ಮುಂಬೈ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಗೆಲುವು ದಾಖಲಿಸಿದೆ.
ಭಾರತದ ಮಾರಕ ಬೌಲಿಂಗ್ ದಾಳಿಗೆ ನಡುಗಿದ ಪ್ರವಾಸಿ ನ್ಯೂಜಿಲೆಂಡ್ ತಂಡ, ನಾಲ್ಕನೇ ದಿನದಾಟದ ಮೊದಲಾಧ೯ದಲ್ಲೇ ಸೋಲಿಗೆ ಶರಣಾಯಿತು.
ಆ ಮೂಲಕ ಹೆಚ್ಚು ರನ್ಗಳಿಂದ ಗೆದ್ದ ದಾಖಲೆ ಕೂಡ ಬರೆಯಿತು. ಅಲ್ಲದೆ, ಟೀಮ್ ಇಂಡಿಯಾ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು 1-0 ಅಂತರದಲ್ಲಿ ಕೈ ವಶ ಮಾಡಿಕೊಂಡಿತು.
5 ವಿಕೆಟ್ ನಷ್ಟಕ್ಕೆ 140ರನ್ಗಳೊಂದಿಗೆ 4ನೇ ದಿನದಾಟ ಆರಂಭಿಸಿದ ಕಿವೀಸ್ ಗೆಲುವಿಗೆ ಬೃಹತ್ 400 ರನ್ಗಳ ಅಗತ್ಯವಿತ್ತು.
ಆದರೆ ಭಾರತೀಯ ಬೌಲರ್ಗಳು ಅದಕ್ಕೆ ಅವಕಾಶ ಮಾಡಿಕೊಡಲಿಲ್ಲ. ದಿನದಾಟದ ಆರಂಭದಲ್ಲೇ ರಾಚಿನ್ ರವೀಂದ್ರ, ಕೈಲ್ ಜೆಮಿಸನ್, ಟಿಮ್ ಸೌಥಿಗೆ ಜಯಂತ್ ಯಾದವ್ ಗೇಟ್ ಪಾಸ್ ನೀಡಿದರು. ಅಷ್ಟರಲ್ಲಾಗಲೇ ಕಿವೀಸ್ 8 ವಿಕೆಟ್ ಕಳೆದುಕೊಂಡು ತಂಡದ ಮೇಲಿನ ಹಿಡಿತವನ್ನ ಸಂಪೂರ್ಣ ಕಳೆದುಕೊಂಡಿತು.
9ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸಾಮರ್ವಿಲ್ಲಿ ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿದರು. ಇನ್ನು 36 ರನ್ಗಳಿಸಿ ಇವತ್ತಿಗೆ ಕ್ರೀಸ್ ಕಾಯ್ದುಕೊಂಡಿದ್ದ ಹೆನ್ರಿ ನಿಕೋಲಸ್, ಕೆಲ ಕಾಲ ಹೋರಾಡಿದರು. ಕೊನೆಯಲ್ಲಿ ಅಶ್ವಿನ್ ಬೌಲಿಂಗ್ನಲ್ಲಿ ಸ್ಟಂಪ್ ಔಟ್ ಆದರು. ಅಶ್ವಿನ್ 4, ಜಯಂತ್ ಯಾದವ್ 4, ಅಕ್ಷರ್ ಪಟೇಲ್ 1 ವಿಕೆಟ್ ಕಬಳಿಸಿ ಮಿಂಚಿದರು.
- ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ ನಿರ್ಮಾಣದ ಪ್ರಸ್ತಾವನೆ ಸಲ್ಲಿಸಲು ಸಿಎಂ ಸಿದ್ದರಾಮಯ್ಯ ಸೂಚನೆ
- ಆಸ್ಟ್ರೇಲಿಯ ವಿರುದ್ಧ ಭರ್ಜರಿ ಗೆಲುವು: ಭಾರತ ತಂಡದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಕನಸು ಜೀವಂತ
- ನವೆಂಬರ್ 28: ರಾಜ್ಯದ ಅಭಿವೃದ್ಧಿಗೆ ಮಹತ್ವದ ಸಚಿವ ಸಂಪುಟ ಸಭೆ
- ಮುಡಾ ಹಗರಣಕ್ಕೆ ಬಿಗ್ ಟ್ವಿಸ್ಟ್: ಸರ್ಚ್ ವಾರೆಂಟ್ ಮುನ್ನವೇ ಕಡತಗಳ ಸ್ಥಳಾಂತರ ಮಾಡಿದ ಲೋಕಾಯುಕ್ತ ಡಿವೈಎಸ್ಪಿ!
- ಮುಡಾ ಹಗರಣ: ಲೋಕಾಯುಕ್ತ ಸಂಸ್ಥೆಯೇ ಅಪರಾಧಿ ಸ್ಥಾನದಲ್ಲಿದೆ- ಸ್ನೇಹಮಯಿ ಕೃಷ್ಣ ಆರೋಪ
More Stories
ಆಸ್ಟ್ರೇಲಿಯ ವಿರುದ್ಧ ಭರ್ಜರಿ ಗೆಲುವು: ಭಾರತ ತಂಡದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಕನಸು ಜೀವಂತ
104ರನ್ಗೆ ಆಸ್ಟ್ರೇಲಿಯಾ ಆಲೌಟ್ ,ಬುಮ್ರಾಗೆ 5 ವಿಕೆಟ್
ರೋಹಿತ್ ಶರ್ಮಾ ದಂಪತಿಗೆ ಗಂಡು ಮಗು ಜನನ