ಕೊರೋನಾ ಇದ್ದರೂ ಅಭಿಮಾನಿಗಳನ್ನು ಭೇಟಿ ಮಾಡಿದ ಟ್ರಂಪ್

Team Newsnap
0 Min Read

ಕೊರೋನಾ ಸೋಂಕಿನ ನಡುವೆಯೂ ಅಮೇರಿಕ‌ದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಸ್ಪತ್ರೆಯಿಂದ ಕಾರಿನಲ್ಲಿ ಹೊರಬಂದು ಅಭಿಮಾನಿಗಳನ್ನು ಭೇಟಿ‌ಮಾಡಿದ್ದಾರೆ.

ಅಮೇರಿಕದ ಮಿಲಿಟರಿ‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಟ್ರಂಪ್ ಅಭಿಮಾನಿಗಳಿಗೆ ಭೇಟಿ ಮಾಡಿದ್ದರು.

ಇದೇ ವೇಳೆ ಟ್ವೀಟ್ ಮಾಡಿರುವ ಟ್ರಂಪ್ ‘ನಾನು ಎಲ್ಲ ಅಭಿಮಾನಿಗಳನ್ನು ಮತ್ತು ಬೆಂಬಲಿಗರನ್ನು ಪ್ರಶಂಸಿಸುತ್ತೇನೆ.‌ ಅವರು ನಮ್ಮ ದೇಶವನ್ನು ಪ್ರೀತಿಸುವ ಜೊತೆಗೆ, ನಾವು ಹೇಗೆ ದೇಶವನ್ನು ಅಭಿವೃದ್ಧಿಗೊಳಿಸುತ್ತೇವೆ ಎಂದು ಗಮನಿಸುತ್ತಿರುತ್ತಾರೆ’ ಎಂದು ಹೇಳಿದ್ದಾರೆ.

ಈ ಸಂದರ್ಭದಲ್ಲಿ‌ ಅವರು‌ ವಾಷಿಂಗ್‌ಟನ್ ಡಿಸಿ ಮೇರಿಲ್ಯಾಂಡ್ ಉಪನಗರ ಬೆಥೆಸ್ಡಾಕ್ಕೆ ಬುಲೆಟ್‌ ಪ್ರೂಫ್ ಕಾರಿನಲ್ಲಿ ಆಗಮಿಸಿ ಅಭಿಮಾನಿಗಳತ್ತ ಕೈ ಬೀಸಿದರು.

Share This Article
Leave a comment