November 16, 2024

Newsnap Kannada

The World at your finger tips!

peyushjain

ಸಮಾಜವಾದಿ ಪರ್ಫ್ಯೂಮ್ ಖ್ಯಾತಿಯ ಪಿಯೂಶ್ ಜೈನ್ ಬಂಧನ : 257 ಕೋಟಿ ರು ವಶಕ್ಕೆ

Spread the love

ಸಮಾಜವಾದಿ ಪಕ್ಷದ ಅತ್ಯಂತ ಬಡ ಉದ್ಯಮಿ ಬಳಿಯಲ್ಲಿ ಬರೋಬ್ಬರಿ 257 ಕೋಟಿ ರು ಮೌಲ್ಯದ ಅಕ್ರಮ ಆಸ್ತಿಯನ್ನು ಜಿಎಸ್​ಟಿ ಕೌನ್ಸಿಲ್ ವಶಪಡಿಸಿಕೊಂಡಿದೆ.

ಜೊತೆಗೆ ಆರೋಪಿ ಪಿಯೂಶ್ ಜೈನ್ ಎಂಬಾತನ್ನು ಬಂಧಿಸಲಾಗಿದೆ.

ಕಾನ್ಪುರದ ಪ್ರಖ್ಯಾತ ಗುಟಕಾ ಹಾಗೂ ಪರ್ಫ್ಯೂಮ್ ಉದ್ಯಮಿ ಪಿಯೂಶ್ ಜೈನ್​ ಎಂಬಾತನ ನಿವಾಸಕ್ಕೆ ಕಳೆದ ಶುಕ್ರವಾರ ಅಂದ್ರೆ ಡಿಸೆಂಬರ್ 24ರಂದು ಜಿಎಸ್​ಟಿ ಇಂಟೆಲಿಜೆನ್ಸ್ ಯೂನಿಟ್ ದಾಳಿ ನಡೆಸಿತ್ತು.. ಈ ದಾಳಿ ಇಂದೂ ಮುಂದುವರೆದಿದೆ.

ಕಂತೆ ಕಂತೆ ನೋಟುಗಳನ್ನು ಎಣಿಸಿಯೇ ಅಧಿಕಾರಿಗಳು ಸುಸ್ತಾಗಿದ್ದಾರೆ. ಈಗಾಗಲೇ 15 ಕೆಜಿ ಚಿನ್ನ, 50 ಕೇಜಿ ಬೆಳ್ಳಿ, 200 ಕೋಟಿಗೂ ಅಧಿಕ ಮೊತ್ತ ಕಂತೆ ಕಂತೆ ನೋಟುಗಳು ಸೇರಿದಂತೆ ಬರೋಬ್ಬರಿ 257 ಕೋಟಿ ಮೌಲ್ಯದ ಅಕ್ರಮ ಆಸ್ತಿಯನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಅಷ್ಟೇ ಅಲ್ಲ ಆರೋಪಿ ಪಿಯೂಶ್ ಜೈನ್​ನನ್ನು ಬಂಧಿಸಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!