ಹುಡುಗಿಯರಿಬ್ಬರು ಕೊಲೆಯಾದ ಹರ್ಷಗೆ ಪದೇ ಪದೇ ವೀಡಿಯೋ ಕಾಲ್ ಮಾಡಿದ್ದಾದರೂ ಯಾಕೆ ?

Team Newsnap
2 Min Read

ಹಿಂದು ಸಂಘಟನೆಯ ಕಾರ್ಯಕರ್ತ ಹರ್ಷ ಕೊಲೆಗೂ ಕೆಲ ಗಂಟೆಗಳ ಮೊದಲು ಇಬ್ಬರೂ ಹುಡುಗಿಯರು ವೀಡಿಯೋ ಕಾಲ್ ಮಾಡಿದ್ದರು ಎಂಬ ಸಂಗತಿ ಈಗ ಬಯಲಾಗಿದೆ

ಕೊಲೆ ಪ್ರಕರಣ ತನಿಖೆಯಲ್ಲಿ ಆರೋಪಿಗಳ ಇತಿಹಾಸ ಪತ್ತೆಯಾಗುತ್ತಿದ್ದಂತೆ ಈಗ ಕೊನೆ ಕ್ಷಣದ ಮಾಹಿತಿಗಳು ಲಭ್ಯವಾಗುತ್ತಿದೆ.

ಹತ್ಯೆಗೂ ಮುನ್ನ ಇಬ್ಬರು ಅಪರಿಚಿತ ಹುಡುಗಿಯರು ಸಹಾಯಕ್ಕಾಗಿ ಹರ್ಷಗೆ ವೀಡಿಯೋ ಕಾಲ್ ಮಾಡಿದ್ದ ವಿಚಾರವನ್ನು ಹರ್ಷನ ಸ್ನೇಹಿತ ನವೀನ್ ತಿಳಿಸಿದ್ದಾರೆ

ಸ್ನೇಹಿತ ಹೇಳಿದ್ದು ಏನು?


ಹರ್ಷ ಕೊಲೆಯಾಗುವ ಮೊದಲು ಸಹಾಯ ಕೇಳುವ ನೆಪದಲ್ಲಿ 2 ಹುಡುಗಿಯರು ಪದೇ ಪದೇ ವೀಡಿಯೋ ಕಾಲ್ ಮಾಡಿದ್ದರು. ಈ ವೇಳೆ ಹರ್ಷನ ಜೊತೆ ನಾವು ನಾಲ್ಕು ಜನ ಇದ್ದೆವು. ಹರ್ಷನಿಗೆ ಪದೇ ಪದೇ ಕಾಲ್ ಬರುತ್ತಿದ್ದಂತೆ ಹರ್ಷ ಕಾಲ್ ಕಟ್ ಮಾಡುತ್ತಿದ್ದ. ಆದರೆ ಅವರು ಮತ್ತೆ, ಮತ್ತೆ ನಾನು ನಿನ್ನ ಸ್ನೇಹಿತೆ ಸಹಾಯಕ್ಕಾಗಿ ಫೋನ್ ಮಾಡುತ್ತಿದ್ದೇವೆ ಎಂದು ಕಾಲ್ ಮಾಡುತ್ತಿದ್ದರು.

ಕರೆ ಮಾಡಿದ ಹುಡುಗಿಯರು ಯಾರು ಎಂಬ ಮಾಹಿತಿ ಇನ್ನೂ ಸಿಕ್ಕಿಲ್ಲ. ಹತ್ಯೆಗೆ ಸಹಕಾರ ಮಾಡಲೆಂದೇ ಇಬ್ಬರು ಹುಡುಗಿಯರು ಕರೆ ಮಾಡಿದ್ದಾರಾ? ಅಥವಾ ನಿಜವಾಗಿಯೂ ಸಹಾಯ ಕೇಳಿ ಕರೆ ಮಾಡಿದ್ದಾರಾ ಎಂಬುದು ಮುಂದಿನ ಪೊಲೀಸ್ ತನಿಖೆಯಲ್ಲಿ ತಿಳಿದು ಬರಬೇಕಿದೆ.

ಹರ್ಷ ಹಾಗೂ ಖಾಸಿಫ್ ನಡುವೆ ಹಲವು ಬಾರಿ ತಿಕ್ಕಾಟ ನಡೆದಿರುವ ಕಾರಣಕ್ಕಾಗಿ ಹಿಂದೂ ಕಾರ್ಯಕರ್ತ ಹರ್ಷನ ಮೇಲೆ 2016 ಮತ್ತು 2017ರಿಂದಲೇ ಕಣ್ಣಿಟ್ಟಿದ್ದರು ಎಂಬುದು ಪೊಲೀಸ್ ತನಿಖೆಯಲ್ಲಿ ಗೊತ್ತಾಗಿದೆ

ಧಾರ್ಮಿಕ ಭಾವನೆಗೆ ಧಕ್ಕೆ ತಂದು ಕೋಮು ಸೌಹಾರ್ದವನ್ನು ಹಾಳು ಮಾಡಲಾಗುತ್ತಿದೆ ಎಂಬ ಕೇಸ್ ಆದಾಗಿಂದ ಹರ್ಷ ವಿರುದ್ಧ ಖಾಸಿಫ್ ದ್ವೇಷ ಸಾಧಿಸುತ್ತಿದ್ದರು.

ಆಗ ಹರ್ಷ ವಿರುದ್ಧ ಎರಡು ಕೇಸ್‍ಗಳನ್ನು ಸಹ ಪೊಲೀಸರು ಹಾಕಿದ್ದರು. ಈ ನಡುವೆ 2020ರಲ್ಲಿ ಜೈಲಿನಲ್ಲಿ ಒಮ್ಮೆ ಹರ್ಷ ಮತ್ತು ಖಾಸಿಫ್ ಗಲಾಟೆ ಮಾಡಿಕೊಂಡಿದ್ದರು.

ಆನಂತರ ಕೆಲ ತಿಂಗಳ ಹಿಂದೆ ಕೋರ್ಟ್ ಬಳಿ ಹಾಗೂ ಹೋಟೆಲ್ ಮುಂದೆ ಗಲಾಟೆ ಮಾಡಿಕೊಂಡಿದ್ದರು.

ಬಳಿಕ ಹರ್ಷನನ್ನು ಹೊಡೆಯಬೇಕು ಎಂದು ಖಾಸಿಫ್ ತೀರ್ಮಾನ ಮಾಡಿದ್ದ. ಆದರೆ ಯಾವತ್ತು ಹೊಡೆಯಬೇಕು ಎಂಬುದು ತೀರ್ಮಾನ ಆಗಿರಲಿಲ್ಲ.

ಖಾಸಿಫ್ ಮತ್ತು ಆತನ ಸಹಚರರಿಗೆ ಹರ್ಷ ಚಲನವಲನದ ಬಗ್ಗೆ ನಿಗಾ ಇಡುವಂತೆ ತಿಳಿಸಿದ್ದ. ಕಳೆದ ಎರಡು ತಿಂಗಳಿಂದ ಹರ್ಷನನ್ನು ಆರೋಪಿಗಳು ಗಮನಿಸುತ್ತಿದ್ದರು.

ಹರ್ಷ ಎಲ್ಲಿ ಹೋಗ್ತಾನೆ, ಎಲ್ಲಿ ಬರ್ತಾನೆ ಯಾವಾಗ ಒಂಟಿ ಆಗಿರುತ್ತಾನೆ ಎನ್ನುವ ಮಾಹಿತಿಯನ್ನು ಕಲೆ ಹಾಕಿದ್ದರು.

ಹಿಜಬ್ ಗಲಾಟೆ ನಂತರ ಹರ್ಷನ ಮೇಲೆ ಮತ್ತಷ್ಟು ದ್ವೇಷ ಕಟ್ಟಿಕೊಂಡಿದ್ದ ಇವರು, ಕೃತ್ಯ ನಡೆದ ದಿನ ಹರ್ಷ ಒಬ್ಬನೇ ಇರುವುದು ಆರೋಪಿಗಳ ಕಣ್ಣಿಗೆ ಬಿದ್ದಿತ್ತು.

ಯಾವಾಗಾದರೂ ಹೊಡೆಯಬೇಕು ಎಂದು ತೀರ್ಮಾನ ಮಾಡಿದ್ದ ಆರೋಪಿಗಳಿಗೆ ಹರ್ಷ ಒಂಟಿಯಾಗಿ ಸಿಕ್ಕಿ ಹಾಕೊಂಡಿದ್ದ. ಯಾವಾಗಲೂ ಚಾಕು ಡ್ಯಾಗರ್‍ಗಳನ್ನು ತಮ್ಮ ವಾಹನದಲ್ಲಿ ಇಟ್ಟುಕೊಳ್ಳುತ್ತಿದ್ದ ಆರೋಪಿಗಳು, ಹರ್ಷ ಸಿಕ್ಕಾಗ ಇವನದು ಜಾಸ್ತಿ ಆಗಿದೆ ಮುಗಿಸಿ ಬಿಡುವ ಎಂದು ಅಟ್ಯಾಕ್ ಮಾಡಿದ್ದಾರೆ. ಅಟ್ಯಾಕ್ ಮಾಡಿದವರ ಪೈಕಿ ಇನ್ನೂ ಕೆಲವು ಆರೋಪಿಗಳು ತಲೆಮರೆಸಿಕೊಂಡಿದ್ದು, ಪೊಲೀಸರು ಹುಡುಕಾಟ ನಡೆಸಿದ್ದಾರೆ.

Share This Article
Leave a comment