ಹಣ ನೀಡಿ ಬೇರೆ ಬೇರೆ ಜಿಲ್ಲೆಯಿಂದ ಜನರನ್ನು ಕರೆತಂದು ಅವರಿಗೆ ಕೊರೊನಾ ಅಂಟಿಸಿ ಕಳುಹಿಸುವ ಕೆಲಸವನ್ನು ಡಿಕೆಶಿ ಬ್ರದರ್ಸ್ ಮಾಡುತ್ತಿದ್ದಾರೆ. ಹೀಗಾಗಿ ಶಿವಕುಮಾರ್ ಹಾಗೂ ಅವರ ತಂಡವನ್ನು ಕೂಡಲೇ ಬಂಧಿಸುವಂತೆ ಮಾಜಿ ಸಚಿವ ಸಿಪಿ ಯೋಗೇಶ್ವರ್ ತಾಕೀತು ಮಾಡಿದರು
ಸುದ್ದಿಗಾರರೊಂದಿಗೆ ಮಾತನಾಡಿದ ಯೋಗೇಶ್ವರ್ ಡಿಕೆಶಿಯಂತ ಭ್ರಷ್ಟನನ್ನು, ಲೂಟಿಕೋರನನ್ನು ಒಂದು ವರ್ಷ ಸಿದ್ದರಾಮಯ್ಯ ಕ್ಯಾಬಿನೆಟ್‍ಗೆ ತಗೆದುಕೊಂಡಿರಲಿಲ್ಲ. ಆದರೆ ಆನಂತರ ಹೈಕಮಾಂಡ್ ಒತ್ತಡಕ್ಕೆ ತೆಗೆದುಕೊಂಡ ನಂತರ ಸಿದ್ದರಾಮಯ್ಯ ಈಗ ವೀಕ್ ಆಗಿದ್ದಾರೆ ಎನ್ನಿಸುತ್ತದೆ. ಈ ಪುಂಡರ ಜೊತೆ ಅವರು ನಡೆಯುತ್ತಿದ್ದಾರೆ. ಆಗಾಗ ಬರ್ತಾರೆ ವಾಪಾಸ್ ಹೋಗ್ತಾರೆ ಎಂದು ವ್ಯಂಗ್ಯವಾಡಿದರು.
ಸರ್ಕಾರ ಕೊರೊನಾ ಸರಿಯಾಗಿ ನಿರ್ವಹಿಸಲಿಲ್ಲ ಎಂದು ಇದೇ ಡಿ.ಕೆ.ಶಿವಕುಮಾರ್ ಮತ್ತು ಪಟಾಲಂ ಸರ್ಕಾರದ ವಿರುದ್ಧ ಆರೋಪ ಮಾಡಿದ್ದರು. ಬಹಳಷ್ಟು ದಾಂಧಲೆಯನ್ನು ಮಾಡಿತ್ತು. ಆದರೂ ಕೊರೊನಾ ಹೆಚ್ಚಳವನ್ನು ಅರ್ಥ ಮಾಡಿಕೊಳ್ಳದೇ ಮೇಕೆದಾಟುವನ್ನು ಮಾಡುತ್ತಿದ್ದಾರೆ ಎಂದ ಅವರು, ಕಾವೇರಿ ನಮ್ಮ ನರನಾಡಿಯಲ್ಲಿದೆ. ನಾವೆಲ್ಲಾ ಅದನ್ನೇ ಕುಡಿದು ಬೆಳೆದೆವು. ಹಳೆ ಮೈಸೂರು ಭಾಗದ ಜೀವನಾಡಿ ಆಗಿದೆ ಎಂದರು.
- KSRTC : ಪ್ರಯಾಣಿಕರು UPI ಮೂಲಕ ಟಿಕೆಟ್ ಖರೀದಿಸಲು ಅವಕಾಶ
- Weekly Horoscope: ವಾರದ ಜಾತಕ ನ. 24 ರಿಂದ ನ. 30, 2024.
- ಚನ್ನಪಟ್ಟಣದಲ್ಲಿ ಸಿ ಪಿ ಯೋಗೇಶ್ವರ್ ಗೆ ಭರ್ಜರಿ ಗೆಲುವು
- ಸಂಡೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಗೆಲುವು: ಅಧಿಕೃತ ಘೋಷಣೆ ಬಾಕಿ
- ರಾಜ್ಯದ ಉಪಚುನಾವಣೆಯಲ್ಲಿ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುನ್ನಡೆ: ಬಿಜೆಪಿಗೆ ಆಘಾತ
More Stories
KSRTC : ಪ್ರಯಾಣಿಕರು UPI ಮೂಲಕ ಟಿಕೆಟ್ ಖರೀದಿಸಲು ಅವಕಾಶ
Weekly Horoscope: ವಾರದ ಜಾತಕ ನ. 24 ರಿಂದ ನ. 30, 2024.
ಚನ್ನಪಟ್ಟಣದಲ್ಲಿ ಸಿ ಪಿ ಯೋಗೇಶ್ವರ್ ಗೆ ಭರ್ಜರಿ ಗೆಲುವು