January 29, 2026

Newsnap Kannada

The World at your finger tips!

kusuma

ವಿದ್ಯಾವಂತೆ, ಮಹಿಳೆ ನಂತರ ರವಿ ಪತ್ನಿ- ಕುಸುಮಾ

Spread the love

ಡಿ.ಕೆ.ರವಿ ಪತ್ನಿ ಎಂದು ನನಗೆ ಟಿಕೆಟ್ ಕೊಟ್ಟಿಲ್ಲ. ವಿದ್ಯಾವಂತೆ, ಮಹಿಳೆ ಎಂಬ ಕಾರಣಕ್ಕೆ ಟಿಕೆಟ್ ಕೊಟ್ಟಿದ್ದಾರೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಖಚಿತ ಎಂದು ಕುಸುಮಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮಾಧ್ಯಮ ಗಳ ಜೊತೆ ಮಾತನಾಡಿದ ಕುಸುಮಾ ನಾನು ಹನುಮಂತರಾಯಪ್ಪನ ಮಗಳ ಜತೆಗೆ ಡಿ.ಕೆ.ರವಿ ಪತ್ನಿ ಕೂಡ ಹೌದು. ಗೌರಮ್ಮ ನನ್ನ ತಾಯಿ ಇದ್ದಂತೆ. ಅವರ ಆಶೀರ್ವಾದ ಸದಾ ನನ್ನ ಮೇಲೆ ಇದೆ. ಅವರು ಏನೇ ಮಾತನಾಡಿದರೂ ಅದೇ ನನ್ನ ಪಾಲಿಗೆ ಆಶೀರ್ವಾದ ಎಂದು ದಿವಂಗತ ಡಿ.ಕೆ.ರವಿ ಪತ್ನಿ ಕುಸುಮಾ ಹೇಳಿದ್ದಾರೆ.

ರಾಜ್ಯದಲ್ಲೀಗ ಉಪಚುನಾವಣೆ ಸಮರ ರಂಗೇರಿದೆ. ಕಮಲ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಎಚ್. ಕುಸುಮಾ ಅಖಾಡಕ್ಕಿಳಿದಿದ್ದಾರೆ. ಈ ಕುರಿತು ಕಳೆದ ವಾರವಷ್ಟೇ ಆಕ್ರೋಶ ಹೊರಹಾಕಿದ್ದ ಡಿ.ಕೆ.ರವಿ ತಾಯಿ ಗೌರಮ್ಮ, ‘ನನ್ನ ಮಗನ ಹೆಸರು ಮತ್ತು ಫೋಟೋ ಹಾಕಿಕೊಂಡು ಚುನಾವಣೆಗೆ ನಿಲ್ಲಬಾರದು. ಅಪ್ಪಿತಪ್ಪಿ ನನ್ನ ಮಗನ ಫೋಟೋ ಬಳಸಿದರೆ ಹುಡುಗರನ್ನು ಕರೆದುಕೊಂಡು ಹೋಗಿ ಪ್ರಚಾರ ಪತ್ರಗಳಿಗೆ ಬೆಂಕಿ ಹಚ್ಚಿಸ್ತೀನಿ’ ಎಂದು ಸೊಸೆ ವಿರುದ್ಧ ಕಿಡಿಕಾರಿದ್ದರು. ಗೌರಮ್ಮರ ಈ ಹೇಳಿಕೆ ಚುನಾವಣೆ ಸಮರದಲ್ಲಿ ಭಾರೀ ಸಂಚಲನ ಮೂಡಿಸಿತ್ತು.

error: Content is protected !!