್ಷ್ಮಿ ಸೀರಿಯಲ್ ನಟ ಚರಿತ್ ಬಾಳಪ್ಪ ಲೈಂಗಿಕ ದೌರ್ಜನ್ಯ ಆರೋಪದಡಿ ಬಂಧನ
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆಯ ಮುನ್ಸೂಚನೆ: ಬೆಂಗಳೂರು ಸೇರಿ 21 ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ