ತಾನು ಎಸಿಬಿ ಅಧಿಕಾರಿ ಎಂದು ಹೇಳಿಕೊಂಡು ರಾಣೆಬೆನ್ನೂರು ನಗರಸಭೆ ಅಧಿಕಾರಿಗಳನ್ನು ವಂಚನೆ ಮಾಡಲು ಹೋಗಿ ಬೆಂಗಳೂರಿನ ವ್ಯಕ್ತಿಯೊಬ್ಬ ಪೊಲೀಸರ ಅತಿಥಿಯಾಗಿದ್ದಾನೆ
ಬೆಂಗಳೂರಿನ ಹಲಸೂರು ನಿವಾಸಿ ಜಾನಮೇಕ್ ಅಲಿಯಾಸ್ ಜಾನ್ ಮ್ಯಾಥ್ಯೂ ಪೊಲೀಸರ ಕೈಗೆ ಸಿಕ್ಕು ಜೈಲು ಸೇರಿದ ನಕಲಿ ಎಸಿಬಿ ಅಧಿಕಾರಿ.
ರಾಣೆಬೆನ್ನೂರು ನಗರಸಭೆಯ ಆಯುಕ್ತ ಉದಯಕುಮಾರ್ ತಳವಾರರ ಬಳಿ ಜಾನಮೇಕ್ ಬಂದಿದ್ದಾನೆ.
ಈ ವೇಳೆ ನಗರಸಭೆ ಕಚೇರಿಯಲ್ಲಿ ಎಂಜನಿಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಮಹೇಶ್ ಗುಡಿಸಲಮನಿ ಹೆಸರು ಎಸಿಬಿ ಅಧಿಕಾರಿಗಳ ದಾಳಿ ಮಾಡುವ ಲಿಸ್ಟ್‍ನಲ್ಲಿದೆ ಎಂದು ಹೆದರಿಸಿದ್ದಾನೆ.
ಆಗ ಜಾನಮೇಕ್ ನೀವು ಹಣ ನೀಡಿದರೆ ನಮ್ಮ ಮೇಲಿನ ಎಸಿಬಿ ಅಧಿಕಾರಿಗಳಿಗೆ ಹೇಳಿ ಅವರ ಹೆಸರನ್ನು ಆ ಲಿಸ್ಟ್‍ನಿಂದ ತೆಗೆಸುತ್ತೇನೆ ಎಂದು ಮೋಸದಿಂದ ಹಣ ಪಡೆಯಲು ಪ್ರಯತ್ನಿಸುತ್ತಾನೆ.
ಆಗ ಉದಯಕುಮಾರ್ ಅವರು ಜಾನಮೇಕ್ ನಕಲಿ ಎಸಿಬಿ ಅಧಿಕಾರಿ ಎಂಬುದನ್ನು ಅರಿತು ತಕ್ಷಣವೇ ರಾಣೆಬೆನ್ನೂರು ನಗರ ಠಾಣೆಯ ಪೊಲೀಸರ ಗಮನಕ್ಕೆ ತಂದು ಪ್ರಕರಣ ದಾಖಲಿಸಿದ್ದಾರೆ.
ನಕಲಿ ಎಸಿಬಿ ಅಧಿಕಾರಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಕ್ಷಣ ಕಾರ್ಯಾಚರಣೆ ನಡೆಸಿ ಜಾನಮೇಕ್ ನನ್ನು ಬಂಧಿಸಿದ್ದಾರೆ.
ಬಂಧಿತನ ಮೇಲೆ ಐಪಿಸಿ ಸೆಕ್ಷನ್ 385, 418, 419, 420, 511 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು