ಹಿರಿಯ ನಟ ಶಿವರಾಂ ಆರೋಗ್ಯ ಮತ್ತಷ್ಟು ಕ್ಷೀಣಿಸಿದೆ ವೆಂಟಿಲೇಟರ್ ಮೂಲಕ ಉಸಿರಾಡುತ್ತಿದ್ದಾರೆ ಎಂದು ಬೆಂಗಳೂರಿನ ಹೊಸಕೆರೆಹಳ್ಳಿಯ ಪ್ರಶಾಂತ್ ಆಸ್ಪತ್ರೆಯ ವೈದ್ಯಡಾ.ಎಸ್.ಎನ್ ಮೋಹನ್ ಹೇಳಿದ್ದಾರೆ.
ಮಾಧ್ಯಮಗಳಿಗೆ ಮಾಹಿತಿ ನೀಡಿ ಮಾತನಾಡಿದ ಸುದ್ದಿಗಾರರೊಂದಿಗೆ ಮಾತನಾಡಿ ವೈದ್ಯ ಮೋಹನ್ , ಶಿವರಾಮ್ ಅವರು ನಿನ್ನೆ ಹೇಗಿದ್ದರೋ ಅದೇ ರೀತಿ ಇದ್ದಾರೆ. ನಿನ್ನೆ ಗಿಂತ ಇಂದು ಶೇ.5 ಬಿಪಿ ಸಪೋರ್ಟ್ ಜಾಸ್ತಿಯಾಗಿದೆ ಎಂದರು.
ಕಂಡಿಷನ್ ನಿನ್ನೆಗಿಂತ ಇಂದು ಶೇ.6 ಕಡಿಮೆ ಆಗಿದೆ. ಸದ್ಯ ವೆಂಟಿ ಲೇಟರ್ ಮೂಲಕ ಉಸಿರಾಟ ಮಾಡುತ್ತಿದ್ದಾರೆ. ಬ್ರೈನ್ ಕೂಡು ಇಫ್ರುಮೆಂಟ್ ಕಂಡಿಲ್ಲ. ನಿನ್ನೆ ಇದ್ದಂತೆ ಇದೆ. ಬ್ರೈನ್ ಅಲ್ಲಿ ಇನ್ನು ಊತ ಜಾಸ್ತಿ ಇದೆ, ಯಾವುದೇ ಚೇತರಿಕೆ ಇಲ್ಲ. ನಾಳೆ ಕೂಡ ಎಂಆರ್ಐ ಸ್ಕ್ಯಾನ್ ಮಾಡಿ ಮುಂದಿನ ನಿರ್ಧಾರ ತೆಗೆದು ಕೊಳ್ತೀವಿ. ಬ್ರೈನ್ ಬಿಟ್ಟು ಉಳಿದೆಲ್ಲ ಅಂಗಾಗಗಳು ಕಾರ್ಯನಿರ್ವಹಿಸ್ತಿವೆ ಎಂದು ತಿಳಿಸಿದರು.
ನಾಳೆ ಅವರು ಸ್ಥಿತಿಯಲ್ಲಿ ಶೇ.1 ರಷ್ಟು ಚೇತರಿಕೆ ಕಂಡು ಅವಕಾಶ ಇದ್ದರೂ ಶಸ್ತ್ರ ಚಿಕಿತ್ಸೆ ಮಾಡೋ ಬಗ್ಗೆ ಯೋಚನೆ ಮಾಡ್ತೇವೆ. ನಾಳೆ ಬೆಳಗ್ಗೆ 10 ವೇಳೆ ಮುಂದಿನ ಮಾಹಿತಿ ನೀಡುತ್ತೇನೆ. ಮೆದುಳಿನ ಊತ ಕಡಿಮೆಯಾದರೇ ಮೆದುಳಿನ ಸಮಸ್ಯೆ ಕಡಿಮೆಯಾಗೋದಕ್ಕೆ ಅವಕಾಶ ಇರುತ್ತದೆ ಎಂಬ ಭರವಸೆ ಮಾತುಗಳನ್ನು ಹೇಳಿದರು.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್

- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ

- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು

- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ

- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ

- ಕಾಂಗ್ರೆಸ್ ಸಚಿವರಿಗೆ ರನ್ಯಾ ರಾವ್ ಕರೆ: ಶಾಸಕ ಭರತ್ ಶೆಟ್ಟಿಯಿಂದ ಗಂಭೀರ ಆರೋಪ




More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಕನ್ನಡ ಸಿನಿಮಾ ಕ್ಷೇತ್ರಕ್ಕೆ ಉದ್ಯಮ ಸ್ಥಾನಮಾನ
ರಾಜ್ಯ ಸರ್ಕಾರದಿಂದ ಸಿನಿಮಾ ಟಿಕೆಟ್ ದರ ನಿಯಂತ್ರಣದ ಚಿಂತನೆ: ಗೃಹ ಸಚಿವ ಜಿ. ಪರಮೇಶ್ವರ್