December 26, 2024

Newsnap Kannada

The World at your finger tips!

kannaiah kumar

ಕನ್ಹಯ್ಯ ಕುಮಾರ್ ಮೇಲೆ ಆ್ಯಸಿಡ್ ದಾಳಿ ಪ್ರಯತ್ನ – ಕಾಂಗ್ರೆಸ್​ ಆರೋಪ

Spread the love

ಉತ್ತರ ಪ್ರದೇಶದ ಚುನಾವಣೆಗಾಗಿ ಕಾಂಗ್ರೆಸ್​ ಅಭ್ಯರ್ಥಿಗಳ ಪರ ಲಖನೌನಲ್ಲಿ ಮತ ಯಾಚಿಸಲು ಮನೆ ಮನೆಗೆ ತೆರಳಿದ್ದ ವೇಳೆ ಕನ್ಹಯ್ಯ ಕುಮಾರ್​ಗೆ ಮಸಿ ಬಳಿಯುವ ಪ್ರಯತ್ನ ನಡೆದಿದೆ. ಆದರೆ ಕನ್ಹಯ್ಯ ಮೇಲೆ ಆಸಿಡ್ ದಾಳಿಯ ಪ್ರಯತ್ನ ನಡೆದಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಕಿಡಿಗೇಡಿಗಳು ಕನ್ಹಯ್ಯ ಕುಮಾರ್ ಮೇಲೆ ಆ್ಯಸಿಡ್ ಎಸೆಯಲು ಪ್ರಯತ್ನಿಸಿದ್ದಾರೆ. ಅದು ವಿಫಲವಾಗಿದೆ. ಆದರೂ ಕೆಲವು ಯುವಕರ ಮೇಲೆ ಬಿದ್ದಿದೆ ಎಂದು ಕಾಂಗ್ರೆಸ್ ​ ಆರೋಪಿಸಿದೆ.

ಕನ್ಹಯ್ಯ ಕುಮಾರ್ ಮೇಲೆ ಮಸಿ ಎರೆಚಲು ಪ್ರಯತ್ನಿಸಿದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಉತ್ತರ ಪ್ರದೇಶದ ಪೊಲೀಸರು ಮಾಹಿತಿ ನೀಡಿದ್ದಾರೆ.

ಲಖನೌ ನಲ್ಲಿ ಪ್ರಚಾರ ಮಾಡುತ್ತಿದ್ದ ವೇಳೆ ವ್ಯಕ್ತಿಯೊಬ್ಬ ಕನ್ಹಯ್ಯ ಕುಮಾರ್​ಗೆ ಮಸಿ ಎರೆಚಲು ಮುಂದಾಗಿದ್ದಾನೆ. ಈ ಘಟನೆ ಮಂಗಳವಾರ ನಡೆದಿದೆ.

ಕನ್ಹಯ್ಯ ಕುಮಾರ್ ಮೇಲೆ ಎಸೆದದ್ದು ಮಸಿ ಅಲ್ಲ, ಒಂದು ವಿಧವಾದ ರಾಸಾಯನಿಕ ಪದಾರ್ಥ ಎಂದು ಕಾಂಗ್ರೆಸ್​ ಆರೋಪಿಸಿದೆ.

Copyright © All rights reserved Newsnap | Newsever by AF themes.
error: Content is protected !!