February 21, 2026

Newsnap Kannada

The World at your finger tips!

13 ladies

ಯುಪಿಯಲ್ಲಿ ದುರಂತ : ಮದುವೆ ಕಾರ್ಯಕ್ರಮದಲ್ಲಿ 13 ಮಂದಿ ಮಹಿಳೆಯರು ಸಾವು

Spread the love

ಮದುವೆ ಮನೆಯಲ್ಲಿ ಹಳೆಯ ಬಾವಿಯ ಮೇಲೆ ಇದ್ದ ಚಪ್ಪಡಿ ಕಲ್ಲು ಕುಸಿದ ಪರಿಣಾಮ ಬಾವಿಗೆ ಬಿದ್ದು 13 ಮಂದಿ ಸಾವನ್ನಪ್ಪಿದ್ದಾರೆ.

ಈ ಘಟನೆ ಉತ್ತರ ಪ್ರದೇಶದ ಕುಶಿನಗರದ ನೆಬುವಾ ನೌರಂಗಿಯಾದಲ್ಲಿ ನಡೆದ
ಮದುವೆ ಕಾರ್ಯಕ್ರಮದಲ್ಲಿ ಈ ದುರ್ಘಟನೆ ನಡೆದಿದೆ.

ಅವಘಡದಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಜಿಲ್ಲಾಧಿಕಾರಿ ಎಸ್​​.ರಾಜಲಿಂಗಮ್ ನೀಡಿರುವ ಮಾಹಿತಿ ಪ್ರಕಾರ, ಬಾವಿ ಮೇಲೆ ಹಾಕಿದ್ದ ಚಪ್ಪಡಿ (ಸ್ಲ್ಯಾಬ್) ಮೇಲೆ ಕೂತಿದ್ದರು. ಆದರೆ ಚಪ್ಪಡಿ ಮೇಲೆ ಜನ ಹೆಚ್ಚಾಗಿದ್ದರಿಂದ ಭಾರ ತಡೆಯಲಾಗದೇ ಹಠಾತ್ ಕುಸಿದಿದೆ. ಪರಿಣಾಮ 15 ಮಹಿಳೆಯರು ಬಾವಿಗೆ ಬಿದ್ದಿದ್ದಾರೆ ಎಂದಿದ್ದಾರೆ.

13 ಮಂದಿ ಸಾವನ್ನಪ್ಪಿದ್ದಾರೆ, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಈ ಘಟನೆ ಮದುವೆ ನಡೆಯುತ್ತಿದ್ದಾಗ ನಡೆದಿದೆ. ಬಾವಿ ಮೇಲೆ ಹಾಕಿದ್ದ ಸ್ಲ್ಯಾಬ್ ಮೇಲೆ ಭಾರ ಹೆಚ್ಚಾಗಿದ್ದರಿಂದ ಅವಘಡ ಸಂಭವಿಸಿದೆ.

ಮೃತರ ಕುಟುಂಬಕ್ಕೆ ತಲಾ 4 ಲಕ್ಷ ಪರಿಹಾರ ಘೋಷಣೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.

ದುರಂತಕ್ಕೆ ಪ್ರಧಾನಿ ನರೇಂದ್ರ ಮೋದಿ, ಸಿಎಂ ಯೋಗಿ ಆದಿತ್ಯನಾಥ್ ಸಂತಾಪ ಸೂಚಿಸಿದ್ದಾರೆ.

error: Content is protected !!