ಮುಸ್ಲಿಮರದ್ದು ವಿಶ್ವ ಭ್ರಾತೃತ್ವ ಅಲ್ಲ, ಇಸ್ಲಾಂ ಭ್ರಾತೃತ್ವ ಎಂದು ಡಾ.ಬಿ.ಆರ್.ಅಂಬೇಡ್ಕರ್ ಬಹಳ ಹಿಂದೆಯೇ ಹೇಳಿದ್ದರು. ಅವರೊಟ್ಟಿಗೆ ಶಾಂತಿ, ಸಹಬಾಳ್ವೆಯಿಂದ ಬದುಕಲು ಸಾಧ್ಯವಿಲ್ಲ ಎಂದು ಸ್ವತಃ ಅಂಬೇಡ್ಕರ್ ತಮ್ಮ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆಂದು ಸಂಸದ ಪ್ರತಾಪ್‌ಸಿಂಹ ಹೇಳಿದರು
ಮೈಸೂರಿನಲ್ಲಿ ಸುದ್ದಿಗಾರರಜೊತೆ ಮಾತನಾಡಿದ ಸಂಸದ ಪ್ರತಾಪ್ ಸಿಂಹ ಎಲ್ಲರೂ ಭಾರತ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದರೆ, ಮುಸಲ್ಮಾನರು ಕಿಲಾಫತ್ ಚಳವಳಿ ನಡೆಸುತ್ತಿದ್ದರು. ಆ ಮೂಲಕ ಖಲೀಫನ ಪರವಾಗಿ ಇದ್ದರು. ಇವರ (ಮುಸಲ್ಮಾನರು) ನಿಷ್ಠೆ ಭಾರತದ ಗಡಿಯಾಚೆಗಿದೆ ಎಂಬುದನ್ನು ಭಾರತೀಯ ಸ್ವಾತಂತ್ರ್ಯ ಹೋರಾಟಗಾರರು ಮೊದಲೇ ತಿಳಿಯಬೇಕಿತ್ತು ಎಂದರು.
ಆದರೆ ನಮ್ಮ ಅಂಬೇಡ್ಕರ್ ಒಬ್ಬರೇ ಈ ಸತ್ಯವನ್ನು ಅರಿತಿದ್ದರು. ಥಾಟ್ಸ್ ಆನ್ ಪಾಕಿಸ್ತಾನ್ ಪುಸ್ತಕದಲ್ಲಿ ಮುಸಲ್ಮಾನರು ಖಲೀಫನ ಪರವಾಗಿ ಹೋರಾಡುತ್ತಿದ್ದಾರಲ್ಲ. ಇವರ ಜೊತೆ ನಾವು ಒಟ್ಟಿಗೆ ಶಾಂತಿ, ಸಹಬಾಳ್ವೆಯಿಂದ ಬದುಕಲು ಸಾಧ್ಯವಿಲ್ಲ ಅಂತ ಅಂಬೇಡ್ಕರರಿಗೆ ಅರ್ಥವಾಗಿತ್ತು ಎಂದು ತಿಳಿಸಿದ್ದಾರೆ.
ಅಂಬೇಡ್ಕರ್ ಅವರಿಗೆ ಹಿಂದೂಗಳ ಮನಸ್ಥಿತಿ ಗೊತ್ತಿತ್ತು. ಮಕ್ಕಳು ಹುಟ್ಟಿದ ತಕ್ಷಣ ಕುರಾನ್ ಬೈಬಲ್ ಕೊಡುತ್ತಾರೆ. ನಮ್ಮ ಮನೆಯಲ್ಲಿ ಮಗು ಹುಟ್ಟಿದಾಗ ಗಣಿತ, ವಿಜ್ಞಾನ, ಪುಸ್ತಕ ಕೊಡುತ್ತಾರೆ. ನಾವು ದಿನದಲ್ಲಿ 5 ದಿನ ಅಲ್ಲಾ ಒಬ್ಬನೇ ದೇವರು ಅಂತ ಹೇಳುವುದಿಲ್ಲ. ಆದರೆ ಅವರು ಅಲ್ಲಾ ಒಬ್ಬನೇ ದೇವರು ಏಸು ಒಬ್ಬನೇ ದೇವರು ಅಂತ ಬೋಧಿಸುತ್ತಾರೆ. ಇದರಿಂದ ಮಗು ಮುಂದೆ ಏನು ಕಲಿಯುತ್ತದೆ. ಎಷ್ಟೇ ವಿದ್ಯಾವಂತರಾದರೂ ಇದು ತಲೆಯಲ್ಲೇ ಇರುತ್ತದೆ. ನಮ್ಮ ಮಕ್ಕಳಿಗೆ ಈ ರೀತಿ ಹೇಳುವುದಿಲ್ಲ. ಇವರು ನಮಗೆ ಜಾತ್ಯಾತೀತೆಯ ಪಾಠ ಹೇಳುವ ಅವಶ್ಯಕತೆ ಇಲ್ಲ. ನಮ್ಮ ನಡುವಳಿಕೆಯಲ್ಲೇ ಜಾತ್ಯಾತೀತತೆ ಇದೆ. ಇದು ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೂ ಗೊತ್ತಿತ್ತು. ನಮ್ಮ ಧರ್ಮ ಒಬ್ಬ ವ್ಯಕ್ತಿಯ ಚಿಂತನೆಯಿಂದ ಬಂದಿರುವುದಿಲ್ಲ ಎಂದು ಹೇಳಿದ್ದಾರೆ.
- ಮೈಸೂರು- 40 ಸಾವಿರ ಲಂಚ ಸ್ವೀಕರಿಸುತ್ತಿದ್ದ ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ
- IDBI ಬ್ಯಾಂಕಿನಲ್ಲಿ 600 ಹುದ್ದೆಗಳ ನೇಮಕಾತಿ – 2024
- ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ
- ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ: 25 ಕಡೆಗಳಲ್ಲಿ ಪರಿಶೀಲನೆ
- ಮಂಡ್ಯ ಸಾಹಿತ್ಯ ಸಮ್ಮೇಳನಕ್ಕೆ ಗೊ.ರು.ಚ ಆಯ್ಕೆ
- ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಮತ್ತು ಸಾಯಿರಾ ಬಾನು ವಿಚ್ಛೇದನ
More Stories
ಮೈಸೂರು- 40 ಸಾವಿರ ಲಂಚ ಸ್ವೀಕರಿಸುತ್ತಿದ್ದ ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ
ನಕ್ಸಲ್ ನಾಯಕ ವಿಕ್ರಂ ಗೌಡ ಎನ್ಕೌಂಟರ್: ಗೃಹಸಚಿವ ಪರಮೇಶ್ವರ್ ದೃಢೀಕರಣ