February 27, 2026

Newsnap Kannada

The World at your finger tips!

acc j

ಜಾರ್ಖಂಡ್ : ಲಾರಿ, ಬಸ್ ಮುಖಾಮುಖಿ ಡಿಕ್ಕಿ- 6 ಮಂದಿ ಸ್ಥಳದಲ್ಲೇ ಸಾವು

Spread the love

ಗ್ಯಾಸ್ ತುಂಬಿದ ಲಾರಿ ಮತ್ತು ಬಸ್ ಮುಖಾಮುಖಿ ಡಿಕ್ಕಿಯಾಗಿ 6 ಮಂದಿ ಸಾವನ್ನಪ್ಪಿ, 15 ಪ್ರಯಾಣಿಕರಿಗೆ ಗಾಯಗೊಂಡಿರುವ ಘಟನೆ ಜಾರ್ಖಂಡ್ ರಾಜ್ಯದ ಪಾಕೂರ್ ಜಿಲೆಯಲ್ಲಿ ನಡೆದಿದೆ.

ಮಂಜು ಮುಸುಕಿದ ಕಾರಣ ಟ್ರಕ್ ಮತ್ತು ಬಸ್ ನಡುವೆ ಡಿಕ್ಕಿಯಾಗಿದೆ ಎಂದು ಹೇಳಲಾಗುತ್ತಿದೆ.

ಈ ಭೀಕರ ಅಪಘಾತದಲ್ಲಿ 6 ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬರ್ಹರ್ವಾದಿಂದ ದುಮ್ಕಾಗೆ ಹೋಗುತ್ತಿದ್ದ ಬಸ್ ಹೋಗುತ್ತಿತ್ತು.ಸಾಹಿಬ್ ಗಂಜ್ಗೋ-ಬಿಂದಪುರ ಹೆದ್ದಾರಿಯ ಕಮರ್ದಿಹಾ ಗ್ರಾಮದ ಬಳಿ ಅಪಘಾತವಾಗಿ ಸಾವು ನೋವು ಸಂಭವಿಸಿದೆ.

ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಮದಪಾರ ಠಾಣೆ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ಮಾಡುತ್ತಿದ್ದಾರೆ. ಸ್ಥಳೀಯರ ಜೊತೆಗೂಡಿ ಗಾಯಾಳುಗಳನ್ನು ಚಿಕಿತ್ಸೆಗಾಗಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ರವಾನಿಸಲಾಗಿದೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗಬಹುದು ಎಂದು ಹೇಳಲಾಗುತ್ತಿದೆ.

error: Content is protected !!