February 21, 2026

Newsnap Kannada

The World at your finger tips!

samanvi kaveri

ಪಶ್ಚಿಮ ವಾಹಿನಿಯ ಕಾವೇರಿ ನದಿಯಲ್ಲಿ ಸಮನ್ವಿ ಅಸ್ತಿ ವಿಸರ್ಜನೆ

Spread the love

ಬೆಂಗಳೂರಿನ ಕೋಣನಕುಂಟೆ ರಸ್ತೆಯಲ್ಲಿ ಸಂಭವಿಸಿದ ಅಪಘಾತದಲ್ಲಿ ಧಾರುಣವಾಗಿ ಸಾವನ್ನಪ್ಪಿದ ನಮ್ಮಮ್ಮಸ್ಟಾರ್ ಖ್ಯಾತಿಯ ಮಗು ಸಮನ್ವಿಯ ಅಸ್ತಿ ವಿಸರ್ಜನಾ ಕಾರ್ಯ ಭಾನುವಾರ ಶ್ರೀರಂಗಪಟ್ಟಣದ ಪಶ್ಚಿಮ ವಾಹಿನಿ ಬಳಿ ನಡೆಯಿತು.

ಭಾನುಪ್ರಕಾಶ್ ಶರ್ಮಾ ನೇತೃತ್ವದಲ್ಲಿ ಸಮನ್ವಿಯ ತಂದೆ ರೂಪೇಶ್​ ನಾಯ್ಡು ಅಸ್ತಿ ವಿಸರ್ಜನಾ ಕಾರ್ಯ ನೆರವೇರಿಸಿದರು.

ತಿಲ ತರ್ಪಣ, ನಾರಾಯಣ ಬಲಿ, ಪಿಂಡ ಪ್ರದಾನ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ನಡೆದವು. ಅಂತಿಮ ವಿಧಿ ವಿಧಾನ ಕಾರ್ಯದಲ್ಲಿ ಸಮನ್ವಿ ತಾತ ನಾರಾಯಣ ಸ್ವಾಮಿ ಹಾಗೂ ಕಾಳಿ ಮಠದ ರಿಷಿಕುಮಾರ ಸ್ವಾಮೀಜಿ ಭಾಗಿಯಾಗಿದ್ದರು.

error: Content is protected !!