February 21, 2026

Newsnap Kannada

The World at your finger tips!

CHANDRASHEKAR

ತೆಲಂಗಾಣ ಸಿಎಂ KCR ಆಸ್ಪತ್ರೆಗೆ ದಾಖಲು : ಆಂಜಿಯೋಗ್ರಾಂ ಪರೀಕ್ಷೆಗೆ ಒಳಗಾದ ರಾವ್

Spread the love

ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ (KCR) ಗುರುವಾರ ಹೈದರಾಬಾದ್‌ನ ಯಶೋದಾ ಆಸ್ಪತ್ರೆಗೆ ಆರೋಗ್ಯ ತಪಾಸಣೆಗಾಗಿ ಭೇಟಿ ನೀಡಿದರು.

ತೆಲಂಗಾಣ ಮುಖ್ಯಮಂತ್ರಿ ಕಚೇರಿಯ ಮಾಹಿತಿಯಂತೆ ವೈದ್ಯರು ಹೃದಯ ಸಂಬಂಧಿ ಆಂಜಿಯೋಗ್ರಾಮ್ ಪರೀಕ್ಷೆಗಳನ್ನು ನಡೆಸುತ್ತಿದ್ದಾರೆ.

ಕೆಸಿಆರ್ ಪತ್ನಿ ಶೋಭಾ ರಾವ್ ಮತ್ತು ಪುತ್ರಿ ಕೆ.ಕವಿತಾ ಕೂಡ ಅವರ ಜೊತೆ ಆಸ್ಪತ್ರೆಗೆ ತೆರಳಿದ್ದಾರೆ. ಮುಖ್ಯಮಂತ್ರಿ ಕೆಸಿಆರ್ ತೀವ್ರ ಜ್ವರ ಮತ್ತು ಶೀತದ ಗಳ ನಂತರ ಆಸ್ಪತ್ರೆಗೆ ದಾಖಲಾಗಿದ್ದಾರೆ.

ತೆಲಂಗಾಣ ಸಿಎಂಒ ಹೇಳಿಕೆಯಲ್ಲಿ, “ಸಿಎಂ ಕೆ. ಚಂದ್ರಶೇಖರ್ ರಾವ್ ಅವರು ಆರೋಗ್ಯ ತಪಾಸಣೆಗಾಗಿ ಯಶೋದಾ ಆಸ್ಪತ್ರೆಗೆ ತೆರಳಿದ್ದಾರೆ. ವೈದ್ಯರು ಹೃದಯ ಸಂಬಂಧಿ ಆಂಜಿಯೋಗ್ರಾಮ್ ಪರೀಕ್ಷೆ ನಡೆಸುತ್ತಿದ್ದಾರೆ” ಎಂದು ಹೇಳಿದ್ದಾರೆ.

error: Content is protected !!