December 19, 2024

Newsnap Kannada

The World at your finger tips!

crime,murder,women

ಪೋಷಕರ ವಿರೋಧ ಪ್ರೇಮ ವಿವಾಹ ಮಾಡಿಕೊಂಡ ನವದಂಪತಿ ಆತ್ಮಹತ್ಯೆ

Spread the love

ಪೋಷಕರ ವಿರೋಧದ ನಡುವೆಯೂ ಅನ್ಯ ಜಾತಿಗಳ ಪ್ರೇಮ ವಿವಾಹವಾದ ನವದಂಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರಿನ ಹುಣಸೂರಿನಲ್ಲಿ ನಡೆದಿದೆ.

ಇಬ್ಬರೂ ಅನ್ಯ ಜಾತಿಗೆ ಸೇರಿದ ಈ ಜೋಡಿ ಮದುವೆಗೆ ಪೋಷಕರ ವಿರೋಧ ವ್ಯಕ್ತಪಡಿಸಿದ್ದರು. ಆದರೂ ಈ 4 ತಿಂಗಳ ಹಿಂದೆ ಮನೆ ಬಿಟ್ಟು ಓಡಿ ಹೋಗಿ ವಿವಾಹವಾಗಿದ್ದರು.

ಮದುವೆಯಾಗಿ ಕೇವಲ ನಾಲ್ಕು ತಿಂಗಳಿಗೆ ಈ ನವಜೋಡಿ ಆತ್ಯಹತ್ಯೆ ಮಾಡಿಕೊಂಡಿದ್ದಾರೆ.

ಹುಣಸೂರು ತಾಲೂಕಿನ ಸಿಂಗರಮಾರನಹಳ್ಳಿಯಲ್ಲಿನ ರಾಕೇಶ್(25), ಅರ್ಚನಾ(20)ಮೃತ ಪ್ರೇಮಿಗಳು.

ರಾಕೇಶ್ ಮತ್ತು ಅರ್ಚನಾ ಎರಡು ವರ್ಷಗಳಿಂದ ಪರಸ್ಪರ ಪ್ರೀತಿ ಮಾಡುತ್ತಿದ್ದರು. ಇಬ್ಬರೂ ಒಂದೇ ಊರಿನ ಅಕ್ಕಪಕ್ಕದ ಮನೆಯವರು. ಪೋಷಕರು ವಿರೋಧ ಇದ್ದ ಹಿನ್ನೆಲೆ ಪ್ರೇಮಿಗಳು ನಾಲ್ಕು ತಿಂಗಳ ಹಿಂದೆ ಓಡಿ ಹೋಗಿ ಮದುವೆಯಾಗಿದ್ದರು.
ತಡರಾತ್ರಿ ಗ್ರಾಮಕ್ಕೆ ಬಂದು ಊರ ಹೊರವಲಯದಲ್ಲಿ ಮರಕ್ಕೆ ನವದಂಪತಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಬಿಳಿಕೆರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

face book ಎಂಟ್ರಿ ಕೊಟ್ಟ ನಟಿ ರಾಧಿಕಾ : ನಾನು ರಾಧಿಕಾ ಕುಮಾರಸ್ವಾಮಿ…..

‘ನಾನು ರಾಧಿಕಾ ಕುಮಾರಸ್ವಾಮಿ’… ಎಂದು ಅಧಿಕೃತ ಫೇಸ್ ಬುಕ್ ಪೇಜ್ ತೆರೆಯುವುದಾಗಿ ನಟಿ ರಾಧಿಕ ಕುಮಾರಸ್ವಾಮಿ ಹೇಳಿಕೊಂಡಿದ್ದಾರೆ.

ರಾಧಿಕಾ ಹೆಸರಿನಲ್ಲಿ ಹತ್ತಾರು ಫೇಸ್ ಬುಕ್ ಪೇಜ್ ಗಳನ್ನು ಅಭಿಮಾನಿಗಳು ಕ್ರಿಯೇಟ್ ಮಾಡಿದ್ದಾರೆ. ಆದರೆ, ಅವರು ಯಾವುದೇ ಅಧಿಕೃತ ಫೇಸ್ ಬುಕ್ ಪೇಜ್ ಹೊಂದಿರಲಿಲ್ಲ.

ಈಗ ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರವಾಗಲು ಪೇಜ್ ಅನ್ನು ತೆರೆಯುತ್ತಿರುವುದಾಗಿ ಹೇಳಿದ್ದಾರೆ. ಈ ಮೂಲಕ ಅವರು ತಮ್ಮ ಬಗ್ಗೆ ಮಾಹಿತಿಗಳನ್ನು ಇಲ್ಲಿಯೇ ಹಂಚುತ್ತಾ ಹೋಗುತ್ತಾರಂತೆ.

ದಮಯಂತಿ ಚಿತ್ರದ ಮೂಲಕ ಕಮ್ ಬ್ಯಾಕ್ ಆದರು. ಸ್ವತಃ ಚಿತ್ರ ನಿರ್ಮಾಣಕ್ಕೂ ಇಳಿದರು. ಅರ್ಜುನ್ ಸರ್ಜಾ ಜತೆ ಮತ್ತೊಂದು ಸಿನಿಮಾ ಮಾಡಿದರು. ಈಗ ಮತ್ತಷ್ಟು ಚಿತ್ರಗಳನ್ನು ಮಾಡುವ ತಯಾರಿ ಮಾಡಿಕೊಂಡಿದ್ದಾರಂತೆ. ಹಾಗಾಗಿ ಅವೆಲ್ಲ ವಿಷಯಗಳನ್ನು ಅಭಿಮಾನಿಗಳ ಜತೆ ಹಂಚಿಕೊಳ್ಳಲು ಸ್ವಂತ ಫೇಸ್ ಬುಕ್ ವೇದಿಕೆಯನ್ನು ರಾಧಿಕಾ ಬಳಸಿಕೊಳ್ಳುತ್ತಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!