ಪ್ರೇಯಸಿಗಾಗಿ ಮತ್ತು ತಮ್ಮ ಶೋಕಿಗಾಗಿ ಆರು ಮಂದಿ ಕಳ್ಳರ ಗ್ಯಾಂಗ್ ವೊಂದು 850 ಕ್ಕೂ ಹೆಚ್ಚು ಮೊಬೈಲ್ ಗಳನ್ನು ಕದ್ದು ಈಗ ಪೋಲಿಸರ ಬಲೆಗೆ ಬಿದ್ದಿದ್ದಾರೆ.
ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸುವ ಮೂಲಕ ಹಳೆಯ ಪ್ರಕರಣಕ್ಕೆ ಮಾದನಾಯಕನಹಳ್ಳಿ ಪೊಲೀಸರು ನಾಂದಿಯಾಡಿದ್ದಾರೆ.
ಬೆಂಗಳೂರು ಹೊರವಲಯ ನೆಲಮಂಗಲ ಉಪವಿಭಾಗ ಮಾದನಾಯಕನಹಳ್ಳಿ ಪೊಲೀಸರು ಬರೋಬ್ಬರಿ 60 ಲಕ್ಷ ಮೌಲ್ಯದ ಮೊಬೈಲ್ ಫೋನ್ ವಶಕ್ಕೆ ಪಡೆದಿದ್ದಾರೆ.
ಆರೋಪಿಗಳಾದ ಯೋಗೇಶ್, ಸಂದೀಪ್, ವಾಸೀಂ, ಹರಿ, ರವಿಕಿರಣ್ ಭವೇಶ್ ಜೈನ್ ರನ್ನು ಬಂಧಿಸಿ ನ್ಯಾಯಾಲಯದ ವಶಕ್ಕೆ ನೀಡಲಾಗಿದೆ.
ಈ ಆರೋಪಿಗಳು ಶೋಕಿಗಾಗಿ ಹಾಗೂ ಪ್ರೇಯಸಿಯನ್ನು ಖುಷಿಪಡಿಸಲು ಈ ಖದೀಮರು ಕಳ್ಳತನ ಮಾರ್ಗ ಹಿಡಿದಿದ್ದರಂತೆ.
ಅಲ್ಲದೆ ಕದ್ದ ಮೊಬೈಲ್ ಗಳನ್ನು ಸಾಕಷ್ಟು ತಿಂಗಳ ಕಾಲ ಮಾರಾಟ ಮಾಡದೆ ಒಂದೆಡೆ ಶೇಕರಿಸಿ ನಂತರ ಪೊಲೀಸರ ಕಣ್ ತಪ್ಪಿಸಿ ಮಾರಾಟ ಮಾಡುವ ವೇಳೆ ಒಂದು ಮೊಬೈಲ್ ಸಿಮ್ ನ ಸುಳಿವು ಆಧರಿಸಿ ಪೊಲೀಸರು ಆರೋಪಿಗಳನ್ನು ಖೆಡ್ಡಾಕ್ಕೆ ಕೆಡವಿದ್ದಾರೆ.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ