February 20, 2026

Newsnap Kannada

The World at your finger tips!

iswarya

ನಟಿ ಐಶ್ವರ್ಯಾ ರೈಗೆ ಇ.ಡಿ ಸಮನ್ಸ್

Spread the love

ಮಾಜಿ ವಿಶ್ವಸುಂದರಿ, ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್‍ಗೆ ವಿಚಾರಣೆಗೆ ಬರುವಂತೆ ಜಾರಿ ನಿರ್ದೇಶನಾಲಯ ( ಇ.ಡಿ )ಸಮನ್ ನೀಡಿದೆ.

ದೆಹಲಿಯಲ್ಲಿ ಇರುವ ಜಾರಿ ನಿರ್ದೇಶನಾಲಯದ ಕಚೇರಿಗೆ ಇಂದು ಹಾಜರಾಗುವಂತೆ ಐಶ್ವರ್ಯಾ ರೈ ಅವರಿಗೆ ಸಮನ್ಸ್ ನೀಡಲಾಗಿದೆ.

ಮುಂಬೈನಲ್ಲಿರುವ ಅವರ ಪ್ರತೀಕ್ಷಾ ನಿವಾಸಕ್ಕೆ ಸಮನ್ಸ್ ತಲುಪಿದೆ 15 ದಿನಗಳ ಒಳಗೆ ಪ್ರತಿಕ್ರಿಯಿಸುವಂತೆ ತಿಳಿಸಲಾಗಿದೆ.

2016ರಿಂದಲೂ ಪನಾಮಾ ಪೇಪರ್ಸ್ ಲೀಕ್ ಪ್ರಕರಣ ಸದ್ದು ಮಾಡುತ್ತಿದೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅವರು ಈ ಮೊದಲೇ ಜಾರಿ ನಿರ್ದೇಶನಾಲಯಕ್ಕೆ ಕೆಲವು ದಾಖಲೆ ಪತ್ರಗಳನ್ನು ಒಪ್ಪಿಸಿದ್ದರು.

ಪನಾಮಾ ಪೇಪರ್ಸ್ ಪ್ರಕರಣದಲ್ಲಿ ವಿದೇಶದಲ್ಲಿ ಹಣವನ್ನು ಸಂಗ್ರಹಿಸಿದ ಹಲವಾರು ಸೆಲೆಬ್ರಿಟಿಗಳ ಹೆಸರು ಕೆಳಿಬಂದಿದೆ.

error: Content is protected !!