ಮಂಡ್ಯ ಜಿಲ್ಲಾ ಹಾಲು ಒಕ್ಕೂಟದಲ್ಲಿ ಹಾಲಿಗೆ ನೀರು ಮಿಶ್ರಣ ಹಗರಣದ ನಂತರ ಈಗ ಹಾಲಿಗೆ ರಾಸಾಯನಿಕ ಬೆರೆಸುತ್ತಿರುವ ಅಂಶ ಬೆಳಕಿಗೆ ಬಂದಿದೆ.
ಈ ಸಂಗತಿ ರೈತರಲ್ಲಿ ಹಾಗೂ ಸಾರ್ವಜನಿಕರಲ್ಲಿ ಮನ್‌ಮುಲ್ ಮೇಲಿನ ವಿಶ್ವಾಸವನ್ನು ಕಡಿಮೆ ಮಾಡುತ್ತಿದೆ.
ಕಳೆದ ವರ್ಷವಷ್ಟೇ ಮನ್‌ಮುಲ್‌ಗೆ ಸರಬರಾಜು ಆಗುವ ಹಾಲಿಗೆ ನೀರು ಮಿಶ್ರಣವಾಗುತ್ತಿದೆ ಎಂಬ ಹಗರಣ ಬೆಳಕಿಗೆ ಬಂದಿತ್ತು.
ಪ್ರಕರಣ ಸಿಐಡಿ ತನಿಖೆಯಲ್ಲಿರುವಾಗಲೇ ಹಾಲಿಗೆ ರಾಸಾಯನಿಕ ಕಲಬೆರಕೆ ಹಗರಣ ಬೆಳಕಿಗೆ ಬಂದಿರುವುದು ರೈತರಲ್ಲಿ ಆತಂಕ ಮೂಡಿದೆ.
ಬೆಳಕಿಗೆ ಬಂದಿದ್ದು ಎಲ್ಲಿ ?
ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೆ.ಹೊನ್ನಗೆರೆ ಡೈರಿಯಿಂದ ಪೂರೈಕೆಯಾಗುತ್ತಿದ್ದ ಹಾಲಿನಲ್ಲಿ ಮೊದಲಿಗೆ ರಾಸಾಯನಿಕ ಮಿಶ್ರಣ ಪತ್ತೆಯಾಗಿದೆ.
ಗ್ರಾಮದಲ್ಲಿ ಶೇಖರಣೆಯಾದ ಹಾಲಿಗೆ ನೀರು ಹಾಗೂ ರಾಸಾಯನಿಕ ಬೆರಸಿ ಮನ್‌ಮುಲ್‌ಗೆ ವಂಚನೆ ಮಾಡುತ್ತಿರುವ ಬಗ್ಗೆ ಅಧಿಕಾರಿಗಳಿಗೆ ಅನುಮಾನ ಬಂದಿದೆ.
ನಂದಿನಿ ಹಾಲಿನ ಮೇಲೆ ಅನುಮಾನ ಮೂಡುವಂತೆ ವಂಚಕರು ಪ್ಲ್ಯಾನ್ ಮಾಡಿದ್ದಾರೆ.
ಪ್ರತಿನಿತ್ಯ 35 ಕ್ಯಾನ್ ಹಾಲು ಸರಬರಾಜು ಮಾಡುತ್ತಿದ್ದ ಕೆ.ಹೊನ್ನಲಗೆರೆ ಡೈರಿಯ ಮೇಲೆ ಅನುಮಾನ ವ್ಯಕ್ತಪಡಿಸಿದ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಇದು ಬೆಳಕಿಗೆ ಬಂದಿದೆ. ಇದೀಗ ಕೆ.ಹೊನ್ನಲಗೆರೆ ಡೈರಿಯಲ್ಲಿ ಹಾಲು ಶೇಖರಣೆ ಸ್ಥಗಿತಗೊಳಿಸುವಂತೆ ಮನ್‌ಮುಲ್ ಆಡಳಿತ ಮಂಡಳಿ ಆದೇಶ ಹೊರಡಿಸಿದೆ.
ರಾಸಾಯನಿಕ ಹೇಗೆ ಬೆರಿಸುತ್ತಾರೆ ? :
ಪರೀಕ್ಷೆಯಲ್ಲಿ ಹಾಲಿನ ಗುಣಮಟ್ಟ ಹೆಚ್ಚು ತೋರಿಸುವಂತೆ ರಾಸಾಯನಿಕ ಬೆರಕೆ ಮಾಡಲಾಗುತ್ತಿತ್ತು.
ಹಾಲಿಗೆ ನೀರು ಹಾಕಿದಾಗ ಕಡಿಮೆ ಕೊಬ್ಬಿನಾಂಶ ತೋರಬಾರದೆಂದು ರಾಸಾಯನಿಕ ಬೆರಕೆ ಮಾಡಲಾಗುತ್ತಿತ್ತು.
ಉಪ್ಪಿನಾಂಶದ ರಾಸಾಯನಿಕ ಕಲಬೆರಕೆಯನ್ನು ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.
ಟ್ಯಾಂಕರ್‌ನೊಳಗೆ ಮತ್ತೊಂದು ಬೇಬಿ ಟ್ಯಾಂಕ್ ನಿರ್ಮಿಸಿ ಕೋಟಿ ಕೋಟಿ ಹಣವನ್ನು ಹಾಲಿನ ರೂಪದಲ್ಲಿ ಮನ್‌ಮುಲ್‌ಗೆ ವಂಚಿಸುತ್ತಿದ್ದ ಗ್ಯಾಂಗ್‌ನ ನಿಜರೂಪ ಬಯಲಾಗಿದೆ.
- Weekly Horoscope: ವಾರದ ಜಾತಕ ನ. 24 ರಿಂದ ನ. 30, 2024.
- ಚನ್ನಪಟ್ಟಣದಲ್ಲಿ ಸಿ ಪಿ ಯೋಗೇಶ್ವರ್ ಗೆ ಭರ್ಜರಿ ಗೆಲುವು
- ಸಂಡೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಗೆಲುವು: ಅಧಿಕೃತ ಘೋಷಣೆ ಬಾಕಿ
- ರಾಜ್ಯದ ಉಪಚುನಾವಣೆಯಲ್ಲಿ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುನ್ನಡೆ: ಬಿಜೆಪಿಗೆ ಆಘಾತ
- ಕಾಪರ್ ಏಜ್ ಇನ್ಸ್ಟಿಟ್ಯೂಟ್ ಮಾಲೀಕ ಶರತ್ ಆತ್ಮಹತ್ಯೆ: ಕಾರಣ ನಿಗೂಢ
More Stories
ಮಂಡ್ಯ ಸಾಹಿತ್ಯ ಸಮ್ಮೇಳನಕ್ಕೆ ಗೊ.ರು.ಚ ಆಯ್ಕೆ
ಸಚಿವ ಸ್ಥಾನ ನನ್ನ ಹಕ್ಕು, ಬೇಡಿಕೆಯಲ್ಲ: ನಿಖರ ಹೇಳಿಕೆ ನೀಡಿದ ‘ಕೈ’ ಶಾಸಕ ನರೇಂದ್ರ ಸ್ವಾಮಿ
ಮಂಡ್ಯದ ಕಾರ್ಮೆಲ್ ಕಾಲೇಜಿನ ಪ್ರಥಮ, ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ