November 23, 2024

Newsnap Kannada

The World at your finger tips!

kuwj2

KUWJ ಯಲ್ಲಿ ಸಂಘದ ಸಂಸ್ಥಾಪಕ ಆಧ್ಯಕ್ಷ ಡಿವಿಜಿಯ ಸ್ಮರಣೆ

Spread the love

ಮಂಕುತಿಮ್ಮನ ಕಗ್ಗ ಖ್ಯಾತಿಯ ಸಾಹಿತಿ ಮತ್ತು ದಿಟ್ಟ ಪತ್ರಕರ್ತ ಡಿ.ವಿ. ಗುಂಡಪ್ಪ( ಡಿವಿಜಿ) ನವರು ವೃತ್ತಿನಿರತ ಪತ್ರಕರ್ತರ ಒಂದು ಘನತೆ ಎಂದು ಕರ್ನಾಟಕ‌ ಕಾರ್ಯನಿರತ ಪತ್ರಕರ್ತರ ಸಂಘ (KUWJ)ದ ಅಧ್ಯಕ್ಷ ಶಿವಾನಂದ ತಗಡೂರು ಸ್ಮರಿಸಿದರು.

kuwj ಕಚೇರಿಯಲ್ಲಿ ಗುರುವಾರ ಆಯೋಜಿಸಲಾಗಿದ್ದ ಡಿವಿಜಿ ಅವರ ಜನ್ಮದಿನ ಸಮಾರಂಭದಲ್ಲಿ ಮಾತನಾಡುತ್ತಿದ್ದ ಶಿವಾನಂದ ಅವರು, ಡಿವಿಜಿ ಸಾಹಿತಿಯಾಗಿ ಅಷ್ಟೆ ಅಲ್ಲ ಪತ್ರಕರ್ತರಾಗಿ ಪತ್ರಿಕಾ ಕ್ಷೇತ್ರದ ಘನತೆಯನ್ನು ಎತ್ತಿ ಹಿಡಿದವರು. ಪತ್ರಿಕಾಧರ್ಮ, ಮೌಲ್ಯಗಳನ್ನು ಗಟ್ಟಿಯಾಗಿ ಪ್ರತಿಪಾದಿಸಿದ ಅವರ ಕನ್ನಡ ಪತ್ರಿಕೋದ್ಯಮದಲ್ಲಿನ ಅಸಂಘಟಿತ ಪತ್ರಕರ್ತರನ್ನು ಒಗ್ಗೂಡಿಸಿ ಪತ್ರಕರ್ತರ ಸಂಘ ಸ್ಥಾಪಿಸಿದ ಹೆಗ್ಗಳಿಕೆ ಅವರದ್ದಾಗಿದೆ ಎಂದರು.

Kuwj ಡಿವಿಜಿಯವರ ಆಶಯಗಳಂತೆ ಸಂಘಟನಾತ್ಮಕ ಕೆಲಸಗಳನ್ನು ಮುಂದುವರೆಸಿದೆ. ಪತ್ರಕರ್ತರ ವೃತ್ತಿ ನೈಪುಣ್ಯತೆಯ ಉನ್ನತೀಕರಣ ಜೊತೆಗೆ ಪತ್ರಕರ್ತರ ಹಿತ ಕಾಯುವಲ್ಲಿ ಬದ್ದತೆಯಿಂದ ಕೆಲಸ ಮಾಡುತ್ತಿದೆ ಎಂದರು.

ಡಿವಿಜಿ ಅವರ 135ನೇ ಹುಟ್ಟುಹಬ್ಬವನ್ನು ನಾವು ಆಚರಿಸಿಕೊಳ್ಳುವ ಮೂಲಕ ಅವರನ್ನು ಸ್ಮರಿಸಲು ಹೆಮ್ಮೆ ಎನಿಸುತ್ತಿದೆ ಎಂದರು.

ಹಿರಿಯ ಪತ್ರಕರ್ತ ವೆಂಕಟಸಿಂಗ್, ಮಹಿಳಾ ಪತ್ರಿಕಾ ಸಂಪಾದಕರ ಸಂಘದ ಅಧ್ಯಕ್ಷೆ ಶ್ರೀಮತಿ ರಶ್ಮಿಪಾಟೀಲ್, ರೇಖಾ,
ಹಿರಿಯ ಪತ್ರಕರ್ತ ವಾಸುದೇವಹೊಳ್ಳ ಮಾತನಾಡಿದರು.

kuwj ಪ್ರಧಾನ ಕಾರ್ಯದರ್ಶಿ ಜಿ.ಸಿ. ಲೊಕೇಶ್,ಮಹಿಳಾ ಪತ್ರಕರ್ತೆಯರಾದ ರೇಖಾಪ್ರಕಾಶ್, ಶಾಂಭವಿ, ಮಜುಳಾ, ಅರುಣ ಜ್ಯೋತಿ, ಗೀತಾ, ಸುಧಾರಾಣಿ, ಶಶಿಕಲಾ ಇತರರು ಹಾಜರಿದ್ದರು.

ಮನವಿ:
ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳಿಗೆ ಸಲ್ಲಿಸಲು ತಂದಿದ್ದ ರಾಜ್ಯ ಸಂಪಾದಕೀಯರ ಸಂಘದ ವಿವಿಧ ಬೇಡಿಕೆಯ ಮನವಿ ಪತ್ರವನ್ನು ಜಿಲ್ಲೆಯ ಇತರ ಕಡೆಯಿಂದ ಬಂದ ಮಹಿಳಾ ಪದಾಧಿಕಾರಿಗಳು ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಅವರಿಗೆ ಹಸ್ತಾಂತರಿಸಿದರು.
ಮುಖ್ಯಮಂತ್ರಿಗಳ ಜೊತೆಗೆ ಮಾತನಾಡಿ, ಮಹಿಳೆಯರ ಪರ ಚರ್ಚಿಸಿ ಅನುಕೂಲ ಕಲ್ಪಿಸುವುದಾಗಿ ಅಧ್ಯಕ್ಷರು ಭರವಸೆ ನೀಡಿದರು.

Copyright © All rights reserved Newsnap | Newsever by AF themes.
error: Content is protected !!