ಮುಂದಿನ ತಿಂಗಳು ನಡೆಯಲಿರುವ ಉತ್ತರ ಪ್ರದೇಶ ಮತ್ತು ಉತ್ತರಾಖಂಡ್ ನಲ್ಲಿ ಬಿಜೆಪಿ ಬಹುಮತ ಮೂಲಕ ಜಯಗಳಿಸಲಿದೆ ಎಂದು ಟೈಮ್ಸ್ ನೌ ಸಮೀಕ್ಷೆ ಹೇಳಿದೆ.
ಈ ಬಾರಿ ಯಾವ ರಾಜ್ಯದಲ್ಲಿ ಯಾರು ಜಯಗಳಿಸಬಹುದು ಎಂಬ ಲೆಕ್ಕಾಚಾರ ಆರಂಭವಾಗಿದೆ. ಹೀಗಾಗಿ ಟೈಮ್ಸ್ ನೌ ಚುನಾವಣಾ ಪೂರ್ವ ಸಮೀಕ್ಷೆ ನಡೆಸಿ , ಉತ್ತರಾಖಂಡ್, ಉತ್ತರ ಪ್ರದೇಶದಲ್ಲಿ ಬಿಜೆಪಿ ಸ್ಪಷ್ಟ ಬಹಮತ ಪಡೆಯಲಿದೆಯಂತೆ.
ಗೋವಾ, ಮಣಿಪುರದಲ್ಲಿ ಅತಂತ್ರ ಫಲಿತಾಂಶ ಬರಲಿದೆ ಪಂಜಾಬ್‌ನಲ್ಲಿ ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಬರಬಹುದು ಎಂದು ಭವಿಷ್ಯ ನುಡಿಯಲಾಗಿದೆ.
ಯಾವ ರಾಜ್ಯದಲ್ಲಿ ಯಾರಿಗೆ ಎಷ್ಟು ಸ್ಥಾನ :
ಉತ್ತರ ಪ್ರದೇಶ:
ಒಟ್ಟು 403 ಸ್ಥಾನ .
ಬಹುಮತಕ್ಕೆ 202 ಅಗತ್ಯವಿದೆ. ಬಿಜೆಪಿ 227-254, ಎಸ್‌ಪಿ 136-151, ಬಿಎಸ್‌ಪಿ 08-18, ಕಾಂಗ್ರೆಸ್ 6-11 ಸ್ಥಾನಗಳನ್ನು ಗಳಿಸಬಹುದು.
ಉತ್ತರಾಖಂಡ:
ಒಟ್ಟು 70 ವಿಧಾನಸಭಾ ಸ್ಥಾನ
ಬಹುಮತಕ್ಕೆ 36 ಸ್ಥಾನಗಳು ಅಗತ್ಯ
ಬಿಜೆಪಿ 44-50, ಕಾಂಗ್ರೆಸ್ 12-15, ಆಪ್ 5-8, ಇತರೇ 0-2 ಸ್ಥಾನಗಳಲ್ಲಿ ಜಯಗಳಿಸಬಹುದು.
ಪಂಜಾಬ್:
ಒಟ್ಟು 117 ಕ್ಷೇತ್ರಗಳು
ಬಹುಮತಕ್ಕೆ 59 ಸ್ಥಾನ ಅಗತ್ಯ
ಆಪ್ 54-58, ಕಾಂಗ್ರೆಸ್ 44-47, ಶಿರೋಮಣಿ ಅಖಾಲಿ ದಳ 11-15, ಬಿಜೆಪಿ 1-3 ಕ್ಷೇತ್ರಗಳನ್ನು ಗೆಲ್ಲಬಹುದು.
ಗೋವಾ:
ಒಟ್ಟು 40 ಕ್ಷೇತ್ರಗಳು
ಗೋವಾದಲ್ಲಿ ಬಹುಮತಕ್ಕೆ 21 ಸ್ಥಾನಗಳ ಅಗತ್ಯ
ಬಿಜೆಪಿ 17-21, ಆಪ್ 08-11, ಕಾಂಗ್ರೆಸ್ 4-6 ಗಳಿಸಬಹುದು.
ಮಣಿಪುರ:
ಒಟ್ಟು 60 ಸ್ಥಾನ
ಬಹುಮತಕ್ಕೆ 31 ಸ್ಥಾನಗಳನ್ನು ಗೆಲ್ಲಬೇಕು.
ಬಿಜೆಪಿ 23-27, ಕಾಂಗ್ರೆಸ್ 22-27, ಎನ್‌ಸಿಎಫ್ 02-06, ಇತರರು 05-09 ಕ್ಷೇತ್ರಗಳಲ್ಲಿ ಜಯಗಳಿಸಬಹುದು.
- ₹5.50 ಲಕ್ಷ ಮೌಲ್ಯದ ಡ್ರಗ್ಸ್ ಜಪ್ತಿ, ಇಬ್ಬರು ಬಂಧನ
- ಮುಡಾ ಹಗರಣ: ಸ್ನೇಹಮಯಿ ಕೃಷ್ಣ ಮತ್ತು ಕೈ ಮುಖಂಡ ಲಕ್ಷ್ಮಣ್ ನಡುವೆ ವಾಗ್ವಾದ
- ಯೋಗ ಗುರು ಶರತ್ ಜೋಯಿಸ್ ಹೃದಯಾಘಾತದಿಂದ ನಿಧನ
- ಆಯೋಧ್ಯೆ ರಾಮಮಂದಿರಕ್ಕೆ ಸ್ಫೋಟದ ಬೆದರಿಕೆ: ಆರ್ಡಿಎಕ್ಸ್ ಬಳಸಿ ಧ್ವಂಸಗೊಳಿಸುವ ಎಚ್ಚರಿಕೆ
- ಚನ್ನಪಟ್ಟಣ ನಗರಸಭೆ ಆಯುಕ್ತ ನಾಗೇಶ್ ಅವರ ಮನೆ ಮೇಲೆ ಲೋಕಾಯುಕ್ತ ದಾಳಿ
- ರಾಜ್ಯದ ಹಲವೆಡೆ ಲೋಕಾಯುಕ್ತದಿಂದ ದಾಳಿ – ಭ್ರಷ್ಟ ಅಧಿಕಾರಿಗಳ ಮನೆ ಮತ್ತು ಕಚೇರಿಗಳ ಪರಿಶೀಲನೆ
More Stories
ಶೀಘ್ರದಲ್ಲೇ ಅಡುಗೆ ಎಣ್ಣೆಗಳ ಬೆಲೆ ಏರಿಕೆ ಸಾಧ್ಯತೆ
ಅಕ್ರಮ ಜಾಹಿರಾತು ಫಲಕ ಕುಸಿತಕ್ಕೆ 14 ಸಾವು, 74 ಜನರು ಗಂಭೀರ
ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದರೆ ರಾಮ ಮಂದಿರ ಶುದ್ಧೀಕರಣ : ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಉವಾಚ