ತಂದೆಯ ತಿಥಿ ಕಾರ್ಯಕ್ಕೆಂದು ಮಗಳು ಅಡುಗೆ ಮಾಡುವಾಗ ಸಿಲಿಂಡರ್ ಸ್ಪೋಟ ಗೊಂಡು ಧಾರುಣವಾಗಿ ಸಾವನ್ನಪ್ಪಿದ
ಘಟನೆ ಬೆಂಗಳೂರಿನ ಕೆ ಎಸ್ ಲೇಔಟ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮಗಳು ಪರಮೇಶ್ವರಿ (42) ಮೃತ ಮಹಿಳೆ.
ಮನೆ ಚಿಕ್ಕದಾಗಿದ್ದು ಕೋಣೆಯಲ್ಲೇ ಸ್ಟೌವ್ ಇಟ್ಟು ಅಡುಗೆ ಮಾಡಲು ತಯಾರಿ ನಡೆಸಿದ್ದರು.
ಇದೇ ವೇಳೆ ಗ್ಯಾಸ್ ಸೋರಿಕೆಯಾಗಿ ಸ್ಟೌವ್ ಬೆಂಕಿಯ ತೀವ್ರತೆಗೆ ಗ್ಯಾಸ್ ಫ್ಲೇಮ್ ದೊಡ್ಡದಾಗಿ ಹೊತ್ತಿಕೊಂಡಿದೆ.
ಬೆಂಕಿಯ ತೀವ್ರತೆಯ ಪರಿಣಾಮ ಕಾಶಿನಾಥ್‍ರ ಪತ್ನಿ ಸೌಭಾಗ್ಯ (75) ದೇಹ ಹೆಚ್ಚು ಸುಟ್ಟಿದೆ. ಮಗ ಶರವಣ (43) ತಲೆ ಮತ್ತು ಕೈ ಕಾಲು, ಹೊಟ್ಟೆ ಭಾಗ ಸುಟ್ಟಿದೆ. ಸಂಬಂಧಿ ಪರಮಶಿವಂ (47) ಕೈ ಕಾಲು ಸುಟ್ಟು ಹೋಗಿದೆ.
ಪರಮಶಿವಂ ಪತ್ನಿ ಭುವನೇಶ್ವರಿ (40) ತಲೆ, ಕೈ ಮತ್ತು ಒಂದು ಕಾಲು ಸುಟ್ಟಿದೆ. ಮತ್ತೊಬ್ಬ ಸಂಬಂಧಿ ಮಾಲಾ (60) ಕೈ , ಕತ್ತಿನ ಭಾಗ ಸುಟ್ಟಿದ್ದು, ಗಾಯಾಳುಗಳಿಗೆ ವಿಕ್ಟೋರಿಯಾದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ
ಕಾಂಗ್ರೆಸ್ ಸಚಿವರಿಗೆ ರನ್ಯಾ ರಾವ್ ಕರೆ: ಶಾಸಕ ಭರತ್ ಶೆಟ್ಟಿಯಿಂದ ಗಂಭೀರ ಆರೋಪ