February 19, 2026

Newsnap Kannada

The World at your finger tips!

sidda

Pic Credits : deccanherald.com

ರಾಯಣ್ಣ ಪ್ರತಿಮೆ ಧ್ವಂಸ ಮಾಡಿದ MES ಪುಂಡರನ್ನು ಗಡಿಪಾರು ಮಾಡಿ – ಸಿದ್ದು

Spread the love

ಸ್ವಾತಂತ್ರ ಹೋರಾಟಗಾರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಧ್ವಂಸ ಮಾಡಿದ ಎಂಇಎಸ್ ಪುಂಡರನ್ನು ಗಡಿಪಾರು ಮಾಡಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿಧಾನ ಸಭೆಯಲ್ಲಿ ಒತ್ತಾಯಿಸಿದರು

ಬೆಳಗಾವಿ ಅಧಿವೇಶನದಲ್ಲಿ ಮಾತಾಡಿದ ಸಿದ್ದರಾಮಯ್ಯ, ರಾಯಣ್ಣ ಪ್ರತಿಮೆಗೆ ಹಾನಿ ಉಂಟು ಮಾಡಿದವರು ಯಾರೇ ಆಗಲೀ ಗಡಿಪಾರು ಮಾಡಿ ಎಂದರು.

ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ. ಮಹಾಜನ್ ವರದಿ ಬಂದರೂ ಈ ಮರಾಠಿಗರು ಪುಂಡತನ ಬಿಟ್ಟಿಲ್ಲ. ಕನ್ನಡ ಬಾವುಟ ಕರ್ನಾಟಕದ ಹೆಮ್ಮೆ. ಬೇಕಂತಲೇ ಇವರು ಕನ್ನಡಿಗರ ಮೇಲೆ ಜಗಳ ಮಾಡೋಕೆ ಕಾಲು ಕರೆದುಕೊಂಡು ಬರುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡದ ಬಾವುಟ ಹಾಗೂ ಸಂಗೊಳ್ಳಿ ರಾಯಣ್ಣಗೆ ಅವಮಾನ ಮಾಡೋದು, ರಾಷ್ಟ್ರಕ್ಕೆ ಧಕ್ಕೆ ತರೋದು ಇವರ ಕೆಲಸ ಎಂದರು.

error: Content is protected !!