2022 ಏಪ್ರಿಲ್ 2 ರಿಂದ 15 ನೇ IPL ಟೂರ್ನಿ – ಚೆನ್ನೈನಲ್ಲಿ ಮೊದಲ ಪಂದ್ಯ ?

Team Newsnap
1 Min Read

15ನೇ ಸೀಸನ್​ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿ 2022 ರ ಏಪ್ರಿಲ್‌ 2ರಂದು ಚೆನ್ನೈ ನಲ್ಲಿ ಆರಂಭವಾಗುವ ಸಾಧ್ಯತೆ ಇದೆ.

ಮುಂದಿನ ವರ್ಷ ಐಪಿಎಲ್​​ ಟ್ರೋಫಿಗಾಗಿ ಒಟ್ಟು 10 ತಂಡಗಳು ಪೈಪೋಟಿ ನಡೆಸಲಿವೆ.

ಐಪಿಎಲ್​​ ಪಂದ್ಯಗಳ ಪಟ್ಟಿಯನ್ನು ಇನ್ನೂ ಅಂತಿಮಗೊಳಿಸಿಲ್ಲ. ಬಿಸಿಸಿಐ, ಏಪ್ರಿಲ್​​ 2ರಂದು ಚೆನ್ನೈಯಲ್ಲಿ ಟೂರ್ನಿ ಆರಂಭಿಸಲು ಚಿಂತನೆ ನಡೆಸಿದೆ.

ಈ ಕುರಿತು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಪಾಲುದಾರರಿಗೆ ಮಾಹಿತಿ ನೀಡಿರುವುದಾಗಿ ಗೊತ್ತಾಗಿದೆ

60 ದಿನಗಳಲ್ಲಿ ಒಟ್ಟು 74 ಪಂದ್ಯಗಳು ಆಯೋಜಿಸಲು ಬಿಸಿಸಿಐ ಆಂತರಿಕ ಸಭೆಯಲ್ಲಿ ಚರ್ಚೆ ಮಾಡಲಾಗಿದೆ,
ಈ ಲೆಕ್ಕಾಚಾರದಂತೆ ಜೂನ್ ಮೊದಲ ವಾರಾಂತ್ಯದಲ್ಲಿ ಫೈನಲ್ ಪಂದ್ಯ ನಡೆಯುವ ನಿರೀಕ್ಷೆ ಇದೆ.

Share This Article
Leave a comment