ದಳದ ಜನತಾ ಜಲಧಾರೆ ಯಾತ್ರೆಗೂ ಕೂಡ ಕೊರೊನಾ ಗ್ರಹಣ ಆವರಿಸಿದೆ.
ಕಾಂಗ್ರೆಸ್ ಮೇಕೆದಾಟು ಯಾತ್ರೆಗೆ ಪ್ರತಿಯಾಗಿ ದಳಪತಿಗಳು ಸಾರಿದ್ದ ಜಲಧಾರೆ ಯಾತ್ರೆ ಆರಂಭಕ್ಕೂ ಮುನ್ನವೇ ಅಂತ್ಯ ಕಂಡಿದೆ.
ಆ ಮೂಲಕ ವಿಪಕ್ಷಗಳ ನಡುವಿನ ಜಲಸಂಗ್ರಾಮಕ್ಕೆ ಕದನ ವಿರಾಮ ಘೋಷಣೆಯಾಗಿದೆ.
ಮೇಕೆದಾಟುವಿನಲ್ಲಿ ಪಾದಯಾತ್ರೆಯ ನಗಾರಿ ಬಾರಿಸಿ ದಳದ ಕೋಟೆಯೊಳಗೆ ಹೆಜ್ಜೆ ಹಾಕಲು ಮುಂದಾಗಿತ್ತು. ಆದ್ರೆ ಯಾತ್ರೆ ಮೇಲೆ ಕೊರೊನಾ ಗ್ರಹಣ ಬಡಿದು, ನಾಲ್ಕೇ ದಿನಕ್ಕೆ ಯಾತ್ರೆ ಅಂತ್ಯವಾಯ್ತು.
ಕೈ ಪಾಳಯ ಯಾತ್ರೆ ಘೋಷಿಸುತ್ತಿದ್ದಂತೆ ಅಲರ್ಟ್ ಆಗಿದ್ದ ದಳಪತಿಗಳು ಪ್ರತಿತಂತ್ರ ಹೆಣೆದು ಜನತಾ ಜಲಧಾರೆ ಹೆಸರಲ್ಲಿ ಜಲಸಂಗ್ರಾಮ ಸಾರಿ ಭವಿಷ್ಯಕ್ಕೆ ಬುನಾದಿ ಹಾಕಲು ಮುಂದಾಗಿದ್ದ ಅದಕ್ಕೆ ರೂಪುರೇಷೆ ಸಿದ್ಧವಾಗಿ, ಮುಹೂರ್ತ ಕೂಡ ಫಿಕ್ಸ್ ಆಗಿತ್ತು. ಆದ್ರೀಗ ದಳದ ಜನತಾ ಜಲಧಾರೆ ಯಾತ್ರೆ ನಡೆಯೋದೆ ಡೌಟ್ ಆಗಿದೆ.
ದಳಪತಿಗಳ ‘ಜಲಧಾರೆ’ ಯಾತ್ರೆಗೂ ಕೊರೊನಾ ಗ್ರಹಣ ಬಡಿದಿದೆ. ಆರಂಭಕ್ಕೆ ಮುನ್ನವೇ ಮಾಜಿ ಸಿಎಂ ಹೆಚ್ಡಿಕೆ ಘೋಷಿಸಿದ್ದ ‘ಜಲಧಾರೆ’ ಯಾತ್ರೆ ಅಂತ್ಯ ಕಾಣ್ತಿದೆ. ಆ ಮೂಲಕ ಕೈ-ದಳದ ನಡುವೆ ಶುರುವಾಗಿದ್ದ ಜಲ ಸಂಗ್ರಾಮಕ್ಕೆ ಕದನವಿರಾಮ ಘೋಷಣೆಯಾಗಿದೆ.
- ಮೈಸೂರಿನ ಪ್ರಮುಖ ರಸ್ತೆಗೆ ಸಿಎಂ ಸಿದ್ದರಾಮಯ್ಯ ಹೆಸರು: ಪಾಲಿಕೆ ತೀರ್ಮಾನಕ್ಕೆ ಆಕ್ಷೇಪಣೆಗಳು
- ಸಿ.ಟಿ. ರವಿ ಪ್ರಕರಣ CID ಗೆ ಹಸ್ತಾಂತರ: ಗೃಹ ಸಚಿವ ಜಿ. ಪರಮೇಶ್ವರ್ ಸ್ಪಷ್ಟನೆ
- ಶಾಲಾ ಕೊಠಡಿಯಲ್ಲಿ ಯುವತಿಯ ಅತ್ಯಾಚಾರ: ಆರೋಪಿ ಬಂಧನ
- ಡಿ.ಕೆ. ಸುರೇಶ್ ತಂಗಿ ಎಂದು ಹೇಳಿಕೊಂಡು 8.41 ಕೋಟಿ ಚಿನ್ನಾಭರಣ ವಂಚನೆ: ಎಫ್ಐಆರ್ ದಾಖಲು
- ಮುಡಾ ಹಗರಣ: ಬದಲಿ ನಿವೇಶನ ಹಂಚಿಕೆಯಲ್ಲಿ ಅವ್ಯವಹಾರ, ತನಿಖಾ ವರದಿ ಆಧರಿಸಿ ಸರ್ಕಾರದ ಕ್ರಮ
- ರಾಜ್ಯದಲ್ಲಿ ಮುಂದಿನ 5 ದಿನ ಮಳೆಯ ಮುನ್ಸೂಚನೆ
More Stories
ಮೈಸೂರಿನ ಪ್ರಮುಖ ರಸ್ತೆಗೆ ಸಿಎಂ ಸಿದ್ದರಾಮಯ್ಯ ಹೆಸರು: ಪಾಲಿಕೆ ತೀರ್ಮಾನಕ್ಕೆ ಆಕ್ಷೇಪಣೆಗಳು
ಸಿ.ಟಿ. ರವಿ ಪ್ರಕರಣ CID ಗೆ ಹಸ್ತಾಂತರ: ಗೃಹ ಸಚಿವ ಜಿ. ಪರಮೇಶ್ವರ್ ಸ್ಪಷ್ಟನೆ
ಶಾಲಾ ಕೊಠಡಿಯಲ್ಲಿ ಯುವತಿಯ ಅತ್ಯಾಚಾರ: ಆರೋಪಿ ಬಂಧನ