February 21, 2026

Newsnap Kannada

The World at your finger tips!

kr pete 1

ಕೆ ಆರ್ ಪೇಟೆ Ex MLA ಆರೋಪಿ ಪುತ್ರನಿಗೆ ಬೆಂಬಲದ ಆರೋಪ – ಮಳವಳ್ಳಿ CPI ಅಮಾನತ್ತು

Spread the love

ಕೆ ಆರ್ ಪೇಟೆ ಮಾಜಿ ಶಾಸಕ ಚಂದ್ರಶೇಖರ್ ಪುತ್ರ ಶ್ರೀಕಾಂತ್ ನಿಗೆ ಕೊಲೆ ಪ್ರಕರಣದಲ್ಲಿ ಬೆಂಬಲ ನೀಡಿದ ಹಿನ್ನೆಲೆ ಮಳವಳ್ಳಿ ಸಿಪಿಐ ಅಧಿಕಾರಿಯನ್ನು ಅಮಾನತ್ತು ಮಾಡಲಾಗಿದೆ.

ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಅವರ ಆರೋಪಿ ಪುತ್ರನನ್ನು ರಕ್ಷಣೆ ಮಾಡಲು ಪ್ರಯತ್ನ ಮಾಡಿದ ಆರೋಪದ ಮೇಲೆ ಮಂಡ್ಯ ಜಿಲ್ಲೆಯ ಮಳವಳ್ಳಿ ಉಪವಿಭಾಗದ ಸಿಪಿಐ ಡಿ.ಪಿ.ಧನರಾಜು ಅವರನ್ನು ಅಮಾನತು ಮಾಡಲಾಗಿದೆ ಎಂದು ಮಂಡ್ಯ ಎಸ್‍ಪಿ ತಿಳಿಸಿದ್ದಾರೆ.

ಈ ಕುರಿತು ಅಧಿಕೃತ ಆದೇಶ ಪ್ರತಿ ನೀಡಲು ನಿರಾಕರಿಸಿದ ಎಸ್ಪಿ ರೈಸ್ ಪುಲ್ಲಿಂಗ್ ದಂಧೆಕೋರ ಸಲೀಂ ಹತ್ಯೆ ಆರೋಪದ ಮೇಲೆ ಕೆ.ಬಿ ಚಂದ್ರಶೇಖರ್ ಪುತ್ರ ಶ್ರೀಕಾಂತ್ ಜೈಲು ಸೇರಿದ್ದಾರೆ. ಈ ವಿಷಯದಲ್ಲಿ ಧನರಾಜು ಅವರಿಗೆ ಬೆಂಬಲ ನೀಡುತ್ತಿದ್ದಾರೆ ಎಂದು ಪ್ರಸ್ತುತ ಅವರನ್ನು ಕೆಲಸದಿಂದ ಅಮಾನತು ಮಾಡಲು ಆದೇಶ ಹೊರಡಿಸಲಾಗಿದೆ.

error: Content is protected !!