ಕೊಲೆ ಪ್ರಕರಣದಲ್ಲಿ ಕೆ ಆರ್ ಪೇಟೆ ಮಾಜಿ ಶಾಸಕರ ಪುತ್ರನ ಬಂಧನ : ಸಂಚಿನಲ್ಲಿ ಸಿಪಿಐ ಧನರಾಜ್ ಪಾತ್ರ?

Team Newsnap
2 Min Read

ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಕೆ ಆರ್ ಪೇಟೆ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಪುತ್ರ ಶ್ರೀಕಾಂತ್ ನನ್ನು ಮಳವಳ್ಳಿ ಗ್ರಾಮಾಂತರ ಠಾಣೆಯ ಪೋಲಿಸರು ಬಂಧಿಸಿದ್ದಾರೆ.

ಪಂಚ ಲೋಹ ಮಾರಾಟ ಅಕ್ರಮ ವ್ಯವಹಾರದ ಮೂಲಕ ಹಣ ದಂಧೆಯಲ್ಲಿ ತೊಡಗಿದ್ದ ಆರೋಪದಲ್ಲಿ ಶ್ರೀಕಾಂತ್ ಹಾಗೂ ಇತರರು ಮೈಸೂರಿನ ಇನ್ಫೊಸಿಸ್ ಬಳಿ ಸಲೀಂ ಎಂಬ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿ ಶವವನ್ನು ಮಳವಳ್ಳಿ ಗ್ರಾಮಾಂತರ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೀಸಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಬಂಧನ ಮಾಡಲಾಗಿದೆ ಎಂದು ಪೋಲಿಸ್ ಮೂಲಗಳು ಹೇಳಿವೆ.

ನಕಲಿ ರೈಸ್ ಪುಲ್ಲಿಂಗ್ ನೀಡಿದ್ದ ವ್ಯಕ್ತಿಯನ್ನು ಕೊಲೆಗೈದಿದ್ದ ಶ್ರೀಕಾಂತ್ ಆಂಡ್ ಗ್ಯಾಂಗ್ ಫೆಬ್ರವರಿ 7 ರಂದು ಸಲೀಂ ನನ್ನು ಮೈಸೂರಿನಲ್ಲಿ ಕೊಂದು ಮಳವಳ್ಳಿಯ ಪಂಡಿತಹಳ್ಳಿಯ ರಸ್ತೆ ಬದಿ ಬಿಸಾಡಿದ್ದರು.

ಕೊಲೆಯ ಸಂಚಿನಲ್ಲಿ ಸಿಪಿಐ ಧನರಾಜ್ ಪಾತ್ರ?

ಈ ಕೊಲೆ ಪ್ರಕರಣದಿಂದ ಪಾರಾಗಲು ಈ ಮೊದಲು ಕೆ ಆರ್ ಪೇಟೆಯಲ್ಲಿ ಎಸ್ ಐ ಆಗಿದ್ದ, ಈಗ ಮಳವಳ್ಳಿ ವಿಭಾಗದಲ್ಲಿ ಸಿಪಿಐ ಆಗಿರುವ ಧನ್ ರಾಜ್ ನೆರವಿನಿಂದ ಮಾಸ್ಟರ್ ಪ್ಲಾನ್ ಮಾಡಿದ್ದಾರೆಂದು ಆರೋಪಿಸಲಾಗಿದೆ.

ಈ ಪ್ರಕರಣ ಮುಚ್ಚಿ ಹಾಕಲು ಆರೋಪಿ ಶ್ರೀಕಾಂತ್ ಗೆ ಸಿಪಿಐ
10 ಲಕ್ಷ ನಗದು , ಹೊಸ ಕಾರು ಬೇಡಿಕೆ ಇಟ್ಟಿದ್ದರೆಂಬ ಸಂಗತಿ ಈಗ ಬಯಲಾಗಿದೆ.

ಪ್ರಕರಣದಿಂದ ಶ್ರೀಕಾಂತ್ ಕೈಬಿಡಲು ಒಪ್ಪಿದ್ದ ಮಳವಳ್ಳಿ ಉಪ ವಿಭಾಗದ ಸಿಪಿಐ ಧನರಾಜ್ ತಮ್ಮ ವ್ಯಾಪ್ತಿಯ ರಸ್ತೆ ಬದಿಯಲ್ಲಿ ಶವಹಾಕಿ, ಬೇರೆ ಯಾರೋ ಮೂವರನ್ನು ಪ್ರಕರಣ ಒಪ್ಪಿಕೊಳ್ಳವಂತೆ ರೆಡಿ ಮಾಡಲು ಧನ್ ರಾಜ್ ಶ್ರೀಕಾಂತ್ ಗೆ ಸೂಚನೆ ನೀಡಿದ್ದರಂತೆ ಹಣದಾಸೆ ತೋರಿಸಿ ತನ್ನ ಸಹಚರರಿಗೆ ಶ್ರೀಕಾಂತ್ ಸುಪಾರಿ ನೀಡಿದ್ದರು.

ಆದರೆ ಮೃತದೇಹ ಹಾಕುವಾಗ ಮಾಡಿದ ಎಡವಟ್ಟಿನಿಂದ ಈ ಪ್ರಕರಣ ಬಯಲಾಯ್ತು .
ಬೆಳಕವಾಡಿ ಠಾಣೆಯ ವ್ಯಾಪ್ತಿ ಬದಲಿಗೆ ಮಳವಳ್ಳಿ ಗ್ರಾಮಾಂತರ ವ್ಯಾಪ್ತಿಗೆ ಶವ ಹಾಕಿ ಠಾಣೆಗೆ ಬಂದು ಶರಣು.

100 ಮೀಟರ್ ವ್ಯತ್ಯಾಸದಿಂದ ಉಲ್ಟಾ ಹೊಡೆದ ಮಾಸ್ಟರ್ ಪ್ಲಾನ್ ನಿಂದಾಗಿ ಈ ಪ್ರಕರಣ ಬಯಲಿಗೆ ಬಂದಿದೆ

ಮಳವಳ್ಳಿ ಗ್ರಾಮಾಂತರ ಠಾಣೆ ಇನ್ಸ್ ಪೆಕ್ಟರ್ ರಾಜೇಶ್ ಹಾಗೂ ತಂಡ ತನಿಖೆಯಿಂದ ಈ ಬಯಲಾದ ಪ್ರಕರಣ.

Share This Article
Leave a comment