March 13, 2026

Newsnap Kannada

The World at your finger tips!

kumarswamy1

ಗೂಂಡಾಗಿರಿ ಸಂಸ್ಕೃತಿಯಿಂದ ಬಂದವರ ಜೊತೆ ಇನ್ನೇನು ನಿರೀಕ್ಷಿಸಲು ಸಾಧ್ಯ ? ಎಚ್ ಡಿ ಕೆ

Spread the love

ರಾಮನಗರದಲ್ಲಿ ಡಿ ಕೆ ಸುರೇಶ್ ಬೆಂಬಲಿಗರಿಂದ ಹಲ್ಲೆ ಯತ್ನ ಹಾಗೂ ಗೂಂಡಾಗಿರಿ ಸಂಸ್ಕೃತಿಯಿಂದ ಬಂದವರಿಂದ ಇನ್ನೇನು ನಿರೀಕ್ಷೆ ಮಾಡಲು ಸಾಧ್ಯ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ

ಮೈಸೂರಿನಲ್ಲಿ ರಾಮನಗರದ ಸಿಎಂ ಕಾರ್ಯಕ್ರಮದಲ್ಲಿ ನಡೆದ ಗಲಾಟೆ ಕುರಿತಂತೆ ಮಾತನಾಡಿದ ಕುಮಾರಸ್ವಾಮಿ, ಸಿಎಂ ಕಾರ್ಯಕ್ರಮದಲ್ಲಿ ನಡೆದ ಗಲಾಟೆಗೆ ಸಂಬಂಧಿಸಿ ಇಂತಹ  ಜನಪ್ರತಿನಿಧಿಗಳಿಂದ ಜನರು ಹುಷಾರಾಗಿರಬೇಕು ಎಂದರು.

ಜನಪ್ರತಿನಿಧಿಗಳ ಈ ರೀತಿಯ ನಡುವಳಿಕೆ ಜನರಲ್ಲಿ ಭೀತಿಯನ್ನು ಹುಟ್ಟಿಸಿದೆ. ಅವರು ಗೂಂಡಾಗಿರಿಯ ಸಂಸ್ಕೃತಿಯಿಂದ ಬಂದವರು ಇವರಿಂದ ಇದನ್ನ ಬಿಟ್ಟು ಬೇರೆ ಏನನ್ನು ನಿರೀಕ್ಷೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.

ರಾಮನಗರ ಇಷ್ಟು ದಿನ ಶಾಂತಿಯಿಂದ ಕೂಡಿತ್ತು. ಇವತ್ತು ಅಲ್ಲಿ ಅಶಾಂತಿ ಸೃಷ್ಟಿಸುವ ಪ್ರಯತ್ನಗಳು ನಡೆದಿದೆ.
ಇವರು ಸರ್ಕಾರಿ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದಾರೆ ಅಂದ್ರೆ ತಾಳ್ಮೆ ಇರಬೇಕು. ಇವರ ಈ ನಡವಳಿಕೆ ಜನರ ಮೇಲೆ ಯಾವ ರೀತಿಯ ಪ್ರಭಾವ ಬೀರುತ್ತೆ ಎಂಬುದನ್ನು ಅವರು ಅರ್ಥ ಮಾಡಿಕೊಳ್ಳಬೇಕು. ಅಶ್ವಥ್​ ನಾರಾಯಣ್​ ಅವರ ಪದ ಬಳಕೆ ಸರಿಯಾದುದಲ್ಲ. ಇವರನ್ನು ತುಂಬಾ ಹತ್ತಿರದಿಂದ ನೋಡಿದ್ದೇವೆ ಇವರದ್ದು ದಬ್ಬಾಳಿಕೆಯ ರಾಜಕೀಯ ಇವರ ಮೇಲೆ ಕಾನೂನಿನ ಪ್ರಕಾರ ಕೇಸ್​ ದಾಖಲಿಸಬೇಕೆಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

error: Content is protected !!