ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಕೊರೋನಾ ಸೋಂಕು ಧೃಡಪಟ್ಟಿದ್ದ ಹಿನ್ನಲೆಯಲ್ಲಿ 4 ದಿನಗಳ ಕಾಲ ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಇಂದು ಶ್ವೇತಭವನಕ್ಕೆ ಮರಳಿದ್ದಾರೆ.
ಶ್ವೇತ ಭವನ ಪ್ರವೇಶಿಸುವಾಗ ಟ್ರಂಪ್ ಮಾಸ್ಕ್ ರಹಿತರಾಗಿದ್ದರು ಮತ್ತು ಅಮೇರಿಕನ್ನು ಉದ್ದೇಶಿಸಿ ‘ಕೋವಿಡ್‌ಗೆ ಅಮೇರಿಕನ್ನರು ಭಯಪಡಬೇಕಿಲ್ಲ’ ಎಂದು ಟ್ವೀಟ್ ಮೂಲಕ ಕರೆ ನೀಡಿದ್ದಾರೆ.
ತಮ್ಮ ವಿಶೇಷ ವಿಮಾನದಲ್ಲಿ ಶ್ವೇತ ಭವನಕ್ಕೆ ಬಂದ ಅವರು, ಅತೀ ಶೀಘ್ರವೇ ಪ್ರಚಾರ ಕಾರ್ಯ ಕೈಗೊಳ್ಳುವದಾಗಿ ಹೇಳಿದ್ದಾರೆ.
‘ಟ್ರಂಪ್ ಅವರು ಆಮ್ಲಜನಕದ ಮಟ್ಟ ಸಾಮಾನ್ಯ ಸ್ಥಿತಿಯಲ್ಲಿದೆ. ಇದರಿಂದ ಅವರು ತಮ್ಮ ದೈನಂದಿನ ಕೆಲಸಗಳನ್ನು ಪೂರೈಸಿಕೊಳ್ಳುವಷ್ಟು ಸಮರ್ಥರಾಗಿದ್ದಾರೆ. ಆದರೆ ಸೋಂಕಿನಿಂದ ಪೂರ್ಣವಾಗಿ ಗುಣಮುಖರಾಗಿಲ್ಲ’ ಎಂದು ವೈದ್ಯರು ಹೇಳಿದ್ದಾರೆ.
ಇದೇ ಅಕ್ಟೋಬರ್ 15ರಂದು ನಡೆಯಲಿರುವ ಅಮೇರಿಕದ ಅಧ್ಯಕ್ಷೀಯ ಚುಣಾವಣೆಯ ಚರ್ಚೆಯಲ್ಲಿ ಡೆಮಕ್ರಾಟಿಕ್ ಪಕ್ಷದ ಜೋ ಬಿಡೆನ್ ಅವರೊಂದಿಗೆ ಟ್ರಂಪ್ ಭಾಗವಹಿಸಲಿದ್ದಾರೆ ಎಂದು ಟ್ರಂಪ್ ಪ್ರಚಾರದ ಪ್ರತಿನಿಧಿಗಳು ತಿಳಿಸಿದ್ದಾರೆ.
More Stories
KSRTC : ಪ್ರಯಾಣಿಕರು UPI ಮೂಲಕ ಟಿಕೆಟ್ ಖರೀದಿಸಲು ಅವಕಾಶ
Weekly Horoscope: ವಾರದ ಜಾತಕ ನ. 24 ರಿಂದ ನ. 30, 2024.
ಚನ್ನಪಟ್ಟಣದಲ್ಲಿ ಸಿ ಪಿ ಯೋಗೇಶ್ವರ್ ಗೆ ಭರ್ಜರಿ ಗೆಲುವು