March 11, 2026

Newsnap Kannada

The World at your finger tips!

birappa

ಶ್ರೀರಂಗಪಟ್ಟಣ ಇಓ ಭೈರಪ್ಪ ಅಮಾನತ್ತಿಗೆ ಕ್ರಮ – ಸಚಿವ ಗೋಪಾಲಯ್ಯ

Spread the love

ಶ್ರೀರಂಗಪಟ್ಟಣ ಇಓ ಭೈರಪ್ಪ ಲಂಚ ಬೇಡಿಕೆ ಆರೋಪದ ಹಿನ್ನೆಲೆಯಲ್ಲಿ
ಆತನನ್ನು ಅಮಾನತು ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ ತಿಳಿಸಿದರು
ಮಂಡ್ಯದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಚಿವ ಗೋಪಾಲಯ್ಯ ನನಗೆ ಬೆಳಿಗ್ಗೆ ಮಾಧ್ಯಮದವರಿಂದ ಮಾಹಿತಿ ಸಿಕ್ಕಿದೆ. ಮೊದಲು ಆತ ಸಸ್ಪೆಂಡ್ ಆಗಲಿ. ಬಳಿಕ ಉನ್ನತ ಅಧಿಕಾರಿಗಳಿಂದ ಎಲ್ಲಾ ವಿಚಾರ ತನಿಖೆ ಮಾಡಿಸುತ್ತೇನೆ ಎಂದರು.

ನಾನು ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ. ತನಿಖೆ ನಂತರ ಬೇರೆ ಅಧಿಕಾರಿಗಳು ಭಾಗಿಯಾಗಿದ್ದಾರ ಇಲ್ಲವೆ ಎಂಬುದು ಗೊತ್ತಾಗಲಿದೆ. ತನಿಖೆಯಲ್ಲಿ ಬೇರೆ ಅಧಿಕಾರಿಗಳು ಭಾಗಿಯಾಗಿದ್ದರೆ ಅವರುಗಳ ಮೇಲು ಕ್ರಮ ತೆಗೆದುಕೊಳ್ಳುತ್ತೇವೆ‌ ಎಂದರು.

error: Content is protected !!