ಇತ್ತೀಚೆಗೆ ಕತ್ರಿನಾ ಕೈಪ್ ಜೊತೆ ಸಪ್ತಪದಿ ತುಳಿದ ನಟ ವಿಕ್ಕಿ ಕೌಶಲ್ ಬಳಸಿದ ಬೈಕ್ನ ನಂಬರ್ ಪ್ಲೇಟ್ ಅಕ್ರಮವಾಗಿದೆ ಎಂದು ದೂರು ದಾಖಲಾಗಿದೆ
ನಟ ವಿಕ್ಕಿ ಕೌಶಲ್ ನಾಯಕರಾಗಿ ನಟಿಸಿದ ಚಲನಚಿತ್ರವೊಂರಲ್ಲಿ ತಮ್ಮ ವಾಹನದ ನಂಬರ್ ಪ್ಲೇಟ್ ಅನ್ನು ಅಕ್ರಮವಾಗಿ ಬಳಸಿದ್ದಾರೆ ಎಂಬ ಆರೋಪಿಸಿ ಇಂದೋರ್ ನಿವಾಸಿಯಾದ ಜೈ ಸಿಂಗ್ ಯಾದವ್ ವಿಕ್ಕಿಕೌಶಲ್ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದಾರೆ.
ವಿಕ್ಕಿ ಕೌಶಲ್ ಸಹ ನಟಿ ಸಾರಾ ಅಲಿ ಖಾನ್ ಜೊತೆ ಬೈಕ್ ಓಡಿಸುವ ಫೋಟೋಗಳು ಆನ್‌ಲೈನ್‌ನಲ್ಲಿ ವೈರಲ್ ಆದ ನಂತರ ಈ ದೂರು ದಾಖಲಾಗಿದೆ.
ದೂರುದಾರಜೈ ಸಿಂಗ್ ಯಾದವ್ ಮಾತನಾಡಿದ್ದು ಸಿನಿಮಾ ಸೀಕ್ವೆನ್ಸ್‌ನಲ್ಲಿ ಬಳಸಲಾದ ವಾಹನದ ಸಂಖ್ಯೆ ನನ್ನದಾಗಿದೆ. ಇದು ಚಲನಚಿತ್ರ ತಂಡಕ್ಕೆ ತಿಳಿದಿದೆಯೋ ಇಲ್ಲವೋ ಎಂದು ನನಗೆ ತಿಳಿದಿಲ್ಲ. ಆದರೆ ಇದು ಕಾನೂನುಬಾಹಿರವಾಗಿದೆ. ಅವರು ನನ್ನ ಅನುಮತಿಯಿಲ್ಲದೆ ನನ್ನ ನಂಬರ್ ಪ್ಲೇಟ್ ಅನ್ನು ಬಳಸಿದ್ದಾರೆ ಎಂದು ದೂರು ನೀಡಿದ್ದೇನೆ.
ಈ ಬಗ್ಗೆ ಸರಿಯಾದ ಕ್ರಮ ಕೈಗೊಳ್ಳಬೇಕು ಎಂದು ಪೊಲೀಸ್ ಅಧಿಕಾರಿಗಳಿಗೆ ಮನವಿ ಮಾಡಿದ್ದೇನೆ ಎಂದು ಮಾಹಿತಿ ನೀಡಿದ್ದಾರೆ.
- ರಾಜ್ಯದಲ್ಲಿ ಮುಂದಿನ 5 ದಿನ ಮಳೆಯ ಮುನ್ಸೂಚನೆ
- 10 ಸಾವಿರ ಕೋಟಿ ಕೈಗಾರಿಕೆ ಸ್ಥಾಪನೆ: ಪ್ರಸ್ತಾವನೆಗೆ ಉನ್ನತ ಮಟ್ಟದ ಸಮಿತಿ ಒಪ್ಪಿಗೆ
- ನಾನೊಬ್ಬ ರೈತ (ರೈತ ದಿನಾಚರಣೆಯ ಪ್ರಯುಕ್ತ )
- ಹೊರರಾಜ್ಯದ ಯುವತಿಯರನ್ನ ಕರೆಸಿ ಹೈಟೆಕ್ ವೇಶ್ಯಾವಾಟಿಕೆ ದಂಧೆ: ಆರೋಪಿ ಬಂಧನ
- ಬೆಂಗಳೂರಿನಲ್ಲಿ ಮಹಿಳೆಗೆ 30 ಲಕ್ಷ ರೂ. ವಂಚನೆ!
More Stories
ರಾಜ್ಯದಲ್ಲಿ ಮುಂದಿನ 5 ದಿನ ಮಳೆಯ ಮುನ್ಸೂಚನೆ
10 ಸಾವಿರ ಕೋಟಿ ಕೈಗಾರಿಕೆ ಸ್ಥಾಪನೆ: ಪ್ರಸ್ತಾವನೆಗೆ ಉನ್ನತ ಮಟ್ಟದ ಸಮಿತಿ ಒಪ್ಪಿಗೆ
ನಾನೊಬ್ಬ ರೈತ (ರೈತ ದಿನಾಚರಣೆಯ ಪ್ರಯುಕ್ತ )