December 23, 2024

Newsnap Kannada

The World at your finger tips!

arayan

Drugs case – ಆರ್ಯನ್‌ ಖಾನ್‌ ಖುಲಾಸೆ? : ತನಿಖೆ ಮುಂದುವರೆದಿದೆ SIT

Spread the love

ಮುಂಬೈ ನ ಹಡಗಿನ Drugs ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿ ಬಿಡುಗಡೆಯಾಗಿರುವ ಬಾಲಿವುಡ್ ನಟ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ ಪ್ರಕರಣದಿಂದಲೇ ಖುಲಾಸೆ ಆಗಲಿದ್ದಾರೆಯೇ ಎಂಬ ಸುದ್ದಿ ಹರಡಿದೆ.

ಈ ಕುರಿತು ಮಾಧ್ಯಮವೊಂದು ವರದಿ ಮಾಡಿ ಅಂತರಾಷ್ಟ್ರೀಯ ಡ್ರಗ್ಸ್ ಜಾಲದ ಸಂಪರ್ಕವಿದೆ ಎಂದು ಆರ್ಯನ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.

22 ದಿನಗಳ ಕಾಲ ಜೈಲಿನಿಂದ ಬಿಡುಗಡೆಯಾಗಿದ್ದರು. ಆದರೆ ಕೆಲವು ದಿನಗಳ ನಂತರ ಅವರಿಗೆ ಜಾಮೀನು ಸಹ ನೀಡಲಾಗಿತ್ತು.

ಆದರೆ ಈಗ ಈ ಪ್ರಕರಣದಲ್ಲಿ ಆರ್ಯನ್ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳಲಿಲ್ಲ ಎಂದು, ಕೇಸ್ ನಿಂದಲೇ ಮುಕ್ತಿ ಸಿಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿದೆ.

ಈ ಪ್ರಕರಣವನ್ನು ವಿಶೇಷ ತನಿಖಾ ತಂಡ ಸಹ ಅಲ್ಲಗಳೆದಿದೆ. ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದ್ದು, ಇನ್ನೂ ಯಾವುದೇ ತೀರ್ಮಾನಕ್ಕೆ ಬರಲಾಗಿಲ್ಲ ಎಂದು ಹೇಳಿದೆ.

ಎಸ್‍ಐಟಿ ಪ್ರಕರಣ ಕುರಿತು ತನಿಖೆ ಮುಂದುವರಿಸಿದೆ.
2021ರ ಅ . 2ರಂದು ಎನ್‍ಸಿಬಿ ವಲಯ ಮುಖ್ಯಸ್ಥ ಸಮೀರ್ ವಾಂಖೆಡೆ ನೇತೃತ್ವದ ತಂಡ ಕ್ರೂಸ್ ಹಡಗಿನ ಮೇಲೆ ದಾಳಿ ಮಾಡಿತ್ತು. ಆರ್ಯನ್ ಖಾನ್ ಸೇರಿದಂತೆ 20 ಜನರನ್ನು ಡ್ರಗ್ಸ್ ಸೇವನೆ ಆರೋಪದ ಮೇಲೆ ಬಂಧಿಸಲಾಗಿತ್ತು

Copyright © All rights reserved Newsnap | Newsever by AF themes.
error: Content is protected !!