ನಟಿ ಉಮಾಶ್ರೀ ಅವರ ಕಾಲಿಗೆ ಕುದಿಯುವ ನೀರು ಬಿದ್ದು ಬೊಬ್ಬೆ ಬಂದಿರುವ ಘಟನೆ ಪುಟ್ಟಕ್ಕನ ಮಕ್ಕಳು ಧಾರವಾಹಿಯಲ್ಲಿ ಅವಘಡ ನಡೆದಿದೆ.
ಪುಟ್ಟಕ್ಕನ ಪಾತ್ರ ಮಾಡುತ್ತಿರುವ ಹಿರಿಯ ನಟಿ ಉಮಾಶ್ರೀ ಅವರಿಗೆ ಚಿತ್ರೀಕರಣದ ವೇಳೆ ಗಾಯವಾಗಿದೆ. ಮೇಕೆದಾಟು ಪಾದಯಾತ್ರೆ ಮುಗಿಸಿಕೊಂಡು ಇಂದು ಶೂಟಿಂಗ್‌ನಲ್ಲಿ ಭಾಗಿಯಾಗಿದ್ದ ನಟಿ ಉಮಾಶ್ರೀ ಅವರ ಕಾಲಿನ ಮೇಲೆ ಬಿಸಿ ನೀರು ಬಿದ್ದಿದೆ. ಕೂಡಲೇ ಅವರನ್ನು ತಲಘಟ್ಟಪುರದ ಶಂಕರ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.
ಇಂದು ಬೆಳಗ್ಗೆ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದ ಉಮಾಶ್ರೀ ಅವರು ತಮ್ಮ ಸೀನ್ ಮುಗಿಸಿಕೊಂಡು ಕುಳಿತ್ತಿದ್ದರು. ಈ ವೇಳೆ ಇನ್ನೊಂದು ಸೀನ್ ಚಿತ್ರೀಕರಣ ವೇಳೆ ಮಕ್ಕಳ ಪಾತ್ರ ಮಾಡುತ್ತಿರುವ ನಟಿಯರಿಗೆ ಬಿಸಿ ನೀರನ್ನು ಹೇಗೇ ಕೆಳಗೆ ಸುರಿಯಬೇಕು ಅಂತಾ ಹೇಳಿಕೊಡಲು ಮುಂದಾದರು.
ಈ ವೇಳೆ, ಬಿಸಿ ನೀರು ಅವರ ಎರಡು ಕಾಲಿನ ಪಾದಗಳ ಮೇಲೆ ಬಿದ್ದಿದೆ. ಸದ್ಯ ಚಿಕಿತ್ಸೆ ಪಡೆದಿರುವ ನಟಿ ಉಮಾಶ್ರೀ, ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು