ಚಲಿಸುತ್ತಿದ್ದ ಬಿಎಂಟಿಸಿ ಬಸ್ನಲ್ಲಿ ಬೆಂಕಿ ಕಾಣಿಸಿಕೊಂಡು ಕ್ಷಣಾರ್ಧದಲ್ಲಿ ಬಸ್ ಸುಟ್ಟು ಕರಕಲಾಗಿದೆ, ಯಾವುದೇ ಅನಾಹತ ಸಂಭವಿಸಿಲ್ಲ. ಈ ಘಟನೆ ಬೆಂಗಳೂರಿನ ಜಯನಗರದ ಮೆಟ್ರೋ ಸ್ಟೇಷನ್ ಹಿಂಭಾಗ ನಡೆದಿದೆ.
ಮೆಜೆಸ್ಟಿಕ್ನಿಂದ ಜಯನಗರ ಕಡೆ ಸುಮಾರು 30 ಜನ ಪ್ರಯಾಣಿಕರು ಪ್ರಯಾಣಿಸುತ್ತಿದ್ದ ಬಿಎಂಟಿಸಿ ಬಸ್ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ.
ಬಸ್ನಲ್ಲಿ ಇದ್ದಕ್ಕಿದ್ದಂತೆ ಸೌಂಡ್ ಕೇಳಿ ಅನುಮಾನ ವ್ಯಕ್ತಪಡಿಸಿದ ಡ್ರೈವರ್ ಕೆಂಪರಾಜು ಬಸ್ ನಿಲ್ಲಿಸಿ ನೋಡುತ್ತಿದ್ದಂತೆ ಬಸ್ನಲ್ಲಿ ಹೊಗೆಯಾಡಲು ಆರಂಭವಾಗಿತ್ತಂತೆ.
ತಕ್ಷಣವೇ ಕಂಡಕ್ಟರ್ಗೆ ತಿಳಿಸಿ ಪ್ರಯಾಣಿಕರನ್ನು ಕೆಳಗಿಳಿಸಿದ್ದಾರೆ. ಪ್ರಯಾಣಿಕರೆಲ್ಲರು ಕೆಳಗಿಳಿಯುತ್ತಿದ್ದಂತೆ ಬೆಂಕಿ ಹೊತ್ತಿಕೊಂಡು ಬಸ್ ಸಂಪೂರ್ಣವಾಗಿ ಹೊತ್ತಿ ಉರಿದಿದೆ. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಯಶಸ್ವಿಯಾಗಿ ಬೆಂಕಿ ಆರಿಸಿದ್ದಾರೆ.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ
ಕಾಂಗ್ರೆಸ್ ಸಚಿವರಿಗೆ ರನ್ಯಾ ರಾವ್ ಕರೆ: ಶಾಸಕ ಭರತ್ ಶೆಟ್ಟಿಯಿಂದ ಗಂಭೀರ ಆರೋಪ