ಅಮೇರಿಕಾದ ಚುಣಾವಣೆಗೆ ಇದನ್ನು 24 ದಿನಗಳು ಮಾತ್ರ ಬಾಕಿಯಿವೆ. ಈ ನಡುವೆ ಅಮೇರಿಕದ ಕೆಲವು ಸಂಸ್ಥೆಗಳು ಚುಣಾವಣಾ ಪೂರ್ವ ಸಮೀಕ್ಷೆಗಳನ್ನು ನಡೆಸಿದೆ. ಸಮೀಕ್ಷೆಯಲ್ಲಿ ಜೋ ಬಿಡೆನ್ ಪರ ಅದ್ಭುತಪೂರ್ವ ಜನಾಭಿಪ್ರಾಯ ದೊರೆತಿದ್ದರೆ, ಟ್ರಂಪ್ ಅವರಿಗೆ ಈ ಬಾರಿ ಸರಿಯಾದ ಜನಮನ್ನಣೆ ಸಿಕ್ಕಿಲ್ಲ.
ಅಮೆರಿಕದ ಆರ್ಥಿಕತೆ ಕುಸಿತ, ಕೊರೊನಾ ಸಂಕಷ್ಟ, ಜನಾಂಗೀಯ ಘರ್ಷಣೆ, ಬಾಯಿಗೆ ಬಂದಂತೆ ವಿಜ್ಞಾನದ ಬಗ್ಗೆ ಮನಬಂದಂತೆ ಹೇಳಿಕೆಗಳನ್ನು ಟ್ರಂಪ್ ನೀಡುತ್ತಿರುವುದರಿಂದ ಅವರನ್ನು ಜನ ತಿರಸ್ಕರಿಸುತ್ತಿದ್ದಾರೆ. ಜೋ ಬಿಡೆನ್ ತಮ್ಮ ಮೊದಲ ಚುಣಾವಣೆಯಲ್ಲಿಯೇ ಅದ್ಭುತ ಗೆಲುವು ಸಾಧಿಸುವ ಸೂಚನೆ ನೀಡಿದ್ದಾರೆ.
ಕಳೆದ ಚುನಾವಣೆಯಲ್ಲಿ ಟ್ರಂಪ್ ಗೆದ್ದುಬೀಗಿದ್ದ ರಾಜ್ಯಗಳಲ್ಲೇ ಅವರಿಗೆ ಬಾರಿ ಹಿನ್ನಡೆ ಉಂಟಾಗಿದೆ. ಅದರಲ್ಲೂ ಅಧ್ಯಕ್ಷರ ಆಯ್ಕೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವ ರಾಜ್ಯಗಳಲ್ಲೇ ಈ ಬಾರಿ ಟ್ರಂಪ್ ಮುಗ್ಗರಿಸುವ ಮುನ್ಸೂಚನೆ ಸಿಕ್ಕಿದೆ.
ಆದರೆ ತಜ್ಞರ ಪ್ರಕಾರ ಈ ಸಮೀಕ್ಷೆಯ ಫಲಿತಾಂಶವೇ ಅಂತಿಮವಲ್ಲ. 2016ರ ಚುಣಾವಣೆಯಲ್ಲಿ ಹಿಲರಿ ಕ್ಲಿಂಟನ್ ಹಾಗೂ ಟ್ರಂಪ್ ನಡುವೆ ಸಮೀಕ್ಷೆ ನಡೆದಾಗ ಹಿಲರಿಯವರೇ ಅಧ್ಯಕ್ಷರಾಗಲಿದ್ದಾರೆ ಎಂದು ಹೇಳಿತ್ತು. ಆದರೆ ಚುಣಾವಣೆಯ ನಂತರ ಎಲ್ಲರ ಲೆಕ್ಕಾಚಾರ ಬದಲಾಗಿತ್ತು. ಟ್ರಂಪ್ ಚುಣಾವಣೆಯಲ್ಲಿ ಗೆದ್ದಿದ್ದರು.
ಅಮೇರಿಕದಲ್ಲಿ ಪ್ರತ್ಯಕ್ಷ ಮತದಾನದ ಬದಲು ಪರೋಕ್ಷ ಮತದಾನದ ಪದ್ದತಿ ಜಾರಿಯಲ್ಲಿದೆ. ಅಂದರೆ ನಮ್ಮ ಸಂಸದರು ಪ್ರಧಾನಿಯನ್ನು ಆಯ್ಕೆ ಮಾಡುವ ರೀತಿ. ಹಾಗಾಗಿ ಚುಣಾವಣಾ ಪೂರ್ವ ಸಮೀಕ್ಷೆಗಳ ಫಲಿತಾಂಶವನ್ನೇ ಅಂತಿಮ ಎಂದು ಹೇಳಲಾಗುವದಿಲ್ಲ ಎನ್ನುತ್ತಾರೆ ತಜ್ಞರು.
More Stories
ಡ್ರಗ್ಸ್ ಕೇಸ್ ಹೆಸರಿನಲ್ಲಿ ಟೆಕಿಗೆ 40 ಲಕ್ಷ ವಂಚನೆ
ಮೈಸೂರು BEML ಅಧಿಕಾರಿ ಆತ್ಮಹತ್ಯೆ ಗೆ ಶರಣು
MUDA ಹಗರಣ: 15,085 ನಿವೇಶನಗಳು ಪೆಂಡಿಂಗ್, ಹಲವಾರು ಅಕ್ರಮ ಬಯಲು